Advertisement

Traffic rules: 30 ಸಾವಿರ ರೂ. ಸ್ಕೂಟರ್‌ಗೆ 1.35 ಲಕ್ಷ ರೂ.ದಂಡ!

03:43 PM Dec 13, 2023 | Team Udayavani |

ಬೆಂಗಳೂರು: ಈ ದ್ವಿಚಕ್ರ ವಾಹನದ ಬೆಲೆ ಸುಮಾರು 30-40 ಸಾವಿರ ರೂ. ಇರಬಹುದು. ಆದರೆ, ಆ ವಾಹನದ ವಿರುದ್ಧ ಬರೋಬ್ಬರಿ 225 ಸಂಚಾರ ನಿಯಮ ಉಲ್ಲಂಘನೆಯ ಕೇಸ್‌ಗಳಿದ್ದು, 1.35 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

ಜಯನಗರದ ರಾಗಿಗುಡ್ಡ ನಿವಾಸಿ ಏಳುಮಲೈ ಅವರ ದ್ವಿಚಕ್ರ ವಾಹನದ ವಿರುದ್ಧ ಸಂಚಾರ ಪೊಲೀಸರು 225 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು, 1,34 ಲಕ್ಷ ರೂ. ದಂಡ ವಿಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ಇದಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದರು. ಏಳುಮಲೈ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದು, ಜಯನಗರದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಮನೆ ಸಮೀಪ ಓಡಾಡುವಾಗ ಏಳುಮಲೈ ಹಾಗೂ ಅವರ ಪುತ್ರ ಹೆಲ್ಮೆಟ್‌ ಧರಿಸದೆ ಓಡಾಡುತ್ತಿದ್ದರು. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಈ ಸಂಬಂಧ ಸಂಚಾರ ಪೊಲೀಸರು 225 ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ವಾಹನ ಪರಿಶೀಲನೆ ವೇಳೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಾಹನ ಮಾಲೀಕ ಏಳುಮಲೈ ಸದ್ಯ 20 ಪ್ರಕರಣಗಳ 10 ಸಾವಿರ ರೂ. ದಂಡ ಕಟ್ಟಿ ವಾಹನ ಬಿಡಿಸಿಕೊಂಡು ಹೋಗಿದ್ದಾರೆ. ಬಾಕಿ ಮೊತ್ತವನ್ನು ಪಾವತಿಸುವಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಯನಗರ ಸಂಚಾರ ಠಾಣೆಯ ಎಎಸ್‌ಐ ಮಹದೇವ್‌ ಮತ್ತು ಹೆಡ್‌ ಕಾನ್‌ ಸ್ಟೇಬಲ್‌ ರವಿಕುಮಾರ್‌ ಕಾರ್ಯಾಚರಣೆ ನಡೆಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next