Advertisement
ಭಾನುವಾರ ಜೋಗುಪಾಳ್ಯ, ಮೋಟಪ್ಪನ ಪಾಳ್ಯದಲ್ಲಿ ಮತ ಯಾಚನೆ ಮಾಡಿದ ಅವರು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ಶಾಂತಿ ನಗರ ಜನರ ಜತೆ ಬೆರೆತು ಕೆಲಸ ಮಾಡಿದ್ದೇನೆ. ಜನರು ಈಗಲೂ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
Related Articles
Advertisement
ಚುನಾವಣೆ ಬಳಿಕ ಬಹುತೇಕರಿಗೆ ಹಕ್ಕುಪತ್ರ, ಮಂಜೂರಾತಿ ನೀಡಲಾಗುತ್ತದೆ. ಉಳಿದಂತೆ ಹೆಚ್ಚುವರಿಯಾಗಿ 900 ಜನರಿಗೆ ಸೂಳೆಗುಂಟೆಯಲ್ಲಿ ವಸತಿ ನಿರ್ಮಿಸಲು ಚಾಲನೆ ನೀಡಲಾಗುವುದು. ಅಲ್ಲಿಯೂ ಬಹುತೇಕ ಆರು ತಿಂಗಳಲ್ಲಿ ಮನೆ ಹಂಚಿಕೆ ಮಾಡುವ ಗುರಿ ಇದೆ.
1520 ಬಡ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ಕಟ್ಟುವುದೂ ಅವರಿಗೆ ಕಷ್ಟದ ಕೆಲಸ. ಇಂಥ ಸಂದರ್ಭದಲ್ಲಿ ಮನೆ ಹಂಚಿಕೆ ಆಗುವವರೆಗೆ ಅವರಿಗೆ ಬಾಡಿಗೆ ಮೊತ್ತ ಪಾವತಿಸಬೇಕು ಎಂದು ಮುಖ್ಯಮಂತ್ರಿಗೆ ನಾನು ಮನವಿ ಮಾಡಿದ್ದೇನೆ. ಅವರು ಸಹ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಎಲ್ಲ ಮಕ್ಕಳೂ ಶಾಲೆಗೆ ಹೋಗ್ತಾರೆ: ನಾವು ವರ್ಷ ಪೂರ್ತಿ ಜನರ ಪರ ಕೆಲಸ ಮಾಡಿಕೊಂಡೇ ಬಂದಿದ್ದೇವೆ. ಎದುರಾಳಿಗಳಿಂದ ಒಂದೇ ಒಂದು ಜನಪರ ಕೆಲಸವಿಲ್ಲ. ಶಾಂತಿ ನಗರದ ಜನ ಬುದ್ಧಿವಂತರು. ಎಲ್ಲವನ್ನೂ ಗಮನಿಸುತ್ತಾರೆ. ಬಡತನ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನಮ್ಮ ಕ್ಷೇತ್ರದಲ್ಲಿ ಎಲಾ ಮಕ್ಕಳು ಶಾಲೆಗೆ ಹೋಗುತ್ತಾರೆ. ಮಕ್ಕಳ ಕಲಿಕೆಗೆ ನಾನು ಪೂರಕ ವಾತಾವರಣ ಕಲ್ಪಿಸಿಕೊಟ್ಟಿದ್ದೇನೆ ಎಂದರು.