Advertisement
ಚಿಕ್ಕಮಗಳೂರಿನಲ್ಲಿ ಅಳಿಯ ಅಮರ್ಥ್ಯ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣೆ ಮುಗಿದಿದ್ದು ಸಿದ್ದಾರ್ಥ್ ಮನೆಗೆ ರೆಸ್ಟ್ ಗೆ ಬಂದಿದ್ದೇನೆ’ಎಂದರು.
ಒಕ್ಕಲಿಗ ನಾಯಕರ ಪೈಪೋಟಿಯಂತೆ, ನನ್ನ ರಾಜೀನಾಮೆ ಬೇಕಂತೆ,ಕೊಡೋಣ ರಾಜೀನಾಮೆ. ಮುಗಿಸೋದೇ ಅಲ್ವಾ ಅವರ ಕೆಲಸ. ಕಿಂಗ್ ಆಫ್ ಬ್ಲಾಕ್ ಮೇಲ್” ಎಂದು ವ್ಯಂಗ್ಯವಾಗಿ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Related Articles
Advertisement
”ದೇವೇಗೌಡರು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದರು. ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ.ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ? ಇವರು ಲಾಯರ್ರಾ? ಜಡ್ಜಾ? ಹೋಗಿ ವಾದ ಮಾಡಲಿ’ ಎಂದರು. ‘ಎಲ್ಲಾ ಗೊತ್ತಿದೆ, ಕಥಾ ನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲವೂ ಇವರೇ. ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್ ಓಡಲ್ಲ, ನೀವು ತೋರಿಸುವುದಿಲ್ಲ. ನನ್ನ ಹೆಸರು ಇಲ್ಲದಿದ್ದರೆ ಪಾಪ ನಿದ್ದೆಯೇ ಬರುವುದಿಲ್ಲ’ ಎಂದು ತಿರುಗೇಟು ನೀಡಿದರು.