Advertisement
ಶುಕ್ರವಾರ ಬೆಳಗ್ಗೆ ಆಗಮಿಸುವು ದೆಂದು ನಿರ್ಧರಿಸಿದ್ದರೂ ವೈದ್ಯರು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಆರೋಗ್ಯ ತಪಾಸಣೆ ನಡೆಸಿ ಬಿಟ್ಟುಕೊಟ್ಟರು. 3.45 ಗಂಟೆ ಹೊತ್ತಿಗೆ ಮಠಕ್ಕೆ ಆಗಮಿಸಿದರು. ಬಂದ ತತ್‌ಕ್ಷಣ ವೀಲ್ ಚೆಯರ್‌ನಲ್ಲಿ ಬಡಗುಮಾಳಿಗೆ ಹೊರಗಿನ ಲಿಫ್ಟ್ ಮೂಲಕ ಬಡಗುಮಾಳಿಗೆಯ ಸ್ವಸ್ಥಾನಕ್ಕೆ ತೆರಳಿದರು. ಬಂದವರನ್ನು ಮಾತನಾಡಿಸುವುದು, ಪುಸ್ತಕ, ಪತ್ರಿಕೆಗಳ ಅವಲೋಕನ ನಡೆಸಿದ ಶ್ರೀಗಳು ಸಂಜೆ ನಿತ್ಯಾಹಿ°ಕಗಳನ್ನು ಪೂರೈಸಿ ಕಿರಿಯ ಸ್ವಾಮೀಜಿಯವರು ನಡೆಸಿದ ಪೂಜೆ, ಸಂಕೀರ್ತನೆಯಲ್ಲಿ ಕೆಲ ಹೊತ್ತು ಪಾಲ್ಗೊಂಡರು.
ಕೈಯಿಂದ ತಯಾರಿಸುವ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ರಿಯಾಯಿತಿ ನೀಡಬೇಕೆಂದು ರಂಗಕರ್ಮಿ ಪ್ರಸನ್ನ ಅವರು ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಗುರುವಾರ ಆಸ್ಪತ್ರೆಯ ಬೆಡ್‌ನಲ್ಲಿ ಕುಳಿತೇ ಬರೆದರು. ಆಸ್ಪತ್ರೆಗೂ ಸಂಸ್ಕೃತ ಗ್ರಂಥಗಳನ್ನು ತರಿಸಿ ಓದಿದರು. ಬೆಳಗ್ಗೆ ಪತ್ರಿಕೆಗಳನ್ನೂ ಓದಿದ್ದರು. ಸದ್ಯ ಕಿರಿಯ ಶ್ರೀಗಳು ಪರ್ಯಾಯ ಪೀಠಸ್ಥರು ಮಾಡುವ ಬೆಳಗ್ಗಿನ ಪಶ್ಚಿಮಜಾಗರ ಪೂಜೆ, ಮಧ್ಯಾಹ್ನದ ಮಹಾಪೂಜೆ, ಸಂಜೆಯ ಚಾಮರ ಸೇವೆಯಲ್ಲದೆ ಇತರ ಪೂಜೆಗಳನ್ನೂ ನಿರ್ವಹಿಸುತ್ತಿದ್ದಾರೆ.