Advertisement
ಹುತಾತ್ಮ ಯೋಧರ ಪಿಂಚಣಿ ಮೊತ್ತವನ್ನು ವಿಭಜಿಸಿ ನೀಡುವ ಬಗ್ಗೆ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂದು ಯೋಧರ ಕುಟುಂಬಗಳಿಂದ ಕೋರಿಕೆಗಳು ಬಂದಿವೆಯೇ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಉತ್ತರಿಸಿದ ಸಚಿವ ಸಂಜಯ್ ಸೇs…, “ಪಿಂಚಣಿಯನ್ನು ಪತ್ನಿ ಮತ್ತು ಹೆತ್ತವರಿಗೆ ವಿಭಜಿಸಿ ನೀಡುವ ಕುರಿತ ಪ್ರಸ್ತಾವನೆಗಳು ಬಂದಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ. ಭಾರತೀಯ ಸೇನೆ ಕೂಡ ಈ ನಿಯಮ ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಹುತಾತ್ಮ ಯೋಧರ ಪಿಂಚಣಿ ಮತ್ತು ಇತರ ಸೌಲಭ್ಯಗಳು ಪತ್ನಿಗೆ ಮಾತ್ರ ಸಿಗುವುದರ ಬಗ್ಗೆ ಹೆತ್ತವರು ತಕರಾರು ಎತ್ತಿರುವ, ಇದೇ ಕಾರಣಕ್ಕೆ ಕುಟುಂಬಗಳಲ್ಲಿ ವೈಮನಸ್ಸು ಉಂಟಾಗಿರುವ ಅನೇಕ ಘಟನೆಗಳು ನಡೆದಿವೆ. ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಕ್ಯಾಣ ಅಂಶುಮಾನ್ ಸಿಂಗ್ ಅವರ ಪಿಂಚಣಿ, ಇತರ ವಿತ್ತೀಯ ಸವಲತ್ತುಗಳನ್ನು ಹಂಚಿಕೊಳ್ಳುವ ವಿಚಾರವಾಗಿ ಪತ್ನಿ ಮತ್ತು ಹೆತ್ತವರ ನಡುವೆ ಉಂಟಾಗಿದ್ದ ಜಗಳ ಭಾರೀ ಸುದ್ದಿಯಾಗಿತ್ತು.
ಪ್ರಸ್ತುತ ನಿಯಮ ಪ್ರಕಾರ ಹುತಾತ್ಮ ಯೋಧನ ಕೌಂಟುಂಬಿಕ ಪಿಂಚಣಿ ಮೊತ್ತವನ್ನು ಪತ್ನಿಗೆ ಮಾತ್ರ ನೀಡಲಾಗುತ್ತದೆ. ಆ ಯೋಧ ಅವಿವಾಹಿತನಾಗಿದ್ದರೆ ಮಾತ್ರ ಪಿಂಚಣಿ ಮೊತ್ತ ಹೆತ್ತವರಿಗೆ ಸಿಗುತ್ತದೆ. ಇನ್ನು ಗ್ರಾಚುಯಿಟಿ, ವಿಮೆ, ಭವಿಷ್ಯ ನಿಧಿ ಇತ್ಯಾದಿ ಹುತಾತ್ಮನ ನಾಮಿನಿಗೆ ನೀಡಲಾಗುತ್ತದೆ.