Advertisement

ಪೇಜಾವರ ಶ್ರೀಗಳಿಂದ ರಾಜ್ಯಪಾಲರ ಭೇಟಿ

04:29 PM Feb 09, 2021 | Team Udayavani |

ಮುಂಬಯಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಅವರು ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಅವರನ್ನು ರವಿವಾರ ರಾಜಭವನದಲ್ಲಿ ಭೇಟಿಯಾದರು.

Advertisement

ಅಯೋಧ್ಯ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ನೇಮಕಗೊಂಡಿರುವ ಪೇಜಾವರ ಶ್ರೀಗಳು ರಾಜ್ಯಪಾಲರನ್ನು ಭೇಟಿ ಮಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.

ಎಲ್ಲವೂ ಶ್ರೀಕೃಷ್ಣನ ಅನುಗ್ರಹದಿಂದ ನಡೆಯುತ್ತಿದ್ದು, ನಾವು ಎಂಬುವುದು ನೆಪ ಮಾತ್ರ. ಆರಾಧನೆಯಿಂದ ಒಳ್ಳೆಯ ಸಂಪತ್ತು ಮತ್ತು ವಿಜಯ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಪೂಜೆ, ಪುರಸ್ಕಾರ, ಆರಾಧನಾ ಕೇಂದ್ರವಾಗಿ ರೂಪುಗೊಳ್ಳುವ ಭವ್ಯ ಶ್ರೀರಾಮ ಮಂದಿರದ ಅಗತ್ಯವಿದೆ. ಮಹಾರಾಷ್ಟ್ರ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರು ಶ್ರೀರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನಕ್ಕೆ ಸಹಕರಿಸಬೇಕು. ರಾಜ್ಯದ ಜನತೆಯಲ್ಲೂ ಶ್ರೀರಾಮ ದೇವರ ಆರಾಧ್ಯ ಕೇಂದ್ರದ ಬಗ್ಗೆ ಅರಿವು ಮೂಡಿಸಿ ಇದೊಂದು ಸಮಸ್ತ ಭಕ್ತರ ಶ್ರದ್ಧಾಕೇಂದ್ರ ಆಗಿಸುವ ಪ್ರಯತ್ನ ನಡೆಸುವ ಆಶಯ ನಮ್ಮದಾಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಇದನ್ನೂ ಓದಿ:ಕೊರೊನಾ ಲಸಿಕೆ ಪಡೆದ ಜಿಲ್ಲಾಧಿಕಾರಿ ಜೋತ್ಸ್ನಾ

ಈ ಸಂದರ್ಭದಲ್ಲಿ ನಾಗಾಲ್ಯಾಂಡ್‌ನ‌ ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ, ವಿಶ್ವ ಹಿಂದೂ ಪರಿಷತ್‌ ಮಹಾರಾಷ್ಟ್ರ ಘಟಕದ ಕ್ಟಾಢ್ ದರ್ಶಿ ರಾಮಚಂದ್ರ ರಾಮುಕಾ, ಕೋಶಾಧಿಕಾರಿ ರಾವåಸ್ವರೂಪ್‌ ಅಗರ್ವಾಲ್‌, ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್‌ ಪುತ್ತಿಗೆ ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next