Advertisement
ಮೈಸೂರಿನಲ್ಲಿ ತಮ್ಮ 36 ನೇ ಚಾತುರ್ಮಾಸ್ಯ ವ್ರತದ ಕೊನೆಯ ದಿನ ಶುಕ್ರವಾರದಂದು ಮೈಸೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್ , ರೋಟರಿ ಕ್ಲಬ್ , ರೋಟರಿ ಇನ್ನರ್ ವೀಲ್ ಕ್ಲಬ್ ಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸವಲತ್ರು ವಿತರಣೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಖೈದಿಗಳಿಗೆ ರಾಮ ಮಂತ್ರ ಬೋಧಿಸಿ ಸಂದೇಶ ನೀಡಿದರು.
Related Articles
Advertisement
ಬೇಟೆ, ದರೋಡೆ ಮೊದಲಾದ ಕೆಲಸಗಳಲ್ಲಿಯೇ ಬದುಕುತ್ತಿದ್ದ ವಾಲ್ಮೀಕಿ ಒಂದು ತಿರುವಿನಿಂದ ತಿಳಿವಳಿಕೆ ಪಡೆದು ರಾಮಮಂತ್ರವನ್ನು ಜಪಿಸುತ್ತಾ ರಾಮಾಯಣವನ್ನೇ ರಚಿಸಿ ಇವತ್ತು ಲೋಕವೆಲ್ಲ ಪೂಜಿಸುವ ಮಹರ್ಷಿಯಾದ. ಇದು ನಮಗೆ ಮಾದರಿಯಾಗಬೇಕು. ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶ ನೀಡಿದ್ದಾರೆ.
ತಿಳಿದೋ ತಿಳಿಯದೆಯೋ ಅಪರಾಧಗಳು ನಮ್ಮಿಂದಾಗುತ್ತವೆ. ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಆದರೆ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ನಮ್ಮ ಆತ್ಮಸಾಕ್ಷಿಯಾಗಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಪರಿಶುದ್ಧರಾಗಲು ಸಾಧ್ಯವಿದೆ ಮುಂದೆ ಇಂಥಹ ಅಪರಾಧಗಳನ್ನು ನಡೆಸದೇ ಒಳ್ಳೆಯ ನಾಗರಿಕರಾಗಿ ಬದುಕುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು. ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ ಎಸ್ ರಮೇಶ್, ಲಯನ್ಸ್, ರೋಟರಿ, ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