Advertisement

ಪೆಟ್‌ ಘಾಟ್‌; ಸಾಲು ಸಾಲಾಗಿ ಮಲಗಿವೆ, ಸಾಕು ಪ್ರಾಣಿಗಳ ನೆನಪು

05:19 PM Aug 05, 2017 | |

ಬೆಂಗ್ಳೂರಿನಲ್ಲಿ ಸಾಕು ಪ್ರಾಣಿಯಾಗಿ ಹುಟ್ಟೋದೂ ಒಂದು ಪುಣ್ಯವೇ! ಇದು ಉತ್ಪ್ರೇಕ್ಷೆ ಅಲ್ಲ. ಬೆಂಗ್ಳೂರಿಗರ ಪ್ರಾಣಿ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ. ಮನುಷ್ಯ- ಮನುಷ್ಯರ ನಡುವೆ ಹೇಗೆ ಇಲ್ಲಿ ಗಟ್ಟಿಯಾದ ಆತ್ಮೀಯತೆ ಹುಟ್ಟಿಕೊಳ್ಳುತ್ತದೋ, ಅಂಥದ್ದೇ ಸಂಬಂಧ ಸಾಕುಪ್ರಾಣಿಗಳೊಂದಿಗೂ ಚಿಗುರುತ್ತದೆ. ಇತ್ತೀಚೆಗೆ ನನ್ನ ಪರಿಚಿತರೊಬ್ಬರ ಮನೆಯಲ್ಲಿ ಮುದ್ದಿನ ನಾಯಿ ಸತ್ತಾಗ, ಅದನ್ನು ಕಾಶಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದ್ದರು. ಮನೆಯ ಸದಸ್ಯರಲ್ಲೇ ಯಾರೋ ಒಬ್ಬರು ಸತ್ತಿದ್ದಾರೆ ಎಂಬ ದುಃಖ ಅವರಲ್ಲಿತ್ತು! ಇದನ್ನು ನೋಡಿ ನನಗೆ ನೆನಪಾಗಿದ್ದು, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ “ಪೀಪಲ್ ಫಾರ್‌ ಅನಿಮಲ್ಸ್‌ ‘ರ ಸಾಕು ಪ್ರಾಣಿಗಳಿಗೆಂದೇ ಇರುವ ಸ್ಮಶಾನ!

Advertisement

ಇಲ್ಲಿ ಸಾಕು ಪ್ರಾಣಿಗಳಗಳ ನೂರಾರು ಸಮಾಧಿಗಳು ನೆನಪನ್ನು ನೆಲದಾಳದಲ್ಲಿ ತುಂಬಿಕೊಂಡು ಮಲಗಿವೆ. ಪ್ರೀತಿಯ ನಾಯಿಗಳ, ಬೆಕ್ಕುಗಳ ವರ್ಷದ ದಿವಸದಂದು ಇಲ್ಲಿಗೆ ಬಂದು, ಅವುಗಳ ಸಮಾಧಿಯ ಮೇಲೆ ಹೂವು ಹಾಕಿ ಸ್ವಲ್ಪ ಹೊತ್ತು ಕೂತು, ಕಣ್ಣೊದ್ದೆ ಮಾಡಿಕೊಂಡುವ ಹೋಗುವ ಮನಸ್ಸುಗಳು ಇಲ್ಲಿ ಕಾಣಿಸುತ್ತವೆ. ಇಲ್ಲಿ ಸಮಾಧಿಗೆ ಇಂತಿಷ್ಟು ಶುಲ್ಕ ನಿಗದಿ ಇರುತ್ತದೆ. ಆ ಹಣದಲ್ಲಿ “ಪೀಪಲ್ ಫಾರ್‌ ಅನಿಮಲ್ಸ್‌ ‘ ಸಾಕು ಪ್ರಾಣಿಗಳ ಆರೈಕೆಗೆ ಮಾಡುತ್ತದೆ. ಪ್ರಾಣಿಗಳ ಸಮಾಧಿಗಳ ಮೇಲಿನ ಮನಕಲಕುವ ಬರಹಗಳನ್ನು ಒಮ್ಮೆ ಓದಿದ್ದರೆ, ಯಾರೇ ಆದರೂ ಒಂದು ಕ್ಷಣ ಭಾವುಕರಾಗುತ್ತಾರೆ.

ಸಮಾಧಿಯ ವಿಶೇಷ
ನಾಯಿ, ಬೆಕ್ಕು ಅಲ್ಲದೆ, ಬಿಳಿ ಇಲಿ, ಗಿಳಿ, ಹುಂಜ, ಮೊಲ, ಕುದುರೆಯ ಸಮಾಧಿಗಳೂ ಇಲ್ಲಿವೆ.

