Advertisement

ಮೋದಿ ಆಡಳಿತದ ಬಗ್ಗೆ ಅಸಮಾಧಾನವಿಲ್ಲ

06:00 AM Jun 06, 2018 | Team Udayavani |

ಮೈಸೂರು: ಪ್ರಧಾನಿ ಮೋದಿ ಆಡಳಿತದ ಬಗ್ಗೆ ಎಲ್ಲಿಯೂ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸಿಲ್ಲ. ಕೆಲ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿಯವರು ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಗಂಗಾನದಿ ಸ್ವಚ್ಛತೆ, ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದಿಲ್ಲ ಎನ್ನುವ ಎರಡು ಕಾರಣಗಳನ್ನು ಬಿಟ್ಟರೆ, ಅವರ ಎಲ್ಲ ಕಾರ್ಯಗಳು ಮೆಚ್ಚುಗೆಯಾಗಿವೆ. ಇದನ್ನು ಹೇಳಿದಾಗ ಕೆಲ
ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಕೊಂಡು ಮೋದಿ ಬಗ್ಗೆ ಪೇಜಾವರ ಶ್ರೀ ಅಸಮಾಧಾನ ಎನ್ನುವಂತೆ ವರದಿ ಮಾಡಿರುವುದು ಸರಿಯಲ್ಲ ಎಂದರು.

ಮಾಧ್ಯಮಗಳಲ್ಲಿ ಈ ರೀತಿಯ ವರದಿ ಬಂದ ಹಿನ್ನೆಲೆಯಲ್ಲಿ ಸಮಾಜದಲ್ಲಿ ತಮ್ಮ ಬಗ್ಗೆ ಹೊಸ ಚರ್ಚೆ ಆರಂಭವಾಗಿದ್ದು, ಇದಕ್ಕಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಈವರೆಗೆ ತಾವೆಂದೂ ಒಂದು ಪಕ್ಷ ಅಥವಾ ವ್ಯಕ್ತಿಯ ಪರ-ರೋಧವಾದ ಹೇಳಿಕೆಯನ್ನು ನೀಡಿಲ್ಲ. ತಮಗೆ ರಾಷ್ಟ್ರದ ಹಿತ ಮುಖ್ಯವೇ ಹೊರತು ಯಾರನ್ನೋ ಓಲೈಸುವ ಅಥವಾ ತೆಗಳುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಪಕ್ಷಾತೀತವಾಗಿ ಎಲ್ಲರಿಗೂ ಸಲಹೆ, ಮಾರ್ಗದರ್ಶನ ನೀಡುತ್ತೇನೆ. ಹಾಗೆಯೇ ಮೋದಿ ಉಳಿದಿರುವ ಇನ್ನೊಂದು ವರ್ಷದಲ್ಲಿ ಗಂಗಾನದಿ ಶುದ್ದೀಕರಣ, ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತ
ತರಲಿ ಎನ್ನುವ ಆಶಯದಿಂದ ಸಲಹೆ ನೀಡಿದ್ದೇನೆಯೇ ಹೊರತು, ಅಸಮಾಧಾನ ಅಲ್ಲ ಎಂದು ಸ್ಪಷ್ಟ ಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next