Advertisement
ಬಿರುಗಾಳಿಗೆ ಸಂಜೆ ರಸ್ತೆಯಲ್ಲಿ ಧೂಳೆದ್ದು ಪ್ರಯಾಣಿಕರು, ಪಾದಚಾರಿಗಳು ಪರದಾಡುವಂತಾಯಿತು. ಸಂಜೆ ಐದು ಗಂಟೆಯಿಂದ ಶುರುವಾದ ಬಿರುಗಾಳಿಗೆ ಜನ ತತ್ತರಿಸಿ ಹೋದರು. ಬೈಕ್ ಸವಾರರು ವಾಹನ ಚಾಲನೆ ಮಾಡಲಾರದಷ್ಟು ಗಾಳಿ ಬೀಸಿತು. ಇದರಿಂದ ಎರಡೂವರೆ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಜನರನ್ನು ಬಿರುಗಾಳಿ ಬಾಧಿ ಸಿತು.
ಸ್ಕ್ರೀನ್‌ಗಳು ಒಡೆದು ಸಾವಿರಾರು ರೂ. ಮೌಲ್ಯದ ವಸ್ತುಗಳು ಹಾಳಾದವು. ಹಳ್ಳಿಗಳಲ್ಲಿ ಗುಡಿಸಲುಗಳ ಮೇಲ್ಛಾವಣಿ ತಗಡುಗಳು ಹಾರಿ ಹೋಗಿವೆ. ಹಂದರ ಕಾಪಾಡಲು ಹರಸಾಹಸ: ಮದುವೆಗಾಗಿ ಹಳ್ಳಿಗಳಲ್ಲಿ ಹಂದರ ಹಾಕಲಾಗುತ್ತದೆ. ಅಲ್ಲಿ ನಿರಂತರ ದೀಪ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ, ವಿಪರೀತ ಗಾಳಿಗೆ ಹಂದ್ರಗಳು ಮೇಲೆದ್ದು ಹೋಗುವುದನ್ನು ತಡೆಯಲು ಮದುವೆ ಮನೆಯವರು ಸಾಕಷ್ಟು ಹರಸಾಹಸ ಪಟ್ಟರು. ಹಾಗೆ ಹೋಗುವುದು ಅಪಶಕುನ ಎನ್ನುವ ಕಾರಣಕ್ಕೆ ಹಂದರ ಕಾಪಾಡುವುದೇ ದೊಡ್ಡ ಕೆಲಸವಾಗಿತ್ತು.
Related Articles
Advertisement
ತಗಡು ಬಡಿದು ಗಾಯ: ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಭಾರಿ ಗಾಳಿಗೆ ಹಲವು ಮನೆ, ಶೆಡ್‌ಗಳ ತಗಡುಗಳು ಹಾರಿ ಹೋಗಿವೆ. ಗಿಡಮರಗಳು ನೆಲಕ್ಕುರುಳಿವೆ. ಭಾರಿ ಗಾಳಿಗೆ ಹಾರಿ ಬಂದ ಟಿನ್‌ಶಿàಟ್ ಬೈಕ್ ಮೇಲೆ ಹೋಗುತ್ತಿದ್ದ ಸವಾರನಿಗೆ ಬಡಿದು ಗಾಯಗೊಂಡಿದ್ದಾನೆ. ಹಟ್ಟಿಯ ಜತ್ತಿ ಲೈನ್, ಗುಂಡೂರಾವ್ ಕಾಲೋನಿಗಳಲ್ಲಿ ಹಲವು ಮರಗಳು ನೆಲಕ್ಕುರುಳಿವೆ. ಬಸವ ಸೇವಾ ಸಮಿತಿ ಬಳಿಯ ಶೆಡ್‌ವೊಂದು ಬಿದ್ದಿದೆ.
500 ಮೀ. ಹಾರಿದ ತಗಡು: ಹಟ್ಟಿಯ ಪಾಮನ ಕಲ್ಲೂರು ಕ್ರಾಸ್ ಬಳಿಯ ಮನೆಯೊಂದರ ಬಳಿ ಮದುವೆಗೆ ಹಾಕಿದ್ದ ಹಂದರದ ಮೇಲಿನ ಟಿನ್ ಶೀಟ್‌ವೊಂದು ಭಾರಿ ಗಾಳಿಗೆ ಸುಮಾರು 500 ಮೀಟರ್‌ವರೆಗೆ ಹಾರಿಹೋಗಿ ಹೊಲವೊಂದರಲ್ಲಿ ಬಿದ್ದಿದೆ. ಭಾರಿ ಗಾಳಿ ಪರಿಣಾಮ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯಗೊಂಡು ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು.
ದೇವದುರ್ಗ ತಾಲೂಕಿನಲ್ಲೂ ಬಿರುಗಾಳಿ ತನ್ನ ಪ್ರಭಾವ ತೋರಿದೆ. ದೇವದುರ್ಗ ಪಟ್ಟಣದ ಗೌತಮ ಓಣಿ, ಗತ್‌ಸಿಂಗ್ ಓಣಿಯಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಹೊಸ ಬಸ್ ನಿಲ್ದಾಣದಲ್ಲಿ ತಗಡುಗಳು ಹಾರಿ ಹೋಗಿವೆ. ಕಂಬಗಳು ನೆಲಕ್ಕುರುಳಿದಾಗ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