Advertisement

ನೀರಿನ ಕಷ್ಟ ಅವಿಭಜಿತ ಜಿಲ್ಲೆ ಜನರಿಗೆ ಗೊತ್ತು

07:37 AM Mar 23, 2019 | Team Udayavani |

ಕೋಲಾರ: ನೀರು ಅಮೂಲ್ಯ ಜೀವದ್ರವ್ಯ ಆಗಿದ್ದು, ಅದರ ಸಂರಕ್ಷಣೆ ಮತ್ತು ಮಿತ ಬಳಕೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಸರ್ವಜ್ಞ ಉದ್ಯಾನ ವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ಜಿಪಂ, ವಕೀಲರ ಸಂಘ, ಆರೋಗ್ಯ ಇಲಾಖೆ, ಜಾಗೃತಿ ಕ್ಯಾನ್‌ ಸಂಸ್ಥೆ, ಗೋಪ್ಲಾಗ್‌, ನಗರಸಭೆ ಮತ್ತು ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರಿನ ಕಷ್ಟ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ಬಿಟ್ಟು ಬೇರೆಯವರಿಗೆ ಗೊತ್ತಿಲ್ಲ. ಕಳೆದ 15 ವರ್ಷದಲ್ಲಿ ಮೂರು ವರ್ಷ ಮಳೆಯಾಗಿದ್ದು ಬಿಟ್ಟರೆ ಉಳಿದ ವರ್ಷಗಳು ಸತತವಾಗಿ ಬರಗಾಲವನ್ನು ಎದುರಿಸುತ್ತಾ ಬಂದಿದೆ. ದಿನೇ ದಿನೆ ನೀರಿನ ಮಟ್ಟ ಕುಸಿಯುತ್ತಾ ಮತ್ತಷ್ಟು ತೊಂದರೆಗಳನ್ನು ಅನುಭವಿಸುವತಾಂಗಿದೆ ಎಂದು ಹೇಳಿದರು.

ನೀರು ಉಳಿಸಿ: ಜಿಲ್ಲೆಯಲ್ಲಿ 4448 ಕೆರೆಗಳು ಇದ್ದು, ಇವುಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಪ್ರಮಾಣದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷ ಸಂಗ್ರಹಿಸಿದ ನೀರನ್ನು ಹನಿ ನೀರಾವರಿ ಯೋಜನೆಯ ಮೂಲಕ ನೀರನ್ನು ಉಳಿಸುವ ಜೊತೆಗೆ ಜನರಿಗೆ ನೀರಿನ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

ಹನಿ ನೀರು ಗಡಿದಾಟದಿರಲಿ: ಜಿಪಂ ಸಿಇಒ ಜಿ.ಜಗದೀಶ್‌ ಮಾತನಾಡಿ, ಮುಂದಿನ ಪೀಳಿಗೆಗೆ ಬರಡುಭೂಮಿಯನ್ನು ಕೊಡದೆ ಕೆರೆ ಕಟ್ಟೆ ಕಾಲುವೆಗಳಲ್ಲಿ ನೀರು ಹರಿಯುವಂತಾ ವಾತಾವರಣ ತರ ಬೇಕಾಗಿದೆ ಮಳೆಗಾಲದಲ್ಲಿ ಬಿದ್ದ ನೀರು ಒಂದು ಹನಿ  ಸಹ ಕೋಲಾರ ಜಿಲ್ಲೆಯ ಗಡಿದಾಟಿ ಹೋಗದಂತೆ ನೋಡಿಕೊಂಡು ಮೇಲಕ್ಕೆ ನೀರು ತರುವಂತಾಗಬೇಕು ಎಂದರು.

Advertisement

ಆತಂಕ ಜೀವನ ನಡೆಸಬೇಕಾಗುತ್ತೆ: ಇಸ್ರೇಲ್‌ ದೇಶದಲ್ಲಿ 250 ಮೀಟರ್‌, ನಮ್ಮಲ್ಲಿ 750 ಮೀಟರ್‌ ಮಳೆ ಬರುತ್ತದೆ. ಹೀಗಿದ್ದೂ ಆ ದೇಶದಲ್ಲಿ ನೀರಿನ ಸಂರಕ್ಷ ಣೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ನಾವು ನೀರು ಪೋಲು ಮಾಡುತ್ತೇವೆ. ಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ಆತಂಕದಲ್ಲಿ ಜೀವನ ಸಾಗಿಸಬೇಕಾಗುತ್ತದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಗೆ ಸಹಕರಿಸಿ: ನೀರಿನ ಸಂರಕ್ಷಣೆಗೆ ಪ್ರತಿ ವರ್ಷ ನರೇಗಾ ಯೋಜನೆಯಲ್ಲಿ ಸಾವಿರ ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ.  ಪಾಳುಬಿದ್ದ ಗೋಕುಂಟೆ, ಕಲ್ಯಾಣಿಗಳನ್ನು ಸ್ವಚ್ಛ ಮಾಡುವುದು, ಕೋಟಿ ನಾಟಿ ಯೋಜನೆಯಲ್ಲಿ ಗಿಡ ನೆಡುವುದು, ಬೆಟ್ಟ ಗುಡ್ಡ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡುವ ಕೆಲಸಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ತಲೆಗೆ ಒಂದು ಗಿಡ ನೆಡಿ: ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್‌ ಮಾತನಾಡಿ, ಭೂಮಿಯಲ್ಲಿ ಶೇ.97 ಪ್ರಮಾಣದ ನೀರು ಇದ್ದರೂ ಶೇ 0.77 ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಗಾಳಿ ಮತ್ತು ನೀರನ್ನು ಉತ್ಪಾದಿಸಲು ಪ್ರತಿಯೊಂದು ತಲೆಗೆ ಒಂದು ಗಿಡವನ್ನು ನೆಡಬೇಕಾಗಿದೆ ಎಂದು ಹೇಳಿದರು.

ಜಾಥಾ, ಗಿಡ ವಿತರಣೆ: ಇದಕ್ಕೂ ಮುಂಚೆ ನಗರದ ಟೇಕಲ್‌ ವೃತ್ತದಲ್ಲಿ ಇರುವ ಕಲ್ಯಾಣಿ ಸ್ವಚ್ಛ ಗೊಳಿಸಿ ನಂತರ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಪ್ರವಾಸಿ ಮಂದಿರದಿಂದ ಜಾಥಾ ಮೂಲಕ ಮೆರವಣಿಗೆಯಲ್ಲಿ ಸರ್ವಜ್ಞ ಉದ್ಯಾನದಲ್ಲಿ ಗಿಡ ನೀಡಲಾಯಿತು.

ಅಪರ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ, ಜಿಲ್ಲಾ ಪೋಲಿಸ್‌ ವರಿಷ್ಠಾ ಧಿಕಾರಿ ಡಾ.ರೋಹಿಣಿ ಕಟೋಚ್‌ ಸೆಪೆಟ್‌, ನಗರಸಭೆ ಆಯುಕ್ತ ಮಹೇಂದ್ರ ಕುಮಾರ್‌, ಜಾಗೃತಿ ಸಂಸ್ಥೆಯ ಕೆ.ಧನರಾಜ್‌, ಮಂಜುಳಾ,ಭೀಮರಾವ್‌, ಎಸ್‌ಎನ್‌ಆರ್‌ ಪ್ರಸನ್ನ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next