Advertisement

ಬೈಕುಲ ಝೂನಲ್ಲಿ ಪೆಂಗ್ವಿನ್‌ ಸಂಖ್ಯೆ 12ಕ್ಕೆ ಏರಿಕೆ

08:47 PM Nov 19, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಮುಂಬೈನ ವೀರಮಾತಾ ಜೀಜಾಬಾಯಿ ಬೋಸಲೆ ಉದ್ಯಾನ ಮತ್ತು ಮೃಗಾಲಯದಲ್ಲಿ ಹಂಬೋಲ್ಟ್ ಪೆಂಗ್ವಿನ್‌ಗಳು ಮೂರು ಮರಿಗಳಿಗೆ ಜನ್ಮ ನೀಡಿವೆ. ಇದರಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಪೆಂಗ್ವಿನ್‌ ಮರಿಗಳು ಸೇರಿವೆ. ಈ ಮೂಲಕ ಬೈಕುಲ್ಲಾ ಮೃಗಾಲಯ ಅಥವಾ ರಾಣಿ ಬಾಗ್‌ ಎಂದೇ ಖ್ಯಾತವಾಗಿರುವ ಈ ಮೃಗಾಲಯದಲ್ಲಿ ಪೆಂಗ್ವಿನ್‌ಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

Advertisement

ಕೆಲವು ತಿಂಗಳ ಹಿಂದೆ ಈ ಮರಿಗಳ ಜನ್ಮವಾದರೂ ಮೃಗಾಲಯವೂ 160 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈಗ ಘೋಷಣೆ ಮಾಡಲಾಗಿದೆ.

ಹೆಣ್ಣು ಪೆಂಗ್ವಿನ್‌ ಮರಿಗೆ ಅಲೆಕ್ಸಾ, ಒಂದು ಗಂಡು ಮರಿಗೆ ಫ್ಲಾಶ್‌, ಮತ್ತೂಂದು ಮರಿಗೆ ಬಿಂಗೊ ಎಂದು ನಾಮಕರಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next