Advertisement

ನಾಲಾಯಕ್‌ ಯಾರೆಂದು ಜನ ನಿರ್ಧರಿಸ್ತಾರೆ: ಪಿಟಿಪಿ

11:13 PM Jun 30, 2019 | Lakshmi GovindaRaj |

ಹರಪನಹಳ್ಳಿ: ಯಾರು ಲಾಯಕ್‌ ಮತ್ತು ನಾಲಾಯಕ್‌ ಎಂಬುದನ್ನು ಜನ ನಿರ್ಧರಿಸುತ್ತಾರೆ ಎನ್ನುವ ಮೂಲಕ ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ್‌ ನಾಯ್ಕ ಅವರು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೀಮಾನಾಯ್ಕ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ಪರಮೇಶ್ವರ್‌ ನಾಯ್ಕ ನಾಲಾಯಕ್‌ ಮತ್ತು ಕಮಿಷನ್‌ ಮಂತ್ರಿ’ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ತಮ್ಮ ವಿರುದ್ಧ ಹುರುಳಿಲ್ಲದ ಆರೋಪ ಮಾಡಿದ್ದರು. ಆದರೆ ಯಾರು, ಹೇಗೆ ಎಂಬುದನ್ನೆಲ್ಲ ಜನ ನಿರ್ಧರಿಸುತ್ತಾರೆ ಎಂದರು.

ಸ್ವ ಪಕ್ಷೀಯ ಸಚಿವರ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದಕ್ಕೆ ಪಕ್ಷದ ಹೈಕಮಾಂಡ್‌ ಭೀಮಾ ನಾಯ್ಕ ಅವರಿಗೆ ನೋಟಿಸ್‌ ನೀಡಿದೆ. ಈ ಕುರಿತು ಪಕ್ಷವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next