ಗೋವು ದೇವರಿಗೆ ಸಮಾನ. ನಮಗೆ ಉಪಯೋಗವಿರುವಷ್ಟು ದಿನ ಗೋವನ್ನು ಉಪಯೋಗಿಸಿ, ಅನಂತರ ತ್ಯಜಿಸುವುದು ತರವಲ್ಲ. ಇದು ಮನುಷ್ಯತ್ವಕ್ಕೆ ವಿರೋಧ. ನೀಲಾವರ ಗೋಶಾಲೆಗಾಗಿ ಗೋಗ್ರಾಸವನ್ನು ಸಮರ್ಪಿಸಿರುವುದು ದೇವರ ಸೇವೆಯನ್ನು ಮಾಡಿದ್ದಷ್ಟೇ ಪುಣ್ಯಪ್ರದಾಯಕ ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.
ವೇ|ಮೂ| ಪ್ರಸನ್ನಭಟ್-ಮಾಧವಿ ದಂಪತಿಯನ್ನು ಶ್ರೀಗಳು ಫಲ-ಮಂತ್ರಾಕ್ಷತೆ ನೀಡಿ ಹರಸಿದರು. ಮನೆಯ ಹಿರಿಯರಾದ ವಿಷ್ಣುಮೂರ್ತಿ ಭಟ್ ಅವರನ್ನು ಶಾಲು ಹೊದೆಸಿ ಶ್ರೀಗಳು ಸಮ್ಮಾನಿಸಿದರು.
Advertisement
ಮಧ್ವರಾಜ್ ಭಟ್, ಪರಶುರಾಮ ಭಟ್ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜೇಂದ್ರ ಶೆಟ್ಟಿ, ಸದಸ್ಯರಾದ ಗುರುರಾಜ್ ಭಟ್, ಸುಧಾಕರ್ ಪೂಜಾರಿ, ಎಡೆ¾àರು ಸ್ಥಳೀಯರು, ಗಿರಿಬಳಗ ಕುಂಜಾರು ಗಿರಿ, ಪಡುಬೆಳ್ಳೆ ಮತ್ತು ಮೂಡುಬೆಳ್ಳೆ ಬಜರಂಗದಳದ ಕಾರ್ಯಕರ್ತರು ಜೋಳದ ಹುಲ್ಲು ಕಟಾವು ನೆರವೇರಿಸಿದರು. ಇವರೆಲ್ಲರನ್ನು ಶ್ರೀಗಳು ಶಾಲು ಹೊದೆಸಿ, ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ವಿಶ್ವಪ್ರಸನ್ನ ತೀರ್ಥರು ಪ್ರಚಾರ ಬಯಸದ, ಗೋ ಸೇವೆಗಾಗಿ ಜೀವನವನ್ನೇ ಮುಡಿಪಾಗಿರಿಸಿದ ನೈಜ ಸಂತ, ಮೌನಿ ಸಾಧಕ. ಸಂತತ್ವ ಪದಕ್ಕೆ ನೈಜ ಅರ್ಥ ತುಂಬಿದ ಶ್ರೀಗಳು, ಕಾರ್ಯಾನುಷ್ಠಾನದ ಮೂಲಕ ಸಂದೇಶ ನೀಡುತ್ತಿರುವುದು ಅನುಕರಣೀಯ.
-ಕೇಮಾರು ಶ್ರೀ ಅಮಿತ ಉತ್ಸಾಹಿ ಶ್ರೀ
ಜೋಳದ ಹುಲ್ಲಿನ ಕಟಾವಿಗೆ ಚಾಲನೆ ನೀಡಿದ ಶ್ರೀಗಳು, ಉಪವಾಸದಲ್ಲಿದ್ದರೂ ಒಂದಿನಿತೂ ಆಯಾಸವಿಲ್ಲದಂತೆ ಸ್ವತಃ ಕಟಾವು ನಡೆಸಿದ್ದು ಶ್ಲಾಘನೆಗೆ ಕಾರಣವಾಯಿತು. ದಣಿವರಿಯದ ಅಮಿತ ಉತ್ಸಾಹಿ ಶ್ರೀಗಳು ಕತ್ತಿ ಹಿಡಿದು ಜನಸಾಮಾನ್ಯರಂತೆ ಬಿರುಸಿನಿಂದ ಕಟಾವು ನಡೆಸಿದ್ದು ಎಲ್ಲರ ಅಚ್ಚರಿ, ಮೆಚ್ಚುಗೆಗೆ ಕಾರಣವಾಯಿತು. ಶ್ರೀಗಳೊಂದಿಗೆ ಬಂದಿದ್ದ ಶಿಷ್ಯರೂ ಗುರುಗಳ ಮಾದರಿಯಲ್ಲೇ ಕಟಾವು ಕಾರ್ಯದಲ್ಲಿ ನೆರವಾದರು. ಎರಡು ಲೋಡ್ ಗೋಗ್ರಾಸವನ್ನು ನೀಲಾವರ ಗೋಶಾಲೆಗೆ ಸಮರ್ಪಿಸಲಾಯಿತು.
Related Articles
Advertisement