ಹೊಸದಿಲ್ಲಿ: ಭಾರತದಲ್ಲಿದ್ದುಕೊಂಡು ತಿಂಗಳಿಗೆ 25,000 ರೂ.ಗಿಂತ ಅಧಿಕ ಸಂಪಾದನೆ ಪಡೆದುಕೊಳ್ಳುತ್ತಿದ್ದೀರಾ?
ಹಾಗಾದರೆ ನೀವು ಈ ದೇಶದ ಹೆಚ್ಚು ಆದಾಯ ಹೊಂದಿರುವ ಶ್ರಮಿಕ ವರ್ಗದ ಜನರ ಅಗ್ರ ಶೇ. 10ರ ಗುಂಪಿನಲ್ಲಿದ್ದೀರಿ ಎಂದರ್ಥ!
ಹಾಗೆಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ತಯಾರಿಸಿರುವ “ಭಾರತದ ಅಸಮಾನತೆ ಸ್ಥಿತಿಗತಿಗಳ ವರದಿ’ ಹೇಳಿದೆ.
ಈ ದೇಶದ ಶೇ. 1ರಷ್ಟು ಜನರು, ದೇಶದ ಒಟ್ಟಾರೆ ಆದಾಯದ ಶೇ. 5ರಿಂದ 7ರಷ್ಟು ಹಣ ಸಂಪಾದಿಸುತ್ತಿದ್ದಾರೆ. ಶೇ. 15ರಷ್ಟು ಮಂದಿ, ತಿಂಗಳಿಗೆ ಕೇವಲ 5 ಸಾವಿರ ರೂ. ಗಳಿಸುತ್ತಿದ್ದಾರೆ.
ಹೀಗೆ, ಪಟ್ಟಿ ಮಾಡುತ್ತಾ ಹೋದರೆ ದೇಶದ ಶೇ. 3-35ರಷ್ಟು ಆದಾಯವನ್ನು ಪಡೆಯುವ ಶ್ರಮಿಕರ ಪಟ್ಟಿಯಲ್ಲಿ ಮಾಸಿಕವಾಗಿ 25 ಸಾವಿರ ರೂ.ಗಳಿರುವ ಮಂದಿ, ಈ ಗುಂಪಿನ ಟಾಪ್ 10ರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.