ಸ್ಮಶಾನ ಹುಟ್ಟಿದ ಕತೆ…
2005-06ಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ನಾಯಿ, ಬೆಕ್ಕು- ಹೀಗೆ ಸಾಕು ಪ್ರಾಣಿಗಳಿಗೆಂದೇ ಸ್ಮಶಾನ ಇರಲಿಲ್ಲ. ಸಿರಿವಂತರು ತಮ್ಮ ಜಾಗದಲ್ಲೇ ಮಣ್ಣು ಮಾಡಿದರೆ, ಬಡವರು ಆ ಶವಗಳನ್ನು ಬೀದಿಯ ಬದಿಯಲ್ಲಿ ಎಸೆಯುತ್ತಿದ್ದರು. ಇದನ್ನು ಕಂಡು ನಾಯಿ ಸಾಕದ ಸಾರ್ವಜನಿಕರು ಮುನಿಸಿಪಾಲಟಿಗೆ ಕರೆಮಾಡಿಯೇ ಸುಸ್ತಾಗುತ್ತಿದ್ದರು. ಇದನ್ನು ಗಂಭೀರವಾಗಿ ಅವಲೋಕಿಸಿದ ಪೀಪಲ ಫಾರ್‌ ಅನಿಮಲ್ಸ ಸಂಸ್ಥೆ, ಆಗ ಕೇಂದ್ರ ಸಚಿವೆಯಾಗಿದ್ದ ಮನೇಕಾ ಗಾಂಧಿಯವರಿಗೆ ಮನವಿ ಸಲ್ಲಿಸಿ, ಸರ್ಕಾರಿ ಜಾಗವನ್ನು ಇದಕ್ಕಾಗಿಯೇ ಮಂಜೂರು ಮಾಡಿಸಿಕೊಂಡರು. ಅಂದಹಾಗೆ, ಈ ಸಂಸ್ಥೆಯು ಪ್ರಾಣಿಗಳಿಗೆ ಆ್ಯಂಬ್ಯುಲೆನ್ಸ್‌ ಸೇವೆಯನ್ನೂ ಕಲ್ಪಿಸಿದೆ. 

ಚಾರ್ಜ್‌ ಹೇಗೆ?
1 ವರ್ಷದ ಸಮಾಧಿಗೆ: 5,500 ರೂ.
3 ವರ್ಷದ ಸಮಾಧಿಗೆ: 20,000 ರೂ.
5 ವರ್ಷದ ಸಮಾಧಿಗೆ: 30,000 ರೂ.

Advertisement

ಅಂಕಿ- ಸಂಖ್ಯೆ
6- ಸ್ಮಶಾನ ಆವರಿಸಿರುವ ಒಟ್ಟು ಎಕರೆ ಜಾಗ.
24- ಗಂಟೆಯೂ ಈ ಸ್ಮಶಾನ ಓಪನ್‌ ಇರುತ್ತೆ.
500- ಒಟ್ಟು ಸಮಾಧಿಗಳ ಸಂಖ್ಯೆ.
2006- ಇಸವಿ ಬಳಿಕ ಪರ್ಮನೆಂಟು ಸಮಾಧಿಯನ್ನು ಇಲ್ಲಿ ಕಟ್ಟುತ್ತಿಲ್ಲ.

ಶವಕ್ಕೂ ಸುರಕ್ಷಿತ ಪೆಟ್ಟಿಗೆ!
ಈ ಸ್ಮಶಾನದಲ್ಲಿ ಪ್ರಚಾರ ಕಾರ್ಯ ಮಾಡಿದ್ದು ಸುನಿಲ್‌ ಕಶ್ಯಪ್‌ ಹೇಳುವ ಪ್ರಕಾರ, ಕೆಲವರು ತಾವು ಸಾಕಿದ ನಾಯಿಗಳ ದೇಹವನ್ನು ಕೆಡದಂತೆ ಸಂರಕ್ಷಿಸಿ ಗಾಜಿನ ಪೆಟ್ಟಿಗೆಯಲ್ಲಿ ಹಾಕಿ ಇಲ್ಲಿ ಸಮಾಧಿಮಾಡಿ¨ªಾರೆ. ಇಂಥ ಸಮಾಧಿಗಳ ಪಕ್ಕದಲ್ಲಿ ಪ್ರೀತಿಯ ನಾಯಿ ಕುರಿತ ಗುಣಗಾನಗಳೂ ಬಹಳ. “ಆ ನಾಯಿಯ ಕಾಲ್ಗುಣದಿಂದ ಅದೃಷ್ಟವೇ ಬದಲಾಯ್ತು’ ಎಂಬ ಮಾತುಗಳು ಸಾಮಾನ್ಯ.

ಸಾಕುಪ್ರಾಣಿಗಳ ಆ್ಯಂಬ್ಯುಲೆನ್ಸ್‌ ಸಂಪರ್ಕ: 819715504
“ಪೀಪಲ… ಫಾರ್‌ ಅನಿಮಲ್ಸ… ಸಂಪರ್ಕ: 9900025370

ಎಲ್ಲಿದೆ?
“ಪೀಪಲ… ಫಾರ್‌ ಅನಿಮಲ್ಸ…, ನಂ.67, ಉತ್ತರಹಳ್ಳಿ ರಸ್ತೆ, ಬಿಜಿಎಸ್‌ ಆಸ್ಪತ್ರೆ ಪಕ್ಕ

ಆ ಪ್ರೀತಿಗೆ, ಅದರ ರೀತಿಗೆ…
1. ರೂಮಿ ಎಂಬ ಸಾಕು ನಾಯಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು 1.50 ಲಕ್ಷ ರೂ. ವೆಚ್ಚದಲ್ಲಿ ಸಮಾಧಿ ಕಟ್ಟಿಸಿದ್ದಾರೆ. ಪ್ರತಿದಿನ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.
2. ಪರ್ಷಿಯನ್‌ ಮಹಿಳೆಯೊಬ್ಬರು ಬೆಕ್ಕನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಪ್ರತಿ ಭಾನುವಾರ ಇಲ್ಲಿಗೆ ಬಂದು, 1 ತಾಸು ಅದರ ಸಮಾಧಿಯೆದುರು ಕುಳಿತು, ಹೋಗುತ್ತಾರೆ.

– ಗೀತಾ

https://www.facebook.com/PeopleForAnimalsBangalore/

Advertisement

Udayavani is now on Telegram. Click here to join our channel and stay updated with the latest news.

Next