ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೋವಿಡ್ 19 ಸೋಂಕಿತರು 3 ಸಾವಿರ ಗಡಿ ದಾಟಿದ್ದು, ಜನಸಂಖ್ಯೆಯ ಶೇ.1 ಭಾಗ ಸೋಂಕಿತರಾಗಿದ್ದಾರೆ. ಆದರೆ ಲಾಕ್‌ಡೌನ್ ತೆರವಾದ ಹೊಸತರಲ್ಲಿ ಇದ್ದ ಕೋವಿಡ್‌ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ ಎನ್ನುವ ದೂರುಗಳುಕೇಳಿ ಬರುತ್ತಿವೆ.
ಬಸ್‌ಗಳಲ್ಲಿ ಪಾಲನೆಯಾಗದ ನಿಯಮಗಳು : ಕೋವಿಡ್ 19 ಅನ್‌ಲಾಕ್ ಆಗಿ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಹೆಸರು, ವಿಳಾಸ ಮೊಬೈಲ್ ಸಂಖ್ಯೆ ವಿವರಗಳನ್ನು ಪಡೆಯಲಾಗುತ್ತಿತ್ತು. ಬಸ್ ಹತ್ತುವಾಗ ಕೈಗೆ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಬಸ್‌ನಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿತ್ತು. ಆದರೆ ಈಗ ಮಾಸ್ಕ್ ಕಡ್ಡಾಯಗೊಳಿಸಿರುವುದನ್ನು ಬಿಟ್ಟರೆಯಾವ ನಿಯಮಗಳು ಪಾಲನೆಯಾಗುತ್ತಿಲ್ಲ. ಬಸ್‌ಗಳ ಸಂಖ್ಯೆ ಕಡಿಮೆಯಾಗಿ, ಪ್ರಯಾಣಿಕರು ಹೆಚ್ಚಾದಾಗ, ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದೇ ಬಸ್ ಹತ್ತುವ ದೃಶ್ಯಗಳು ಕಂಡು ಬರುತ್ತಿವೆ.
ಇನ್ನು ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿಯೂ, ಥರ್ಮಲ್ ಸ್ಕ್ರೀನಿಂಗ್ ಮಾಡುವುದು ನಿಂತಿದೆ. ಸ್ಯಾನಿಟೈಸರ್ ಸಹ ಕಡ್ಡಾಯವಾಗಿ ಹಾಕುತ್ತಿಲ್ಲ.ಮಾರುಕಟ್ಟೆ ಪ್ರದೇಶದಲ್ಲಿಯೂ ಸಹ ಜನಸಂದಣಿ ಹೆಚ್ಚಾದಾಗ ಅಂತರ ಕಾಪಾಡಿಕೊಳ್ಳದೇ ವ್ಯವಹರಿಸುವುದು ಸಾಮಾನ್ಯವಾಗಿದೆ. ಬಳಕೆಯಾಗದ ಮಾಸ್ಕ್: ಈ ನಡುವೆ ಮಾರುಕಟ್ಟೆ ಪ್ರದೇಶದಲ್ಲಿ ಹಲವು ಮಂದಿ ವ್ಯಾಪಾರಿಗಳ ಕುತ್ತಿಗೆಯ ಬಳಿ ಮಾಸ್ಕ್ ಇರುತ್ತದೆ. ಮಾಸ್ಕ್ಧರಿಸಿದ್ದರೂ ಮೂಗು ಬಾಯಿ ಮುಚ್ಚಿಕೊಳ್ಳುವುದಿಲ್ಲ. ತರಕಾರಿಗಳ ಬೆಲೆ ಕೂಗುವಾಗ ಹಾಗೂ ಗ್ರಾಹಕರೊಡನೆ ವ್ಯವಹರಿಸುವಾಗ ಮಾಸ್ಕ್ ಕುತ್ತಿಗೆ ಬಳಿ ಬರುತ್ತದೆ.ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ : ತಾಲೂಕಿನಲ್ಲಿ ದಿನೇ ದಿನೇ ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರಿಗೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಹಾಗೂ ಡಿವೈಎಸ್‌ಪಿ ಟಿ.ರಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
250 ರೂ. ವಿಧಿಸುತ್ತಿದ್ದ ದಂಡ ರಾಜ್ಯ ಸರ್ಕಾರದ ಆದೇಶದಂತೆ ಗುರುವಾರದಿಂದ 100 ರೂ ವಿಧಿಸಲಾಗುತ್ತಿದೆ. ನಗರದಬಸ್ ನಿಲ್ದಾಣ,ಡಿ.ಕ್ರಾಸ್ ವೃತ್ತ, ಬಸವ ಭವನ ವೃತ್ತ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೇಓಡಾಡುವ ನಾಗರಿಕರಿಗೆ ದಂಡ ವಿಧಿಸಲಾಗುತ್ತಿದೆ. ವಾಹನಗಳಲ್ಲಿಸಂಚರಿಸುವವರು ಮಾಸ್ಕ್ ಇಟ್ಟುಕೊಂಡಿರಬೇಕು.ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ಧರಿಸಬೇಕು ಎಂದು ಎಚ್ಚರಿಕೆ ನೀಡಲಾಗುತ್ತಿದೆ.ನಗರಸಭೆ ವತಿಯಿಂದ ಏಪ್ರಿಲ್‌ನಿಂದ ಆಗಸ್ಟ್ ವರೆಗೆ53,850 ರೂ. ಸೆಪ್ಟೆಂಬರ್‌ನಲ್ಲಿ 25,800 ರೂ.ಹಾಗೂ ಅಕ್ಟೋಬರ್ 8ರ ವರೆಗೆ 20 ಸಾವಿರ ರೂ.ಸೇರಿ 1ಲಕ್ಷದ ವರೆಗೆ ದಂಡ ವಸೂಲಿ ಮಾಡಲಾಗಿದೆ.
ಕೋವಿಡ್ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಹಾಗೂಸಾಮಾಜಿಕ ಅಂತರಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ನಿಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಕೊವಿಡ್ 19 ಮಾರ್ಗ ಸೂಚಿಗಳನ್ನು ಪಾಲಿಸಬೇಕಿದೆ.
–ರಮೇಶ್ ಎಸ್.ಸುಣಗಾರ್, ನಗರಸಭೆ ಪೌರಾಯುಕ್ತರು