ಹುಣಸಗಿ: ಕ್ಷೇತ್ರದ ಜನರು ಬಿಜೆಪಿ ದುರಾಡಳಿಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಶ್ರೀನಿವಾಸಪುರ ತಾಂಡಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರ ಇದ್ದಾಗ ರೈತಪರ, ಜನಪರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಾಗಿದೆ. ರೈತಾಪಿ ಜನರಿಗೆ ನೆಮ್ಮದಿ ಸಿಕ್ಕಿದೆ. ಈಗಾ ಬಿಜೆಪಿ ಆಡಳಿತದಲ್ಲಿ ರೈತರಿಗೆ ಗೊಬ್ಬರ ಬೆಲೆ ದುಪ್ಪಟಗೊಳಿಸಿ ಜೀವನಕ್ಕೆ ಬರೆ ಎಳೆಯಲಾಗಿದೆ. ರೈತರು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಕ್ಷೇತ್ರದ ಅನೇಕ ತಾಂಡಾಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಅಂಗನವಾಡಿ ಕಟ್ಟಡ ಸೇರಿದಂತೆ ಮೂಲಸೌಕರ್ಯ ಒದಗಿಸಿದ್ದೇನೆ. ಅಭಿವೃದ್ಧಿಯ ವಿಷಯದಲ್ಲಿ ತಾರತಮ್ಯತೆ ಎಂದೂ ಮಾಡಿಲ್ಲ. ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ತಾಂಡಾಗಳ ಅಭಿವೃದ್ಧಿಗೆ ಮುತುವರ್ಜಿ ವಹಿಸಲಾಗುವುದು ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ರೈತಾಪಿ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಮತ್ತೂಮ್ಮೆ ರಾಜಾ ವೆಂಕಟಪ್ಪನಾಯಕ ಅವರನ್ನು ಶಾಸಕರನ್ನಾಗಿ ಮಾಡೋಣ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ: ಶಂಕರ ಮೋತಿಲಾಲ್, ದೇವಪ್ಪ, ವಾಸು, ಸಂತೋಷ, ಅರುಣ, ಡಾಕನಾಯ್ಕ, ಹನುಮಂತ ರಾಠೊಡ, ವಿಠಲ್, ಧನರಾಜ, ಕೃಷ್ಣಾನಾಯ್ಕ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಯುವ ಮುಖಂಡ ರಾಜಾ ವೇಣುಗೋಪಾಲನಾಯಕ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ(ಗೌಡಪ್ಪಗೌಡ) ಕುಪ್ಪಿ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹುಕಾರ ಮಧೋಳ, ಸಿದ್ಧಣ್ಣ ಮಲಗಲದಿನ್ನಿ, ಭೀಮರಾಯ ಮೂಲಿಮನಿ, ಈಶ್ವರಪ್ಪ ಶ್ರೀಗಿರಿ, ಗೋಪಾಲ ದೊರೆ ಅರಿಕೇರಿ, ದೇವಣ್ಣಗೌಡ ಶ್ರೀನಿವಾಸಪುರ, ಶರಣು ಶಾಂತಪುರ, ಅಂಬ್ರೇಶ ದೇಸಾಯಿ, ಬಸವರಾಜ ಶ್ರೀನಿವಾಸಪುರ, ರವಿ ಮಲಗಲದಿನ್ನಿ, ತಾರನಾಥ ಚವ್ಹಾಣ ಸೇರಿದಂತೆ ಇತರರಿದ್ದರು.