Advertisement

ಕುಡಿಯುವ ನೀರಿನ‌ ಟ್ಯಾಂಕ್ ಪಕ್ಕದಲ್ಲಿ ಶೌಚಾಲಯ ನಿರ್ಮಾಣಕ್ಕೆ ಜನತೆ ಆಕ್ಷೇಪ

03:52 PM Jul 18, 2020 | keerthan |

ಗಂಗಾವತಿ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನೀರಿನ ಟ್ಯಾಂಕ್ ಮತ್ತು ವಾಲ್ ಗಳ ಹತ್ತಿರ ನಗರಸಭೆ ಅಮೃತ ಸಿಟಿ ಯೋಜನೆಯಡಿ ಸುಲಭ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

Advertisement

ನಗರದಲ್ಲಿ ಶೌಚಾಲಯಗಳ ಕೊರತೆ ನೀಗಿಸಲು ಖಾಸಗಿ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ. ಜೂನಿಯರ್ ಕಾಲೇಜ್ ಮೈದಾನದ ಈಶಾನ್ಯ ಭಾಗದಲ್ಲಿ ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ. ಈಗಾಗಲೇ ಜೂನಿಯರ್ ಕಾಲೇಜ್ ಮೈದಾನದಲ್ಲಿ ಹಲವು ಕಟ್ಟಡಗಳು ನಿರ್ಮಾಣವಾಗಿದ್ದು ಇದೀಗ ಶೌಚಾಲಯ ನಿರ್ಮಿಸಲಾಗುತ್ತಿದೆ.

ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮುಖ್ಯ ನಾಲ್ಕು ವಾಲ್ ಗಳಿದ್ದು ಇವುಗಳ ಮೇಲೆ ಶೌಚಾಲಯ ನಿರ್ಮಿಸಲಾಗುತ್ತಿದ್ದು ನಗರದ ಜನತೆಯ ಆರೋಗ್ಯದ ಮೇಲೆ ಪರಿಣಾಮವಾಗಲಿದ್ದು ಸುಲಭ ಶೌಚಾಲಯ ನಿರ್ಮಾಣ ಕಾರ್ಯ ನಿಲ್ಲಿಸಿ ನಗರಸಭೆ ಮುಂದಿನ ಜಾಗದಲ್ಲಿ ಶೌಚಾಲಯ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಚಾಲಕ ಹನುಮಂತ ಮೂಳೆ ಒತ್ತಾಯಿಸಿದ್ದಾರೆ.

ಪರಿಶೀಲನೆ: ನಗರದಲ್ಲಿ ಶೌಚಾಲಯಗಳ ಕೊರತೆಯಿದ್ದು ಸ್ವಯಂ ಸೇವಾಸಂಸ್ಥೆಗಳ ಸಹಕಾರದಲ್ಲಿ ಸುಲಭ ಶೌಚಾಲಯ ನಿರ್ಮಿಸಲಾಗುತ್ತಿದೆ. ಗಂಗಾವತಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ನೀರಿನ ವಾಲ್ ಗಳ ಸುಲಭ ಶೌಚಾಲಯ ನಿರ್ಮಾಣದ ಕುರಿತು ಸಾರ್ವಜನಿಕರು ಆಕ್ಷೇಪವಿದ್ದು ಪರಿಶೀಲನೆ ಮಾಡಲಾಗುತ್ತದೆ ಜಿಲ್ಲಾ ನಗರ ಯೋಜನ ಕೋಶದ ನಿರ್ದೇಶಕ ಸಿದ್ದರಾಮೇಶ ಉದಯವಾಣಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next