Advertisement
ಅಮೆರಿಕ ರಕ್ಷಣ ಇಲಾಖೆಯ ಡಿಫೆನ್ಸ್ ಸೆಕ್ಯುರಿಟಿ ಕಾರ್ಪೊರೇಶನ್ ಏಜೆನ್ಸಿ ಸಂಸತ್ತಿಗೆ ನೀಡಿದ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಿದೆ. “ಅಮೆರಿಕ- ಭಾರತ ಕಾರ್ಯತಂತ್ರದ ಭಾಗವಾಗಿ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆ ಬೆಂಬಲಿಸುವ ಉದ್ದೇಶದಿಂದ ಹರ್ಕ್ಯು ಲಸ್ ಬಿಡಿಭಾಗಗಳ ಮಾರಾಟ ನಡೆಯಲಿದೆ. ಉಭಯ ದೇಶಗಳ ನಡುವಿನ ರಾಜಕೀಯ ಸ್ಥಿರತೆ, ಶಾಂತಿ, ಆರ್ಥಿಕ ಪ್ರಗತಿಗೆ ಇದು ಸಹಕಾರಿ’ ಎಂದು ಏಜೆನ್ಸಿ ಹೇಳಿದೆ.
ಸಿ-130 ಜೆ ಸೂಪರ್ ಹರ್ಕ್ಯುಲಸ್ ಕಾರ್ಗೋ ಏರ್‌ಕ್ರಾಫ್ಟ್ಗೆ ಸಂಬಂಧಿಸಿದ ಬಿಡಿಭಾಗಗಳು, ದುರಸ್ತಿ ಉಪಕರಣಗಳು, ಕಾಟ್ರಿಡ್ಜ್ ಆಕ್ಯುಯೆಟೆಡ್ ಡಿವೈಸಸ್, ಫೈರ್ ಎಕ್ಸ್‌ಟಿಂಗ್ವಿಷರ್ ಕಾಟ್ರಿಡ್ಜ್ , ಫ್ಲೇರ್ ಕಾಟ್ರಿಡ್ಜ್, ಬಿಬಿಯು- 35/ಬಿ ಕಾಟ್ರಿಡ್ಜ್ ಇಂಪಲ್ಸ್ ಸ್ಕ್ವಿಬ್ಸ್, ಎಎನ್/ ಎಎಲ್‌ಆರ್-56 ಎಂ ಸುಧಾರಿತ ರಾಡಾರ್ ವಾರ್ನಿಂಗ್ ರಿಸೀವರ್ ಶಿಪ್‌ಸೆಟ್, 10 ಲೈಟ್‌ವೇಟ್ ನೈಟ್ ವಿಷನ್ ಬೈನಾಕ್ಯುಲರ್, ನೈಟ್ ವಿಷನ್ ಗಾಗಲ್, ಜಿಪಿಎಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್‌ಗಳ ಖರೀದಿಗೆ ಭಾರತ ಒಲವು ತೋರಿತ್ತು.