ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದ, ಸ್ವಚ್ಛತೆ ಪಾಲಿಸದ ಹೋಟೆಲ್ ಮಾಲೀಕರ ವಿರುದ್ಧ ಹಾಗೂ ಕೋವಿಡ್ ಮಾರ್ಗಸೂಚಿಯನ್ನು ಅನುಸರಿದವರ ವಿರುದ್ಧ “ದಂಡಂ ದಶಗುಣಂ’ ಎಂಬಂತೆ ಭಾರೀ ಮೊತ್ತದ ದಂಡ ವಿಧಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸರ್ಕಾರದ ಆದೇಶವನ್ನು ಎದುರು ನೋಡುತ್ತಿದೆ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಅಸಡ್ಡೆ ತೋರುತ್ತಿರುವರಿಗೆ 1 ಸಾವಿರ ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಆಲೋಚಿಸಿದ್ದು,
ಅದರಂತೆ ಗ್ರಾಮ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳು, ಜಿಲ್ಲಾಮಟ್ಟದ ಸ್ಥಳೀಯ ಸಂಸ್ಥೆಗಳ ತಂಡ ರಚಿಸಲಾಗಿದೆ. ಸಾರ್ವಜನಿಕರು ಎಚ್ಚರ ತಪ್ಪಿದರೆ ದೊಡ್ಡ ಮಟ್ಟದ ದಂಡ ತೆರಬೇಕಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯಾದ ದಿನದಿಂದ ಚಿಕ್ಕಮಗಳೂರು ನಗರಸಭೆ ಮಾಸ್ಕ್ ಧರಿಸದ, ಕೋವಿಡ್-19 ಮಾರ್ಗಸೂಚಿ ಅನುಸರಿಸದವರ ವಿರುದ್ಧ ದಂಡ ವಿ ಸಿದ್ದು, ಇದುವರೆಗೂ 1ಲಕ್ಷ 47ಸಾವಿರ ರೂ. ದಂಡ ವಸೂಲಿ ಮಾಡಿದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ್ ತಿಳಿಸಿದರು.
ನಗರದಲ್ಲಿ 5 ತಂಡ ರಚಿಸಲಾಗಿದ್ದು, 1 ತಂಡದಲ್ಲಿ 8ರಿಂದ 10 ಸಿಬ್ಬಂದಿ ಾರ್ಯ ನಿರ್ವಹಿಸುತ್ತಿದ್ದಾರೆ. ಗುರುವಾರ ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆ, ಬೋಳರಾಮೇಶ್ವರ ದೇವಸ್ಥಾನ ವೃತ್ತ, ಉಪ್ಪಳ್ಳಿ ರಸ್ತೆ, ರತ್ನಗಿರಿ ರಸ್ತೆ, ಎಂ.ಜಿ. ರಸ್ತೆಯಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ದಂಡ ವಿಧಿ ಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತೀ ದಿನ 7ರಿಂದ8 ಸಾವಿರ ರೂ. ದಂಡ ವಸೂಲಿ ಮಾಡಲಾಗುತ್ತಿದೆ. ಗುರುವಾರ ಒಂದೇ ದಿನ ಸುಮಾರು 9ರಿಂದ10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಸದ್ಯ 100 ರೂ.ದಂಡ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಭಾರೀ ದಂಡ ವಿಧಿಸಲು ಚಿಂತನೆ ಮಾಡಿದ್ದು, ಸರ್ಕಾರದ ಆದೇಶ ಇನ್ನೂ ಬಂದಿಲ್ಲ, ಸರ್ಕಾರದ ಆದೇಶ ಬಂದರೇ ನಾಳೆಯಿಂದಲೇ ಭಾರೀ ದಂಡ ವಿಧಿ ಸಲಾಗುವುದು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ, ಸಂತೆ ಮೈದಾನಕ್ಕೆ ನಗರಸಭೆಯ ತಂಡ ಭೇಟಿ ನೀಡಿ ಇದುವರೆಗೂ ಕೋವಿಡ್ ಮಾರ್ಗಸೂಚಿ ಅನುಸರಿಸದ ವ್ಯಕ್ತಿಗಳಿಗೆ ದಂಡ ವಿಧಿಸಿದ್ದು, ಸುಮಾರು 25ರಿಂದ 30 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. 2 ಭಾರೀ ಹೊಟೇಲ್ ಮಾಲೀಕರು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರ ಸಭೆ ನಡೆಸಲಾಗಿದೆ. ಸ್ವಚ್ಛತೆ ಮತ್ತು ಕೋವಿಡ್-19 ಮಾರ್ಗಸೂಚಿಯನ್ನು ಅನುಸರಿಸುವಂತೆ ಅರಿವು ಮೂಡಿಸಿದ್ದೇವೆ. ದಂಡ ವಿಧಿ ಸುವ ಎಚ್ಚರಿಕೆ ನೀಡಿದ್ದೇವೆ. ಆದರೆ, ಕೆಲ ಹೊಟೇಲ್ ಮಾಲೀಕರು ಮತ್ತು ಅಂಗಡಿ- ಮುಂಗಟ್ಟು ಮಾಲೀಕರು ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸದಿದ್ದರೆ ಸಂಬಂಧಪಟ್ಟ ಅಂಗಡಿ, ಹೊಟೇಲ್ ಪರವಾನಗಿ ರದ್ದುಪಡಿಸಿ ಬಾಗಿಲು ಹಾಕಿಸುವ ಎಚ್ಚರಿಕೆ ನೀಡಿದರು.
ನಗರಸಭೆ ವತಿಯಿಂದ ಈಗಾಗಲೇ 1ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ವಿತರಣೆ ಮಾಡಲಾಗಿದೆ. ಸರ್ಕಾರ ಮತ್ತೂಮ್ಮೆ ಅನುದಾನ ನೀಡಿದರೆ ಮತ್ತೆ ಮಾಸ್ಕ್
ನೀಡಲು ಕ್ರಮ ಕೈಗೊಳ್ಳಲಾಗುವುದು. ನಗರಸಭೆ ದಂಡ ವಸೂಲಿ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ನಗರಸಭೆ ಸಿಬ್ಬಂದಿ ನಡುವೆ ವಾಗ್ವಾದ ತಪ್ಪಿಸುವ ಉದ್ದೇಶದಿಂದ ಡ್ರೆಸ್‌ಕೋಡ್ ತರಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜಿಲ್ಲಾ ಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಸಂಬಂಧ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತೀದಿನ ನಗರಸಭೆ 24 ಘನತ್ಯಾಜ್ಯ ಸಾಗಾಣಿಕೆ ಆಟೋಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದ ಅವರು, ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸುವರಿಗೆ ಭಾರೀ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.