Advertisement
ಅವರು ಶುಕ್ರವಾರ ಎಸ್‌ಐಟಿ ಮುಂದೆ ಹಾಜರಾಗಿ ಕೆಲವು ಮಹತ್ವದ ದಾಖಲೆಗಳನ್ನು ನೀಡಿದರು. ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿ, ಪೆನ್‌ಡ್ರೈವ್ ಹಂಚಿರುವ ಗ್ಯಾಂಗ್‌ನ ಪ್ರಮುಖರು ಹಾಗೂ ಪೆನ್‌ಡ್ರೈವ್ ಹಂಚಿಕೆ ಜಾಲದ ಸುಳಿವನ್ನೂ ಕೊಟ್ಟಿದ್ದೇನೆ. ಸೋರಿಕೆ ಮಾಡಿದ್ದು ಯಾರು ಎಂಬುದನ್ನೂ ತಿಳಿಸಿದ್ದೇನೆ. ಇದನ್ನು ಇಲ್ಲಿ ಹೇಳಲಾಗುವುದಿಲ್ಲ ಎಂದರು.
ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಇಂತಹ ಕೃತ್ಯ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿ ಹಾಸನದಲ್ಲಿ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗುತ್ತಿದೆ. ಒಂದು ವಾರದಲ್ಲಿ ಸಂಕಷ್ಟದಲ್ಲಿರುವ ಕುಟುಂಬದಲ್ಲಿರುವವರಿಗೆ ಸಂಬಂಧಿಸಿ ಮಹತ್ತರವಾದ ತೀರ್ಮಾನವನ್ನು ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳಲಿದ್ದಾರೆ. ಆದರೆ ಇನ್ನೊಂದು ವಾರದಲ್ಲಿ ಎಲ್ಲವೂ ಹೊರಗೆ ಬರಲಿದೆ ಎಂದರು.
Related Articles
Advertisement