Advertisement

ಜನರ ನಿರೀಕ್ಷೆ ಈಡೇರಿಸುವೆ

05:11 PM May 25, 2019 | Team Udayavani |

ರಾಮನಗರ: ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡು ಮತದಾರರು ತಮಗೆ ಮತ್ತೂಮ್ಮೆ ಆಶೀರ್ವದಿಸಿದ್ದು, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಮತದಾ ರರ ವಿಶ್ವಾಸ ಉಳಿಸಿಕೊಳ್ಳುವುದಾಗಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

Advertisement

ನಗರದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ ನಡದ ಮತ ಎಣಿಕೆಗೆ ಆಗಮಿಸಿದ್ದ ವೇಳೆ ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಟ್ಟು ಮಾತನಾಡಿದರು.

ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ರಾಜ್ಯದಲ್ಲಿ ಮಿತ್ರ ಪಕ್ಷಗಳ ವೈಫ‌ಲ್ಯ, ಮಿತ್ರ ಪಕ್ಷಗಳ ನೈತಿಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈಗ ಪ್ರತಿಕ್ರಿಯಿಸುವುದಿಲ್ಲ.ರಾಜ್ಯದಲ್ಲಿನ ಲೋಕಸಭೆ ಚುನಾವಣಾ ಫ‌ಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿ ಣಾಮ ಬೀರೋದಿಲ್ಲ ಎಂದರು. ಆದರೆ ಫ‌ಲಿ ತಾಂಶದ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಆಪರೇಷನ್‌ ಹಸ್ತ ನಡೆಯುತ್ತದೆಯೆ ಎಂಬ ಪ್ರಶ್ನೆಗೆ ಈಗ ಅದರ ಬಗ್ಗೆ ಚರ್ಚೆ ಬೇಡ, ಬರಗಾಲ ಮತ್ತು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿ, ಕೊಟ್ಟ ಭರವಸೆಗಳನ್ನು ಈಡೇರಿಸಬೇಕಾಗಿದೆ ಎಂದರು.

ಕ್ಷೇತ್ರದಲ್ಲಿ ಮೈತ್ರಿ ಯಶಸ್ವಿಯಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೌದು. ಯಶಸ್ವಿಯಾಗಿದೆ. ಇದಕ್ಕೆ ತಮ್ಮ ಗೆಲು ವಿನ ಪ್ರಮಾಣವೇ ಸಾಕ್ಷಿ ಎಂದರು. ಕುಮಾರ ಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಎ.ಮಂಜು ಅವರ ಸಹಕಾರ ದಿಂದಲೇ ಈ ಪ್ರಮಾಣದ ಮತಗಳು ಬಂದಿವೆ ಎಂದರು.

ಕಾಂಗ್ರೆಸ್‌ ಪಕ್ಷದ ಸೋಲಿಗೆ ರಾಷ್ಟ್ರೀಯ ನಾಯಕತ್ವದ ವೈಫ‌ಲ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಚುನಾವಣೆ ವೇಳೆ ಜನರ ಭಾವನೆಗಳು ಬೇರೆ ಇತ್ತು. ಅಭಿವೃದ್ದಿ ಪರ ಜನ ನಿಲ್ಲಲಿಲ್ಲ. ರಾಷ್ಟ್ರೀಯ ನಾಯಕತ್ವದ ವೈಫ‌ಲ್ಯವಿಲ್ಲ ಎಂದರು. ರಾಜ್ಯದಲ್ಲಿ ಜೆಡಿಎಸ್‌ ನೆಲಕಚ್ಚಿದೆ ಅಂತ ಹೇಳ್ಳೋಕೆ ಆಗೋಲ್ಲ ಎಂದರು. ಗ್ರಾಮಪಂಚಾಯ್ತಿ, ಸ್ಥಳೀಯ ಸಂಸ್ಥೆಗಳು, ವಿಧಾನಸಭಾ ಚುನವಣೆಗಳು ಸೇರಿದಂತೆ ಎಲ್ಲಾ ಚುನಾವಣೆಗಳು ವಿಭಿನ್ನ ವಿಚಾರಗಳ ಮೇಲೆ ನಡೆಯುತ್ತವೆ ಎಂದರು.

Advertisement

ಗೆದ್ದ ಏಕೈಕ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ:

ಬೆಂಗಳೂರು ಗ್ರಾಮಾಂತರ ಲೋಕಸಭಾ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಮತ್ತು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆ ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಮೂರು ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮೋದಿ ಅಲೆಯಿಂದ ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿಗಳು ಧೂಳಿಪಟವಾಗಿದ್ದರೂ ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಗೆಲುವು ಸಾಧಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಮಾಗಡಿ ಯಲ್ಲಿ ನಿರೀಕ್ಷಿತ ಮತ ಬಿದ್ದಿಲ್ಲ. ಮೊದಲ ಸುತ್ತಿನ ಏಣಿಕೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೆ ಹೆಚ್ಚಿನ ಮತ ಬಿದ್ದಿದೆ ಎಂದು ಮಾಹಿತಿ ಹೊರಬೀಳುತ್ತಿ ದ್ದಂತೆಯೇ ಮೈತ್ರಿ ನಾಯಕರ ಎದೆಯಲ್ಲಿ ಢವಢವ ಶುರವಾಗಿತ್ತಂತೆ. ಬಳಿಕ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಮುನ್ನಡೆ ಪಡೆದು ಮತಗಳ ಅಂತರ ಹೆಚ್ಚಾಗುತ್ತಿದ್ದಂತೆ ನಾಯಕರು ನಿಟ್ಟಿಸಿರು ಬಿಟ್ಟರು ಎನ್ನಲಾಗದೆ. ಕೊನೆಗೂ 2.4 ಲಕ್ಷದ ಅಂತರದಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಜಯಗಳಿಸಿದ್ದಾರೆ. ಸಂಸದರಾಗಿದ್ದ ಡಿ.ಕೆ.ಸುರೇಶ್‌ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿ ರುವ ಸಾಧನೆ ಅವರನ್ನು ಮತ್ತೆ ಸಂಸದರ ನ್ನಾಗಿಸಿದೆ. ರಾಜ್ಯದಲ್ಲಿ ಏಕೈಕ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಸಂಸದ ಡಿ.ಕೆ.ಸುರೇಶ್‌ ಮೋದಿ ಅಲೆಯಲ್ಲಿ ಗೆದ್ದು ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next