ಉಡುಪಿ: ಭಾರತ ಸರಕಾರದಿಂದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಕೊಡಮಾಡಿದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ನ. 11ರ ಸಂಜೆ 4.30ಕ್ಕೆ ಉಡುಪಿಯಲ್ಲಿ ಸ್ವಾಗತಿಸಲಾಗುವುದು.
ಉಡುಪಿ ಸಂಸ್ಕೃತ ಕಾಲೇಜಿನಿಂದ ಆಲಂಕೃತ ವಾಹನದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರ ಹಾಗೂ ಪದ್ಮವಿಭೂಷಣ ಪ್ರಶಸ್ತಿಯನ್ನು ಇಟ್ಟು ಚೆಂಡೆ ವಾದ್ಯಮೇಳಗಳ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠಕ್ಕೆ ತರಲಾಗುವುದು.
ಬಳಿಕ ಕೃಷ್ಣ ದೇವರಿಗೆ ಅರ್ಪಿಸಿ ಅಷ್ಟ ಮಠಾಧೀಶರಿಗೆ ಅದನ್ನು ಪ್ರದರ್ಶಿಸಿ ಬಳಿಕ ಪುನಃ ಅದೇ ವಾಹನದಲ್ಲಿ ಪೇಜಾವರ ಮಠಕ್ಕೆ ತರಲಾಗುವುದು. ಅಲ್ಲಿ ಗುರುಗಳ ಪೀಠದಲ್ಲಿಟ್ಟು ಅರ್ಪಿಸಿದ ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ವಿವಿಧ ಮಠಾಧೀಶರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸಭೆ ಪೇಜಾವರ ಮಠದ ಮುಂಭಾಗದಲ್ಲಿ ನಡೆಯಲಿದೆ.
ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್
ಪ್ರಶಸ್ತಿ ದೊರಕಿರುವುದು ಸಮಸ್ತ ಉಡುಪಿಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.