ಕೋಟ: ಉಡುಪಿ ಜಿಲ್ಲೆಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಆಯನೂರು ಮಂಜುನಾಥ್ ಅವರನ್ನು ಉಡುಪಿಯಲ್ಲಿ ಭೇಟಿಯಾಗಿ ಪಿಂಚಣಿ ವಂಚಿತ ನೌಕರರ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ವಿ.ಪ.ಸದಸ್ಯರು ಶಿಕ್ಷಕರ ಜಲ್ವಂತ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸುವುದರ ಮೂಲಕ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಭದ್ರತೆಯ ಕಾನೂನು ರಚಿಸಿಲ್ಲ. ಪ್ರಾಮಾಣಿಕ ಶಿಕ್ಷಕರ ಮೇಲೆ ಮಾಡುವ
ಸುಳ್ಳು ಆರೋಪಗಳನ್ನು ನಾನು ಸಹಿಸುವುದಿಲ್ಲ. ಶಿಕ್ಷಕರು ನಿಜವಾಗಿ ತಪ್ಪು ಮಾಡಿದರೆ ಶಿಕ್ಷೆ ನೀಡುವುದು ನ್ಯಾಯ ಮತ್ತು ಜನಗಣತಿ, ಮಕ್ಕಳ ಗಣತಿ, ಪಠಪುಸ್ತಕ, ಸೆ„ಕಲ್, ವಿಟಮಿನ್ ಮಾತ್ರೆ ಇತ್ಯಾದಿ ಹಂಚಿಕೆ ಕಾರ್ಯಕ್ಕೆ ಶಿಕ್ಷಕರನ್ನು ನೇಮಿಸುವುದು ಸರಿಯಲ್ಲ.
ಇದಕ್ಕಾಗಿ ಶಾಲೆಯಲ್ಲಿ ಡಿ’ ದರ್ಜೆಯ ನೌಕರರ ನೇಮಕ, ನ್ಯಾಯಾಂಗದ ಹೋರಾಟ ಮಾಡಿ ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಗಣೇಶ ಶೆಟ್ಟಿಗಾರ್, ಉಪಾಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ, ಕಾರ್ಯದರ್ಶಿ ಸಚಿನ್ ಕುಮಾರ್ ಶೆಟ್ಟಿ, ಜತೆಕಾರ್ಯದರ್ಶಿ ಪ್ರಕಾಶ ಮಾಕೋಡು, ಸಂಘದ ಪ್ರಮುಖರಾದ ಜಯಶೀಲ ಶೆಟ್ಟಿ, ನಾರಾಯಣ ಶೆಣೆ„, ಚಂದ್ರಶೇಖರ ಭಟ್, ಸುರೇಶ ಪಡುಬೆಳ್ಳೆ, ನಾರಾಯಣಮೂರ್ತಿ, ಶಂಭುಭಟ್ಟ, ಸುರೇಶ ನಾಯಕ್, ದುಗ್ಗಯ್ಯ ನಾಯಕ್, ಸಂಜೀವ ಮುದ್ರಾಡಿ, ನಂದನ್ ಕುಮಾರ್, ಸುದೇಶ್ ಶೆಟ್ಟಿ, ಜಗದೀಶ ಇದ್ದರು.