Advertisement

ಬಿಸಿ ತಣಿಸಲು ಜನರು ಈಜುಕೊಳದತ್ತ; ನೀರಿನ ಕೊರತೆ ತಣಿಸಲು ಟ್ಯಾಂಕರ್‌ನತ್ತ

08:48 PM Jun 02, 2019 | sudhir |

ಉಡುಪಿ: ನಗರದಲ್ಲಿ ಬಿಸಿಲ ಧಗೆ ಏರುತ್ತಿದ್ದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ನಗರದ ಅಜ್ಜರಕಾಡುವಿನಲ್ಲಿ ಇರುವ ಸರಕಾರಿ ಈಜುಕೊಳದತ್ತ ಮುಖ ಮಾಡಿದ್ದಾರೆ.

Advertisement

ಸುಮಾರು 2 ಕೋ.ರೂ., ವೆಚ್ಚದಲ್ಲಿ ನಿರ್ಮಿಸಿರುವ ಈಜುಕೊಳ 25 ಮೀ. ಉದ್ದ, 22 ಮೀ. ಅಗಲವಿದ್ದು, 8 ಲೈನ್‌ಗಳನ್ನು ಹೊಂದಿದೆ. ಒಂದು ಬಾರಿಗೆ 80 ಜನರು ಈಜಾಡಬಹುದು. ಎಲ್ಲ ವಯೋಮಾನದವರಿಗೆ ಗಂಟೆಗೆ 30 ರೂ. ಶುಲ್ಕ ನಿಗದಿ ಪಡಿಸಲಾಗಿದೆ.

ಈಜುಕೊಳಕ್ಕೆ ಬರುವವರ ಸಂಖ್ಯೆ ಹೆಚ್ಚಳ
ಕಡಿಮೆ ಶುಲ್ಕವಿದ್ದರೂ ಜನರು ಕೊಳಕ್ಕೆ ಬಂದು ಈಜಲು ಮುಂದಾಗುತ್ತಿಲ್ಲ ಎನ್ನುವ ಬೇಸರದಲ್ಲಿದ್ದ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಇದೀಗ ಬೇಸಗೆಯಲ್ಲಿ 450-500ಕ್ಕೆ ಮಂದಿ ಬರುತ್ತಿರುವುದು ಖುಷಿ ತಂದಿದೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಸರಸಾರಿ 250- 300 ಮಂದಿ, ಜೂನ್‌ನಿಂದ ಅಕ್ಟೋಬರ್‌ ತಿಂಗಳ ಮಧ್ಯಾವಧಿಯಲ್ಲಿ 100- 120 ಮಂದಿ ಬರುತ್ತಾರೆ.

2 ತಿಂಗಳ ಆದಾಯ 10 ಲ. ರೂ.
ಈ ಬಾರಿ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ 10 ಲ.ರೂ ಆದಾಯ ಗಳಿಸಿದೆ. ಉಳಿದ ತಿಂಗಳಲ್ಲಿ ಈಜುಕೊಳದ ಆದಾಯ 1ಲ.ರೂ. ಆಗಿದೆ.

ಕೊಳಕ್ಕೆ 10 ಲ.ಲೀಟರ್‌ ನೀರು
ಈಜುಕೊಳ ತುಂಬಲು 10 ಲ.ಲೀಟರ್‌ ನೀರಿನ ಅಗತ್ಯವಿದೆ. ವಾರಕ್ಕೊಮ್ಮೆ ನೀರನ್ನು ಬದಲಾಯಿಸಲಾಗುತ್ತದೆ. ಪರುಷರಿಗೆ ಬೆಳಗ್ಗೆ 6ಗಂಟೆಯಿಂದ 10 ಮತ್ತು ಅಪರಾಹ್ನ 3ರ ವರೆಗೆ ಹಾಗೂ ರಾತ್ರಿ 8ಗಂಟೆಯವರೆಗೆ ಈಜುಕೊಳಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮಹಿಳೆಯರಿಗೆ ಸಂಜೆ 6 ರಿಂದ 7 ಗಂಟೆಯವರೆಗೆ ಸಮಯ ನಿಗದಿ ಪಡಿಸಲಾಗಿದೆ. ಸಣ್ಣ ಮಕ್ಕಳಿಗೆ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ.

Advertisement

ನೀರಿಗೆ 1.44 ಲ. ರೂ ವೆಚ್ಚ
ನೀರಿನ ಸಮಸ್ಯೆ ಬಿಸಿ ಈ ಬಾರಿ ಜಿಲಾ ಈಜುಕೊಳಕ್ಕೆ ತಟ್ಟಿದೆ. ಕೊಳಕ್ಕೆ ಅಜ್ಜರಕಾಡುವಿನಲ್ಲಿರುವ ಜಿಲ್ಲಾಧಿಕಾರಿಗಳ ಮನೆ ಸಮೀಪದ ಸರಕಾರಿ ಬಾವಿ ಮತ್ತು ಇಲಾಖೆಯ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು.
ಆದರೆ ಈ ಬಾರಿ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗುವುದುರಿಂದ ಈಜುಕೊಳಕ್ಕೆ ಟ್ಯಾಂಕರ್‌ ನೀರು ಬಳಕೆ ಅನಿವಾರ್ಯವಾಗಿದೆ. ಪ್ರತಿ ದಿನ 4,500 ರೂ., ಹಾಗೂ ತಿಂಗಳಿಗೆ 1.4 ಲ.ರೂ., ನೀರಿಗಾಗಿ ವ್ಯಯಿಸಲಾಗುತ್ತಿದೆ.

ನಿರ್ವಹಣೆ ದುಬಾರಿ
ಈಜುಕೊಳದ ತಿಂಗಳ ಆದಾಯಕ್ಕಿಂತ ನಿರ್ವಹಣೆಯ ವೆಚ್ಚ ಅಧಿಕವಾಗಿದೆ. ಸಿಬಂದಿಗಳ ತಿಂಗಳ ವೇತನ 1.2 ಲ.ರೂ., ವಿದ್ಯುತ್‌ ಬಿಲ್‌ 45,000 ರೂ., ನೀರನ್ನು ಶುದ್ಧಿಕರಣಕ್ಕೆ ಬಳಸುವ ರಾಸಾಯನಿಕ ವಸ್ತು ಖರೀದಿಗೆ 28,000 ರೂ., ಸೇರಿದಂತೆ ಒಟ್ಟು 2 ಲ. ರೂ., ವ್ಯಯಿಸಲಾಗುತ್ತಿದೆ.

ಬೇಸಗೆ ಶಿಬಿರ
ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಕ್ಕಳಿಗೆ ಬೇಸಗೆ ರಜೆ ಇರುವುದರಿಂದ ಬೇಡಿಕೆಗೆ ಅನುಗುಣವಾಗಿ ಮೂರು ಹಂತದಲ್ಲಿ ಈಜು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ನಡೆದ ಶಿಬಿರದಲ್ಲಿ ಸುಮಾರು 150 ಮಕ್ಕಳು ಪಾಲ್ಗೊಂಡಿದ್ದಾರೆ.

ವಾರ್ಷಿಕ 25ಲ.ರೂ ಆದಾಯ
ಈಜುಕೊಳ‌ ವಾರ್ಷಿಕವಾಗಿ 25 ಲ.ರೂ. ಆದಾಯ ಗಳಿಸುತ್ತಿದೆ. ಅದರಲ್ಲಿ 23 ಲ. ರೂ., ಈಜುಕೊಳದ ನಿರ್ವಹಣೆಗೆ ವ್ಯಯಿಸಲಾಗುತ್ತದೆ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ,
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next