Advertisement

ಸಾಮಾಜಿಕ ಅಂತರ-ಮಾಸ್ಕ್ ಮರೆತ ಜನ!

08:19 AM May 13, 2020 | Suhan S |

ಹುಬ್ಬಳ್ಳಿ: ಕೋವಿಡ್ ವೈರಸ್‌ ಲಾಕ್‌ಡೌನ್‌ ಘೋಷಣೆಯಿಂದ ಸಂಪೂರ್ಣ ಸ್ತಬ್ಧವಾಗಿದ್ದ ನಗರ ಸೋಮವಾರದಿಂದ ಕೊಂಚು ಸಡಿಲಗೊಂಡಿದ್ದು, ಮಂಗಳವಾರವೂ ಮುಂದುವರಿದಿದ್ದು ಜನರು ಸಂಚರಿಸುವಾಗ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡು ಬಂದಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹಾಗೂ ಜಿಲ್ಲಾಡಳಿತದ ಆದೇಶದ ಅನ್ವಯ ಸೋಮವಾರದಿಂದ ಸೀಲ್‌ ಡೌನ್‌ ಪ್ರದೇಶ ಬಿಟ್ಟು ಇನ್ನುಳಿದ ಪ್ರದೇಶಗಳಲ್ಲಿ ಕೊಂಚ ಸಡಿಲಿಕೆ ಮಾಡಿ ವ್ಯಾಪಾರ-ವಹಿವಾಟಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಇಷ್ಟಾದರೂ ಬುದ್ಧಿ ಕಲಿಯದ ಜನರು ಕೋವಿಡ್ ವೈರಸ್‌ ಭಯವೇ ಇಲ್ಲದಂತೆ ವರ್ತಿಸುತ್ತಿರುವುದು ಕಂಡು ಬಂತು. ಪಾಠ ಕಲಿಯದ ಜನ: ಮಂಗಳವಾರ ಮಾರುಕಟ್ಟೆ ಪ್ರದೇಶಗಳಾದ ಜವಳಿ ಸಾಲ, ಹಿರೇಪೇಟೆ, ಬಾರದಾನ್‌ ಸಾಲ, ದಾಜೀಬಾನ ಪೇಟೆ, ಅದೇ ರೀತಿ ಹಳೆ ಹುಬ್ಬಳ್ಳಿ ಭಾಗದಲ್ಲಿ ಮೊದಲಿನಿಂದಲೂ ಅದೇ ರಾಗ ಅದೇ ಹಾಡು ಎನ್ನುವಂತೆ ಕಂಡು ಬಂತು.

ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳು ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಜನರು ಒಂದೇ ಸಲ ಹೊರಗೆ ಬೀಳುತ್ತಿದ್ದಾರೆ. ಇದರೊಂದಿಗೆ ವಿವಿಧ ವಾಹನಗಳಲ್ಲಿ ಗ್ರಾಮೀಣ ಭಾಗದಿಂದ ಖರೀದಿಗಾಗಿ ಹೆಚ್ಚಿನ ಜನರು ಆಗಮಿಸುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ವಾಹನದಲ್ಲಿ ತೆರಳುತ್ತಿರುವವರು ಪರಸ್ಪರ ಅಂತರ ಕಾಯ್ದುಕೊಳ್ಳದೇ ಒಂದೇ ವಾಹನದಲ್ಲಿ ಅಕ್ಕಪಕ್ಕ ಕುಳಿತು ಮಾಸ್ಕ್ ಹಾಕಿಕೊಳ್ಳದೇ ಹೋಗುತ್ತಿರುವುದು ಕಂಡು ಬಂತು.

ಅಂತರಕ್ಕೆ ಗುರುತು ಹಾಕಿದ ಅಂಗಡಿಕಾರರು: ಕೋವಿಡ್ ವೈರಸ್‌ನಿಂದ ಎಚ್ಚೆತ್ತುಕೊಂಡಿರುವ ವಿವಿಧ ಮಳಿಗೆದಾರರು ತಮ್ಮ ಅಂಗಡಿಗಳ ಎದುರು ಗುರುತು ಹಾಕುವ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಜನರೇ ನಿರಾಸಕ್ತಿ ತಾಳುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಮೈ ಮರೆತ ಆಟೋ ಚಾಲಕರು: ನಗರದಲ್ಲಿ ಮಂಗಳವಾರ ಮೈಮರೆತ ಆಟೋ ಚಾಲಕರು ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂತು. ಅಲ್ಲದೇ ಇರುವ ಸೀಟ್‌ಗಳಿಗಿಂತ ಹೆಚ್ಚಾಗಿ ಚಾಲಕನ ಅಕ್ಕಪಕ್ಕದಲ್ಲೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು.

ಅಗತ್ಯ ವಸ್ತುಗಳ ಮಾರಾಟಕ್ಕೆ ಆದ್ಯತೆ ನೀಡಿರುವ ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ಜನರ ಓಡಾಟ ಕಂಡು ಬಂತು. ಬೆಳಗ್ಗೆಯಿಂದ ಸಂಜೆ ವರೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಅಷ್ಟರಲ್ಲಿಯೇ ತಮ್ಮ ಖರೀದಿ ಕೆಲಸ ಕಾರ್ಯಗಳನ್ನು ಮಾಡಿಕೊಂಡರಾಯಿತು ಎಂದು ಜನರು ಹೊರ ಬರುತ್ತಿರುವುದು ಕಂಡು ಬಂತು.

Advertisement

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next