Advertisement
ನವನಗರದ ಡಿಟಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮೆಟ್ರಿಕ್ ನಂತರ ಮಾದರಿ ವಸತಿ ನಿಲಯ ಹಾಗೂ ಶಿಗಿಕೇರಿ ಬಳಿಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳ ವಿದ್ಯುತ್ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಕರೆಂಟ್ ಇಲ್ಲದೇ ಸಮಸ್ಯೆ ಅನುಭವಿಸಿದರು.
Related Articles
Advertisement
ನಮ್ಮ ಹಾಸ್ಟೆಲ್‌ನಲ್ಲಿ ಒಟ್ಟು 3 ಮೀಟರ್ ಇವೆ. ಗೀಸರ್, ಕೊಳವೆಬಾವಿ ಹಾಗೂ ಹಾಸ್ಟೆಲ್‌ಗೆ ಬಳಸುವ 3 ಮೀಟರ್ ಗಳ ಮಾಸಿಕ ಬಿಲ್ ಸುಮಾರು 20-25 ಸಾವಿರ ಬರುತ್ತದೆ. ಕಳೆದ 2020ರ ನವ್ಹೆಂಬರ್‌ನಿಂದ ಕರೆಂಟ್ ಬಿಲ್ ಬಾಕಿ ಇದ್ದು, ಅದು ಸುಮಾರು 1.80 ಲಕ್ಷವಾಗಿದೆ. ಈ ಬಿಲ್ ಪಾವತಿಸಲು ತಾಲೂಕು ಕಚೇರಿಗೆ ಬಿಲ್ ಸಲ್ಲಿಸಲಾಗಿದೆ. ಪಾವತಿಯಾಗದ ಕಾರಣ, ಹೆಸ್ಕಾಂನಿಂದ ನೋಟಿಸ್ ನೀಡಿ ವಿದ್ಯುತ್ ಕಡಿತಗೊಳಿಸಿದ್ದರು. ಈ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶೀಘ್ರ ಬಾಕಿ ಪಾವತಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಹೆಸ್ಕಾಂ ಅಧಿ ಕಾರಿಗಳಿಗೆ ಮನವಿ ಮಾಡಿಕೊಂಡ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ನವನಗರದ ಹಾಸ್ಟೆಲ್ ವೊಂದರ ವಾರ್ಡನ್ ಪತ್ರಿಕೆಗೆ ತಿಳಿಸಿದರು.
ವಿದ್ಯಾರ್ಥಿಗಳ ಆಕ್ರೋಶಹಾಸ್ಟೆಲ್ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು ಅನುದಾನ ನೀಡುತ್ತದೆ. ಕಳೆದ ವರ್ಷ ಹಾಸ್ಟೆಲ್ ನಿರ್ವಹಣೆ ಕೋಟ್ಯಂತರ ಅನುದಾನದಲ್ಲಿ ದುಬಾರಿ ಬೆಲೆಯ ಟಿವಿ, ಫ್ರಿಡ್ಜ್, ತರಕಾರಿ ಇಡುವ ರ್ಯಾಕ್, 300ಕ್ಕೂ ಹೆಚ್ಚು ಬೆಲೆ ಊಟದ ತಟ್ಟೆ ಹೀಗೆಲ್ಲ
ಖರೀದಿಸಿದ ಲೆಕ್ಕ ತೋರಿಸಿದ್ದಾರೆ. ಕೆಲವು ಹಾಸ್ಟೆಲ್‌ಗಳಿಗೆ ಸಾಮಗ್ರಿಗಳೇ ಬಂದಿಲ್ಲ. ಈ ಭ್ರಷ್ಟಾಚಾರದ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಬಿಸಿಎಂ ಇಲಾಖೆ ಜಿಲ್ಲಾ ಅಧಿ ಕಾರಿ ಮತ್ತು ತಾಲೂಕು ಅಧಿ ಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.