Advertisement

Police: ಪೆಂಟಗನ್‌ ಮಾದರಿ ಪೊಲೀಸ್‌ ವಾರ್‌ರೂಮ್‌!

07:56 PM Sep 25, 2023 | Team Udayavani |

ಹೈದರಾಬಾದ್‌: ಅಮೆರಿಕದ ಪೆಂಟಗಾನ್‌ ಮಿಲಿಟರಿ ಕಮಾಂಡ್‌ ಸೆಂಟರ್‌ ಮಾದರಿಯಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪೊಲೀಸ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌(ಐಸಿಸಿಸಿ) ಅನ್ನು ಹೈದರಾಬಾದ್‌ನಲ್ಲಿ ತೆಲಂಗಾಣ ಸರ್ಕಾರ ಸ್ಥಾಪಿಸಿದೆ. ಒಂದು ಲಕ್ಷ ಕ್ಯಾಮೆರಾಗಳ ಮೇಲ್ವಿಚಾರಣೆ, ಸಂಚಾರ ಮೇಲ್ವಿಚಾರಣಾ ವ್ಯವಸ್ಥೆ ಸೇರಿದಂತೆ ಕಟ್ಟಡದ ಮೇಲ್ಭಾಗದಲ್ಲೇ ಹೆಲಿಪ್ಯಾಡ್‌ ಕೂಡ ಹೊಂದಿರುವುದು ಈ ವಾರ್‌ರೂಮ್‌ನ ವಿಶೇಷ.

Advertisement

ಹೈದರಾಬಾದ್‌ನಲ್ಲಿ ಪೊಲೀಸ್‌ ಆಯುಕ್ತರ ಕೇಂದ್ರ ಕಚೇರಿಯ ಆವರಣದಲ್ಲೇ ಐಸಿಸಿಸಿ ನಿರ್ಮಾಣಗೊಂಡಿದ್ದು, ನಗರದಾದ್ಯಂತ ಭದ್ರತೆಗೆ ಅಳವಡಿಸಿರುವ 1 ಲಕ್ಷಕ್ಕೂ ಅಧಿಕ ಕಣ್ಗಾವಲು ಕ್ಯಾಮೆರಾಗಳ ವಿಡಿಯೋಗಳನ್ನು ಇಲ್ಲಿಂದಲೇ ಮೇಲ್ವಿಚಾರಣೆ ಮಾಡಬಹುದಾಗಿದೆ. ಅಲ್ಲದೇ, ವಾಹನಗಳ ಸಂಚಾರವನ್ನು ಪ್ರತಿಕ್ಷಣ ಗಮನಿಸುವ ವ್ಯವಸ್ಥೆಯನ್ನೂ ಒಳಗೊಂಡಿದ್ದು, ತುರ್ತು ಸಂದರ್ಭಗಳ ಅಗತ್ಯತೆಗಾಗಿ ಹೆಲಿಪ್ಯಾಡ್‌ ಅನ್ನು ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next