Advertisement

ಜನರನ್ನು ಮರಳು ಮಾಡಿ ರಾಜಕಾರಣ ಮಾಡಲ್ಲ

07:26 AM Mar 15, 2019 | Team Udayavani |

ಬೇಲೂರು: ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಜನರಿಂದ ಮತಯಾಚನೆ ಮಾಡುತ್ತೇವೆ ಹೊರತು ಕಣ್ಣೀರು ಹಾಕಿ ಜನರನ್ನು ಮರಳು ಮಾಡುವ ರಾಜಕಾರಣ ದೇವೇಗೌಡ ಕುಟುಂಬ ಎಂದೂ ಮಾಡಿಲ್ಲ ಎಂದು ಸಚಿವ ಎಚ್‌.ಡಿ.ರೇವಣ್ಣ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಚನ್ನಕೇಶವ ದೇವಾಲಯದ ಆವರಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 

Advertisement

ಹೊಳೆನರಸೀಪುರದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ದನ್ನು ಬಿಜೆಪಿ ಮುಖಂಡ ಆರ್‌. ಅಶೋಕ್‌ ಸೇರಿದಂತೆ ಹಲವರು ನಾಯಕರು ಟೀಕೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ ಅವರು ಕಳೆದ 60ವರ್ಷಗಳಿಂದ ರಾಜಕೀಯವ ಜೀವನದ ರಾಜಕೀಯ ಏರುಪೇರುಗಳನ್ನು ಕಂಡಿರುವ ಅವರು ತಮ್ಮ ಗ್ರಾಮದ ಸಮಕಾಲೀನರ ಸಹಾಯವನ್ನು ನೆನೆದು ಕಣ್ಣೀರು ಹಾಕಿದ್ದಾರೆ ವಿನಃ ಯಾವುದೇ ರಾಜಕೀಯ ಲಾಭಕ್ಕೆ ಕಣ್ಣೀರು ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ದೇಶಕ್ಕೆ ಏನು ಮಾಡಿದೆ?: ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರು ಏನು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ದೇಶಕ್ಕೆ ಏನು ಮಾಡಿದೆ ಎಂಬುದನ್ನು ತಿಳಿಸಬೇಕು. ರೈತರು ನಿರುದ್ಯೋಗಿ, ಕಾರ್ಮಿಕರ ಸಮಸ್ಯೆಗಳು ಉಲ್ಬಣಿಸುತ್ತಿದ್ದರೂ ಸಹ ಏನು ಕ್ರಮ ಕೈಗೊಳ್ಳದ ಬಿಜೆಪಿ ಈ ಬಾರಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ನಾಯಕರು ದಿನ ಬೆಳಗಾದರೆ ಸುಳ್ಳು ಭರವಸೆ ನೀಡಿದ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವರು ಜಾಯನು ಪಡೆದು ಓಡಾಡುತ್ತಿರುವುದೇ ದೊಡ್ಡ ಸಾಧನೆಯಾಗಿದೆ ಎಂದರು. ದೇವೇಗೌಡರ ಕುಟುಂಬ ಮಾತ್ರ ಕುಟುಂಬ ರಾಜಕಾರಣ ಮಾಡುತ್ತಿದ್ದೆಯೇ ಬಿಜೆಪಿ ನಾಯಕರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಮತದಾರರು ತೀರ್ಮಾನಿಸಿ ಮತ ಹಾಕುತ್ತಾರೆ ಎಂದು ಅಭಿವೃದ್ಧಿಗೆ ರಾಜಕಾರಣ ಮಾಡದ ಬಿಜೆಪಿ ರಾಮ ಕೃಷ್ಣರ ಜಪ ಮಾಡಿಕೊಂಡು ಅಧಿಕಾರಕ್ಕೆ ಬಂದವರಿಂದ ರಾಜಕಾರಣ ಕಲಿಯುವ ಅಗತ್ಯಲ್ಲ ಎಂದರು.

ಇತ್ತೀಚೆಗೆ ಬಿಜೆಪಿ ನಾಯಕರು ರಾಮನನ್ನು ಬಿಟ್ಟು ದಿನ ನಿತ್ಯ ದೇವೇಗೌಡ ಜಪ ಮಾಡುತ್ತಿದ್ದಾರೆ ಎಂದರಲ್ಲದೆ ಟೀಕೆ ಟಿಪ್ಪಣಿಗಳಿಗೆ ಹೆದರಿ ಓಡಿ ಹೋಗುವ ಜಾಯಮಾನ ತಮ್ಮದಲ್ಲ ಎಂದರು. ಬೇಲೂರುಕ್ಷೇತ್ರದಲ್ಲಿ ಕಳೆದ 8 ವರ್ಷಗಳಿಂದ ಜನಸಾಮಾನ್ಯರೊಂದಿಗೆ ಕೆಲಸ ಮಾಡುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ನನನ್ನು ಗೆಲ್ಲಿಸುತ್ತಾರೆ ಎಂದರು.

