ಮುಂಬಯಿ: ಮುಂದಿನ ಉಡುಪಿ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಪರ್ಯಾಯ ಸಂಚಾರದ ಅಂಗವಾಗಿ ಸೆ. 21ರಂದು ಮುಂಬಯಿಗೆ ಆಗಮಿಸಿದ್ದು, ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಪೇಜಾವರ ಮಠಕ್ಕೆ ಬರಮಾಡಿಕೊಳ್ಳಲಾಯಿತು.
ಗುರುವಾರ ಸಂಜೆ ಶ್ರೀಗಳು ಸಾಂತಾಕ್ರೂಜ್ ಪೂರ್ವಕ್ಕೆ ಆಗಮಿಸುತ್ತಿದ್ದಂತೆಯೇ ಪರ್ಯಾಯ ಸಮಿತಿ ಮುಂಬಯಿ ಗೌರವಾ ಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಎಂ. ನರೇಂದ್ರ ರಾವ್, ಗೌರವಾಧ್ಯಕ್ಷ ಡಾ| ಎಂ. ಎಸ್. ಆಳ್ವ ಮತ್ತು ಪದಾಧಿಕಾರಿಗಳು, ಪೇಜಾವರ ಮಠದ ಪ್ರಬಂಧಕ ರಾಮದಾಸ ಉಪಾಧ್ಯಾಯ ರೆಂಜಾಳ ಅವರು, ನೂರಾರು ಸಂಖ್ಯೆಯ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಪುಷ್ಪಗೌರವದೊಂದಿಗೆ ಬರಮಾಡಿಕೊಂಡು ಸ್ವಾಗತಿಸಿದರು. ಪಲಿಮಾರು ಶ್ರೀಗಳನ್ನು ಬಿಲ್ಲವರ ಭವನದಿಂದ ಅಶೋಕ್ ಕೊಡ್ಯಡ್ಕ ತಂಡದ ಗೊಂಬೆಗಳ ವೈವಿಧ್ಯಮಯ ನೃತ್ಯ, ರಾಮದಾಸ್ ಮುತ್ತಪ್ಪ ಬಳಗ, ದಿನೇಶ್ ಕೋಟ್ಯಾನ್ ತಂಡಗಳ ಚೆಂಡೆವಾದ್ಯಗಳ ನಿನಾದದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಪ್ರಭಾತ್ ಕಾಲನಿ ಅಲ್ಲಿನ ಪೇಜಾ ವರ ಮಠಕ್ಕೆ ಬರಮಾಡಿ ಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠ ಮುಂಬಯಿ ಶಾಖೆಯ ನವೀಕೃತ ಹವಾನಿಯಂತ್ರಿತ ಸಭಾಗೃಹವನ್ನು ಶ್ರೀಗಳು ಉದ್ಘಾಟಿಸಿದರು. ಸಮಾರಂಭದ ಪ್ರಧಾನ ಅಭ್ಯಾಗತರಾಗಿ ಇನಾ#†ಸ್ಟ್ರಕ್ಚರ್ ಫೈನಾನ್ಸ್ ಐಡಿಎಫ್‌ಸಿ ಆಡಳಿತ ನಿರ್ದೇಶಕ ಸದಾಶಿವ ರಾವ್, ಕರ್ಣಾಟಕ ಬ್ಯಾಂಕ್‌ನ ಸಹಾಯಕ ಪ್ರಧಾನ ಪ್ರಬಂಧಕ ಪಿ. ಎಚ್. ರಾಜ್‌ಕುಮಾರ್, ಡಾ| ಸುರೇಶ್ ಎಸ್. ರಾವ್ ಕಟೀಲು, ಎಂ. ನರೇಂದ್ರ ರಾವ್, ಗೌರವಾಧ್ಯಕ್ಷ ಡಾ| ಎಂ.