ಮುಂಬಯಿ: ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಮತ್ತು ಗೋಪಾಲ್‌ಕೃಷ್ಣ ಪಬ್ಲಿಕ್ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಪರಮಪೂಜ್ಯ ಪೇಜಾವರ ಶ್ರೀಗಳಿಗೆ ಮುಂಬಯಿಯ ಸಮಗ್ರ ತುಳು-ಕನ್ನಡಿಗರ ವತಿಯಿಂದ ರಜತ ತುಲಾಭಾರ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೂ. 29ರಂದು ಆಯೋಜಿಸಲಾಗಿದೆ.
ಅಪರಾಹ್ನ 3ರಿಂದ ರಾತ್ರಿ 8ರ ವರೆಗೆ ಕಾರ್ಯಕ್ರಮವು ಜರಗಲಿದ್ದು, ಪ್ರಾರಂಭದಲ್ಲಿ ಪೇಜಾವರ ಮಠದ ಮಧೆÌàಶ ಭಜನಾ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಅಪರಾಹ್ನ 4ರಿಂದ ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸದಸ್ಯರಿಂದ ಭಜನೆ ಹಾಗೂ ನಗರದ ನೃತ್ಯ ಕಲಾವಿದೆ ನಿಕಿತಾ ಅಮೀನ್ ಮತ್ತು ಬಳಗದಿಂದ ನೃತ್ಯ ವೈವಿಧ್ಯ ನಡೆಯಲಿದೆ. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮುಂಬಯಿ ಮತ್ತು ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕ ಹರಿದಾಸ, ವಿದ್ವಾಂಸ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಜತ ಪೀಠ ಎಂದೇ ಪ್ರಸಿದ್ಧವಾದ ಉಡುಪಿಯ ಕರ್ನಾಟಕ ಕರಾವಳಿಯ ಜೀವನಾಡಿ ಜಗದೊಡೆಯನಾದ ಕಡೆಗೋಲು ಕೃಷ್ಣ ನೆಲೆಸಿದ ಪುಣ್ಯನಾಡು. 14ನೇ ಶತಮಾನದಲ್ಲಿ ಉಡುಪಿಗೆ ದ್ವೈತ ಮತಾಚಾರ್ಯರಾದ ಜಗದ್ಗುರು ಮಧ್ವಾಚಾರ್ಯರು ದ್ವಾರಕೆಯಿಂದ ಸಮುದ್ರ ಮಾರ್ಗದ ಮೂಲಕ ನೌಕೆಯಲ್ಲಿ ಬಂದು ಸಕಲ ಗೋಪ-ಗೋಪಿಕಾ ವಲ್ಲಭನಾದ ಮುದ್ದುಕೃಷ್ಣನನ್ನು ಪ್ರತಿಷ್ಠಾಪಿಸಿ ಪೂರ್ಣ ವಿಶ್ವಕ್ಕೆ ಬಹುದೊಡ್ಡ ಪುಣ್ಯಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಅಂತಹ ಜೀವೋತ್ತಮ ವಾಯು ದೇವರ ಅವತಾರವಾದ ಮಧ್ವರಿಂದ ಪ್ರತಿ ಷ್ಠಿತವಾದ ಕೃಷ್ಣನಿಗೆ ಅಷ್ಟ ಮಹಿಷಿಯರಂತೆ ಅಷ್ಟ ಮಠಾಧೀಶರು ಇಂದಿಗೂ 850 ವರ್ಷಗಳಿಂದ ನಿರಂತರವಾಗಿ ಪೂಜೆ, ಅರ್ಚನೆಯನ್ನು ನಡೆಸುತ್ತಾ ಬಂದಿದ್ದಾರೆ.
ಅಂತಹ ಪರಮೋಚ್ಚ ಪುಣ್ಯಕ್ಷೇತ್ರವೆಂದು ಮೆರೆಯುತ್ತಿರುವ ಉಡುಪಿಯ ಕೃಷ್ಣನ ನಿರಂತರ ಆರಾಧಕರೂ, ಶ್ರೇಷ್ಠ ಸಂತ, ವಿಶ್ವಗುರು, ಜ್ಞಾನ ವೃದ್ಧ, ವಯೋವೃದ್ಧರೂ ಆಗಿರುವ ತಮ್ಮ 8ನೇ ವಯಸ್ಸಿನಲ್ಲೇ ಸನ್ಯಾಸವನ್ನು ಸ್ವೀಕರಿಸಿ ಪ್ರಸ್ತುತ 89ನೇ ವಯಸ್ಸಿನಲ್ಲೂ ಪಾದರಸದಂತೆ ಓಡಾಡುತ್ತಿರುವ ಜೀವನದುದ್ದಕ್ಕೂ ಪಂಡಿತರಿಂದ ಪಾಮರರವರೆಗೆ ಸರ್ವ ರೀತಿಯ ಜನರ ಅಪಾರ ಗೌರವಕ್ಕೆ ಪಾತ್ರರಾದ, ಶ್ರೀಕೃಷ್ಣನ ಉತ್ಕೃಷ್ಟ ಅನುಗ್ರಹ ಸನ್ನಿಧಾನದೊಂದಿಗೆ ಮಾತನಾಡುವ ಮಧ್ವರಿಂದ ಮಠಕ್ಕೆ ಲಭ್ಯವಾದ ಶ್ರೀರಾಮ ವಿಠಲ ದೇವರನ್ನು ನಿರಂತರ ಪೂಜೆ, ಅರ್ಚಗೈಯುವ ಪರಪಮೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾಂದಗಳವರಿಗೆ ಮುಂಬಯಿಯಲ್ಲಿ ರಜತ ತುಲಾಭಾರ ಸೇವೆಯು ಅದ್ದೂರಿಯಾಗಿ ನಡೆಯುತ್ತಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೆರ್ಮುದೆ, ಟ್ರಸ್ಟಿ ಗೋಪಾಲ್ ಎನ್. ಪುತ್ರನ್, ಕೋಶಾಧಿಕಾರಿ ಅವಿನಾಶ್ ಶಾಸ್ತಿÅà, ಸುರೇಂದ್ರ ಪೂಜಾರಿ, ರಮೇಶ್ ಡಿ. ಸಾವಂತ್, ಮಹಿಳಾ ವಿಭಾಗದ ಅಧ್ಯಕ್ಷೆ ಸುನಂದಾ ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ, ಉಪ ಕಾರ್ಯದರ್ಶಿಗಳಾದ ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಶಶಿಧರ ಬಿ. ಶೆಟ್ಟಿ, ಯುವ ವಿಭಾಗದ ಸಂಚಾಲಕ ನವೀನ್ ಪಡುಇನ್ನ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.