ಜಿಲ್ಲಾದ್ಯಂತ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿ ರೈತಾಪಿ ಕೃಷಿ ಕೂಲಿಕಾರರಲ್ಲಿ ತೀವ್ರ ಸಂತಸ ಮೂಡಿಸಿದೆ. ಕೋವಿಡ್ ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ತಿಂಗಳಿಂದ ತತ್ತರಿಸಿರುವ ಜಿಲ್ಲೆಯ ಜನರಲ್ಲಿ ಮಳೆರಾಯನ ದರ್ಶನ ಸಾಕಷ್ಟು ಖುಷಿ ತಂದಿದೆ.
Advertisement
ಜಿಲ್ಲೆಯಲ್ಲಿ 32 ಮಿ.ಮೀ ಮಳೆ: ಕಳೆದ ರಾತ್ರಿ ಜಿಲ್ಲಾದ್ಯಂತ 32 ಮೀ.ಮೀ ಮಳೆ ದಾಖಲಾಗಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ಚಿಕ್ಕಬಳ್ಳಾಪುರದಲ್ಲಿ 46 ಮೀ.ಮೀ. ಮಳೆಯಾದರೆ ಗೌರಿಬಿದನೂರು ತಾಲೂಕುಗಳಲ್ಲಿ 39 ಮಿ.ಮೀ ವರದಿಯಾಗಿದೆ. ಉಳಿದಂತೆ ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಉತ್ತಮ ಮಳೆ ಆಗಿದೆ. ಈ ಪೈಕಿ ಹೆಚ್ಚು ಮಳೆಯಾಗಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮಳೆರಾಯನ ಆರ್ಭಟಕ್ಕೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಕಟಾವಿಗೆ ಬಂದಿದ್ದ ದ್ರಾಕ್ಷಿ, ಹೂವು, ಹಣ್ಣು ತರಕಾರಿ ಮತ್ತಿತರರ ವಾಣಿಜ್ಯ ಬೆಳೆಗಳು ನೆಲಕಚ್ಚಿವೆ. ಕೆಲವು ಕಡೆ ದ್ರಾಕ್ಷಿ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ರೈತರಿಗೆ ಲಕ್ಷಾಂತರ ರೂ., ಆರ್ಥಿಕ ನಷ್ಟವಾಗಿದೆ.
ಉಳುಮೆಗೆ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾದ್ಯಂತ ವಾಡಿಕೆಯಂತೆ ಬಿತ್ತನೆ ಅವಧಿ ಮೇ 15 ರ ನಂತರ ಆರಂಭಗೊಳ್ಳಲಿದ್ದು ಆರಂಭದಲ್ಲಿ ನೆಲಗಡಲೆ, ತೊಗರಿ ಬಿತ್ತನೆ ಆದರೆ ಜೂನ್
ತಿಂಗಳ ಆರಂಭದಲ್ಲಿ ರಾಗಿ ಮತ್ತಿತರ ಬೆಳೆಗಳ ಬಿತ್ತನೆ ಶುರುವಾಗುತ್ತದೆ. ಸದ್ಯಕ್ಕೆ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಕೃಷಿ ಭೂಮಿ ಹದ ಮಾಡಿಕೊಳ್ಳಲು ಉಳುಮೆ ಮಾಡುವುದನ್ನು ಆರಂಭಿಸಿದ್ದಾ ಕಳೆದ ರಾತ್ರಿ 32 ಮೀ.ಮೀ ಮಳೆ ದಾಖಲಾಗಿದೆ. ಅತಿ ಹೆಚ್ಚು ಚಿಕ್ಕಬಳ್ಳಾಪುರ ಹಾಗೂ ಗೌರಿ ಬಿದನೂರು ತಾಲೂಕುಗಳಲ್ಲಿ ದಾಖಲಾಗಿದೆ. ಬಿತ್ತನೆಗೆ ಬೇಕಾದ ಸಿದ್ಧತೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ. ರಸಗೊಬ್ಬರ, ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಲು ಇಲಾಖೆ ತಯಾರಿ ನಡೆಸಿದೆ. ಮೇ 15 ನಂತರ ಜಿಲ್ಲೆಯಲ್ಲಿ ವಾಡಿಕೆಯಂತೆ ಬಿತ್ತನೆ ಕಾರ್ಯ ಶುರುವಾಗಲಿದೆ.
ರೂಪಾ, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