ಎಸ್. ಆಳ್ವ, ಗೌರವ ಕಾರ್ಯದರ್ಶಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ. ಎಸ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಲಿಮಾರು ಶ್ರೀಗಳು ಆಶೀರ್ವದಿಸಿ ಮಾತನಾಡಿ, ಕೃಷ್ಣನನ್ನು ನಾವು ಆರಾಧಿಸಿದರೆ ನಾವು ನೆನೆದ ಕೆಲಸದಲ್ಲಿ ಜಯವಾಗುತ್ತದೆ. ಕೃಷ್ಣನಿಗೆ ಬೇಕಾಗಿದ್ದು ನಮ್ಮ ಮನಸ್ಸು. ಭಗವಂತನಿಗೆ ನಮ್ಮ ಮನಸ್ಸನ್ನು ನೀಡೋಣ. ಪರ್ಯಾಯ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಾಯ ಅಗತ್ಯ. ಇಲ್ಲಿಯ ಸಭಾ ಭವನವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದಾರೆ. ಇನ್ನು ಮುಂದೆ ನಿಮ್ಮೆಲ್ಲರ ಶುಭ ಕಾರ್ಯಗಳನ್ನು ಇಲ್ಲಿಯೆ ಮಾಡಿರಿ. ನಿಮಗೆಲ್ಲರಿಗೂ ಕೃಷ್ಣನ ಆಶೀರ್ವಾದ ಇರಲಿ ಎಂದರು.
ಅತಿಥಿ-ಗಣ್ಯರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪೂರ್ಣ ಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ವಿಶ್ವಸ್ತ ಗೌರವ ಕಾರ್ಯದರ್ಶಿ ಬಿ. ಆರ್. ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೃಷ್ಣ ಯಾದವ ಆಚಾರ್ಯ, ಕೈರಬೆಟ್ಟು ವಿಶ್ವನಾಥ್ ಭಟ್, ಧರ್ಮಪಾಲ್ ಯು. ದೇವಾಡಿಗ, ನಿತ್ಯಾನಂದ ಡಿ. ಕೋಟ್ಯಾನ್, ಧರ್ಮಪಾಲ್ ಜಿ. ಅಂಚನ್, ದೇವೇಂದ್ರ ಬಂಗೇರ, ಕಮಲಾಕ್ಷ ಜಿ. ಸರಾಫ್, ಉಲ್ಲಾಸ್ ಡಿ. ಕಾಮತ್, ಡಾ| ಎಸ್. ಕೆ. ಭವಾನಿ, ನಿಟ್ಟೆ ದಾಮೋದರ ಆಚಾರ್ಯ, ಅಶೋಕ್ ಸಸಿಹಿತ್ಲು, ಕಲ್ಲಾಜೆ ರಾಧಾಕೃಷ್ಣ ಭಟ್, ಪಡುಬಿದ್ರಿ ವಿ. ರಾಜೇಶ್ ರಾವ್, ಸುಮತಿ ಆರ್. ಶೆಟ್ಟಿ, ಮೀರಾರೋಡ್ ಹರಿ ಭಟ್, ನಿರಂಜನ್ ಗೋಗೆr ಮತ್ತಿತರರು ಉಪಸ್ಥಿತರಿದ್ದರು.
ವಿದ್ವಾನ್ ಶಿವರಾಜ ಉಪಾಧ್ಯಾಯ ಮತ್ತು ವಿನಯರಾಜ್ ಭಟ್ ವೇದಮಂತ್ರ ಸ್ತೋತ್ರ ಪಠಿಸಿದರು. ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿದರು. ಸುಕನ್ಯಾ ಭಟ್ ನಿರ್ದೇಶನದಲ್ಲಿ ರಾಧಾಕೃಷ್ಣ ನೃತ್ಯ ಅಕಾಡೆಮಿಯ ಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಿತು. ಓಂ ಶ್ರೀಕೃಷ್ಣಾಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ರಾಮಕುಂಜ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್