ಮಣಿಪಾಲ: ನಮ್ಮ ಶರೀರದ ಮತ್ತು ಮನಸ್ಸಿನ ಸ್ವಾಸ್ಯ ಉತ್ತಮವಾಗಿದ್ದರೆ ಮಾತ್ರ ಸದ್ರಡ ಜೀವನ ಸಾಗಿಸಲು ಸಾಧ್ಯ ಈ ನಿಟ್ಟಿನಲ್ಲಿ ಸೈಕ್ಲಿಂಗ್ ನಂತಹ ಚಿಟುವಟಿಕೆಗಳು ಪೂರಕವಾಗಿದೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ಆಶೀವ೯ಚನ ನೀಡಿದರು.
ಅವರು ಫೆ.27 ರಂದು ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಕೆನರಾ ಬ್ಯಾಂಕ್ ವೃತ್ತ ಕಚೇರಿ ಮತ್ತು ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಇದರ ಆಶ್ರಯದಲ್ಲಿ ನಡೆದ “ಆರೋಗ್ಯಕ್ಕಾಗಿ ಸೈಕ್ಲಿಂಗ್ “ಜಾಥಾವನ್ನು ಸ್ವತಃ ಸೈಕಲ್ ಸವಾರಿ ಮತ್ತು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.
ಮಣಿಪಾಲದಿಂದ ಮಲ್ಪೆ ಸೀ ವಾಕ್ ವರೆಗೆ ನಡೆದ ಈ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಮಲ್ಪೆ ಬೀಚ್ ನಲ್ಲಿ ಆರೋಗ್ಯ ಮತ್ತು ಫಿಟ್ ಇಂಡಿಯಾ ಕುರಿತು ಕ್ವಿಝ್ ನಡೆಯಿತು.
ಶ್ರೀ ಪಾದರ ಸೈಕಲ್ ಸವಾರಿ ಎಲ್ಲರನ್ನು ಬೆರಗುಗೊಳಿಸಿತು.
ಇದನ್ನೂ ಓದಿ : ಬಿಜೆಪಿ ಆಡಳಿತವಿರುವಲ್ಲಿ ಆದಾಯ ಮತ್ತು ತೆರಿಗೆ ಇಲ್ಲ: ಸಂಜಯ್ ರಾವುತ್ ಕಿಡಿ
ಈ ಸಂದಭ೯ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ನಾಗಭೂಷಣ್ ಉಡುಪ, ಕೆನರಾ ಬ್ಯಾಂಕ್ ಡಿಜಿಎಂ ಪದ್ಮಾವತಿ, ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ| ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ| ವಿದ್ಯಾಧರ ಶೆಟ್ಟಿ, ರಾಜ್ಯ ಕಾ.ಸದಸ್ಯ ಡಾ| ವಿಜಯಿಂದ್ರ ವಸಂತ್, ಸೆಲ್ಕೋ ಸೋಲಾರ್ ಡಿಜಿಎಂ ಜಗದೀಶ್ ಪೈ, ಡಾ| ರವೀಂದ್ರ ಕುಂದಾಪುರ, ವಿಶಾಲ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.
ಮೇ.ರಾಧಾಕೃಷ್ಣ ಕಾಯ೯ಕ್ರಮ ನಿರೂಪಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ವಂದಿಸಿದರು.
ಭಾಗವಹಿಸಿದವರಿಗೆ ಟಿ, ಶಟ್೯ ಮತ್ತು ಪ್ರಮಾಣ ಪತ್ರ ನೀಡಲಾಯಿತು.