Advertisement

ಕೋವಿಡ್ ತಂದ ಫಜೀತಿ: ರಸ್ತೆಯಲ್ಲಿ ನೋಟು ಬಿದ್ದರೂ ಮುಟ್ಟದ ಜನ

05:07 PM Apr 25, 2020 | keerthan |

ರಾಯಚೂರು: ರಸ್ತೆಯಲ್ಲಿ 500 ರೂ ಮುಖಬೆಲೆಯ ಐದು ನೋಟುಗಳು ಬಿದ್ದಿದ್ದರು ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಜನ ಅವುಗಳನ್ನು ಮುಟ್ಟಲೂ ಹಿಂಜರಿದ ಪ್ರಸಂಗ ನಡೆದಿದೆ.

Advertisement

ನೇತಾಜಿ ನಗರದಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಬಿದ್ದಿದ್ದವು. ಇವುಗಳನ್ನು ಕಂಡ ಜನ ಆತಂಕಗೊಂಡಿದ್ದಾರೆ. ಸುತ್ತಲೂ ಕಲ್ಲುಗಳನ್ನಿಟ್ಟು ಅದರ ಬಳಿ ಯಾರು ಸುಳಿಯದಂತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನೇತಾಜಿ ನಗರ ಠಾಣೆ ಪೊಲೀಸರು, ನೋಟುಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೋವಿಡ್-19 ಭೀತಿಯ ಕಾರಣ ಜನರು ನೋಟುಗಳನ್ನು ಮುಟ್ಟಲು ಹಿಂಜರಿಯುತ್ತಿದ್ದು, ಈ ಹಿಂದೆ ಉಡುಪಿಯಲ್ಲೂ ಇಂತಹದೇ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next