Advertisement

ಅಭಿವೃದ್ಧಿಗೆ ಅನುದಾನ: ಶಾಸಕ ಕೆ.ಎಸ್‌.ಲಿಂಗೇಶ್‌ ಮಾತನಾಡಿ, ಬೇಲೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದೆ. ಬರಗಾಲ ಪೀಡಿತ ಪ್ರದೇಶ ಹಳೇಬೀಡು ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ದೇವೇಗೌಡರು ಮತ್ತು ರೇವಣ್ಣ ಶ್ರಮವಹಿಸಿ ರಣಘಟ್ಟ ವಡ್ಡಿನಿಂದ ನೀರಾವರಿ ಯೋಜನೆಗೆ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿರುವುದು ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ, ಲತಾಮಂಜೇಶ್ವರಿ. ಲತಾ, ರತ್ನಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ, ಸದಸ್ಯೆ ಕಮಲ, ಎಂಎಲ್‌ಸಿ ಧರ್ಮೇಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ.ಚ.ಅನಂತಸುಬ್ಟಾರಾಯ, ಯುವ ಅಧ್ಯಕ್ಷ ಉಮೇಶ್‌, ಕಾರ್ಯದರ್ಶಿ ಸಿ.ಎಚ್‌.ಮಹೇಶ್‌, ಮುಖಂಡರಾದ, ಎಂ.ಎ.ನಾಗರಾಜ್‌. ಬಿ.ಡಿ.ಚಂದ್ರೇಗೌಡ, ಸಿ.ಎಸ್‌.ಪ್ರಕಾಶ್‌, ಟಿ.ಎ.ಶ್ರೀನಿಧಿ, ರವಿಕುಮಾರ್‌,ಚೇತನ್‌ಕುಮಾರ್‌, ಸುಬಾನ್‌ ಮೊದಲಾದವರಿದ್ದರು. 

ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧೆ: ಜೆಡಿಎಸ್‌ ಲೋಕಸಭಾ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಾತನಾಡಿ, ದೇವೇಗೌಡರು ಸೇರಿದಂತೆ ತಮ್ಮ ಕುಟುಂಬದವರು ಯಾರು ನಾನು ರಾಜಕೀಯಕ್ಕೆ ಬರಬೇಕೆಂದು ಕರೆದಿರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದಿದ್ದೇನೆ. ಭಾವುಕನಾಗಿ ಕಣ್ಣೀರು ಹಾಕಿದ್ದು ನಿಜ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಕಣ್ಣೀರು ಹಾಕಿ ರಾಜಕೀಯ ಮಾಡುವ ಉದ್ದೇಶವಿಲ್ಲ.

ಜನರ ಪ್ರೀತಿ ಶ್ವಾಸದಿಂದ ನಾಯಕರಾಬೇಕೆ ಹೊರತು ಯಾವುದ ಕುತಂತ್ರದಿಂದ ರಾಜಕೀಯ ಬರುವುದಿಲ್ಲ. ರೈತರು ಮತ್ತು ವೀರ ಯೋಧರ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿಯವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಹೇಗೆ ಅವರಿಗೆ ಗೌರವ ನೀಡಬೇಕೆಂದು ನಮಗೂ ಗೊತ್ತು ಎಂದರು.

ರಾಜಕೀಯಕ್ಕೆ ಹೆದರಿ ಓಡಿ ಹೋಗೋಲ್ಲ: ದೇವೇಗೌಡರ ಕುಟುಂಬ ರಾಜಕೀಯಕ್ಕೆ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ, ಕಳೆದ 10ವರ್ಷಗಳಿಂದ ಜೆಡಿಎಸ್‌ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರೂ ಜನ ಸಾಮಾನ್ಯರೊಂದಿಗೆ ಅವರ ಸಮಸ್ಯೆಗಳನ್ನು ಅರಿತು ಕೈಲಾದ ಕೆಲಸ ಮಾಡಿದ್ದೇವೆ. ಅಂದು ಅಡಳಿತ ನಡೆಸಿದ ಪಕ್ಷಗಳು ಏನು ಮಾಡಿದ್ದಾವೆ ಎಂದು ಮತಯಾಚನೆ ಮಾಡುತ್ತಾರೆ. ಜನತೆಯ ಮುಂದೆ ಹೋಗಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಸಚಿವ ರೇವಣ್ಣ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next