Advertisement

160 ಜನರ ವರದಿ ಬರೋದು ಬಾಕಿ

07:08 AM May 18, 2020 | Suhan S |

ಗದಗ: ಜಿಲ್ಲೆಯಲ್ಲಿ ಹೊಸದಾಗಿ 168 ಸೇರಿದಂತೆ ಕೋವಿಡ್ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 3304ಕ್ಕೆ ಆಗಿದೆ ಈ ಪೈಕಿ 594 ಜನರು 28 ದಿನಗಳ ನಿಗಾ ಅವಧಿ  ಪೂರೈಸಿದ್ದಾರೆ. 2696 ಮನೆಯಲ್ಲಿ ಮತ್ತು 13 ಜನರು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಕೋವಿಡ್ ಸೋಂಕು ಪರೀಕ್ಷೆಗಾಗಿ ಒಟ್ಟು 3,475 ಜನರಿಂದ ಮಾದರಿ ಸಂಗ್ರಹಿಸಿದ್ದು, 3218 ವರದಿಗಳು ನಕಾರಾತ್ಮಕವಾಗಿವೆ.

Advertisement

ಇನ್ನುಳಿದಂತೆ 85 ಮಾದರಿ ತಿರಸ್ಕೃತಗೊಂಡಿದ್ದು, 160 ವರದಿಗಳು ಬಾಕಿ ಇವೆ. ಜಿಲ್ಲೆಯಲ್ಲಿ ಒಟ್ಟು 12 ಕೋವಿಡ್‌ -19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಪಿ-166 ಕಾರ್ಡಿಕ್‌ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ. ಪಿ-166, ಪಿ-304, ಪಿ-370, ಪಿ-396, ಪಿ-514, ಪಿ-912 ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 6 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next