Advertisement
ಹೆಚ್ಚಾಗಿ ಬಸ್‌ಗೆ ಕಾಯುವಾಗ ನಮಗೆ ಸಮಯದ ಮಹತ್ವದ ಅರಿವಾಗುತ್ತದೆ. ಒಂದು ಬಸ್ ತಪ್ಪಿದರೆ ಮತ್ತೂಂದು ಬಸ್‌ಗಾಗಿ ಕಾಯುವಾಗ ಆಗುವ ಸಂಕಷ್ಟಕ್ಕೆ ಸುಸ್ತಾಗಿ ಬಿಡುತ್ತೇವೆ. ಹೋಗಿ ತಲುಪಬೇಕಾದ ಪ್ರಯಾಣವು ಮಂಕಾಗುವ ಎಲ್ಲ ಮುನ್ಸೂಚನೆಯನ್ನು ತೆರೆದಿಡುತ್ತದೆ. ಆದರೆ ಇದಕ್ಕೆಲ್ಲ ತದ್ವಿರುದ್ಧವಾಗಿ ಈ ಹೊಸ ವಿನೂತನ ಕಲ್ಪನೆ. ಬಸ್ ತಪ್ಪಿ ಹೋದರೂ ನಮ್ಮ ಮನಸ್ಸನ್ನಾಗಲಿ ಅಥವಾ ದೈಹಿಕವಾಗಲಿ ಮಂಕಾಗದಂತೆ ನೋಡುವಂತೆ ಮಾಡುತ್ತದೆ. ಹಾಗದಾರೆ ಏನಿದು ಇದರ ವಿಶೇಷತೆಯೇನು ಎಂಬ ಮಾಹಿತಿ ಇಲ್ಲಿದೆ.
ವಿದೇಶದ ಕಲಾವಿದರ ಗುಂಪೊಂದು ಮತ್ತು ಸಮುದಾಯ ಕಾರ್ಯಕರ್ತರು ಸೇರಿ 2015ರಲ್ಲಿ ಬಸ್ ಸ್ಟಾಂಪ್ ಮೂವ್ಸ್ ಕಾರ್ಯಕ್ರಮವನ್ನು ದಿ ಮೆಟ್ರೊ ಹೆಲ್ತ… ಸಿಸ್ಟಮ್‌ನಲ್ಲಿ ಮತ್ತು GCRTA ಯ ಅಡಾಪ್ಟ್ – ಎ- ಆಶ್ರಯ ಕಾರ್ಯಕ್ರಮದ ಮೂಲಕ ಪ್ರಾರಂಭಿಸಿದರು. ಈ ಯೋಜನೆಯ ಉದ್ದೇಶ ಏನಂದರೆ ಬಸ್ ನಿಲ್ದಾಣಗಳನ್ನು ಜನರಿಗೆ ಹೆಚ್ಚು ಉಪಯೋಗವಾಗುವಂತೆ ಮಾಡುವುದು. ಇದರ ಪ್ರಕಾರ ಸರಳವಾದ ವ್ಯಾಯಾಮ ಮತ್ತು ಆರೋಗ್ಯ ಮಾಹಿತಿಗಳನ್ನು ವಿವರಿಸಿರುವ ನಾಲ್ಕು ಗಾಜಿನ ಫಲಕಗಳನ್ನು ಆಯ್ಕೆ ಮಾಡಿದ ಬಸ್ ನಿಲ್ದಾಣಗಳಲ್ಲಿ ಇಡಲಾಗುತ್ತದೆ. ಈ ಮೂಲಕ ವಿವಿಧ ಕಾರ್ಯಗಳಿಗೆ ಹೋಗಲು ಬಸ್ ತಂಗುದಾಣವನ್ನು ಆಶ್ರಯಿಸುವ ವರಿಗೆ ಆರೋಗ್ಯ ಮಾಹಿತಿಗಳನ್ನು ಹಂಚಬಹುದಾಗಿದೆ. ಇದರಿಂದಾಗಿ ಒತ್ತಡದ ಬದುಕಲ್ಲಿ ಬಸ್ ಕಾಯುವ ಸಣ್ಣ ಬಿಡುವಿನಲ್ಲಿ ಕುಳಿತು ಅಥವಾ ನಿಂತು ಮಾಡುವ ಸುಲಭ ವ್ಯಾಯಮಗಳನ್ನು ತಿಳಿಸಲಾಗುತ್ತದೆ. ಅಲ್ಲದೇ ಸಮಯವಿದ್ದರೆ ಅಲ್ಲೇ ಕುಳಿತು ವ್ಯಾಯಾಮ ಮಾಡುವಂತೆ ಪ್ರೇರೆಪಿಸುತ್ತದೆ. ಹಲವಾರು ದೇಶಗಳಲ್ಲಿ ಇಂತಹ ಅನೇಕ ಮಾಹಿತಿ ನೀಡುವ ಬಸ್ ತಂಗುದಾಣಗಳಿವೆ.
Related Articles
Advertisement
– ವಿಶ್ವಾಸ್ ಅಡ್ಯಾರ್