Advertisement

ಅಮೆರಿಕ ನಮಗೆ ಕೋಟ್ಯಂತರ ಡಾಲರ್ ನೆರವು ಕೊಟ್ಟಿಲ್ಲ; ಪಾಕ್ ಸಚಿವ

04:29 PM Aug 30, 2017 | Sharanya Alva |

ಇಸ್ಲಾಮಾಬಾದ್: ಅಮೆರಿಕ ಪಾಕಿಸ್ತಾನಕ್ಕೆ ಕಡಲೆಬೀಜದಷ್ಟು ಆರ್ಥಿಕ ನೆರವು ನೀಡಿದೆ ವಿನಃ ಕೋಟ್ಯಂತರ ಡಾಲರ್ ಅಲ್ಲ ಎಂದು ಪಾಕ್ ನ ಆಡಳಿತಾರೂಢ (ಪಿಎಂಎಲ್- ಎನ್)ಪಕ್ಷದ ರಾಜಕೀಯ ಮುಖಂಡ,ಮಾಜಿ ಸಚಿವ  ಚೌಧರಿ ನಿಸಾರ್ ಅವರು ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

Advertisement

ಪಾಕಿಸ್ತಾನದ ಮಾಜಿ ಸಚಿವರಾಗಿರುವ ಸಚಿವರಾಗಿರುವ ನಿಸಾರ್ ಮಾತನಾಡುತ್ತ, ಕಳೆದ 10 ವರ್ಷಗಳಿಂದ ಪಾಕಿಸ್ತಾನ ಅಮೆರಿಕದಿಂದ ಪಡೆದ ಆರ್ಥಿಕ ನೆರವಿನ ಆಡಿಟ್ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಮೆರಿಕ ನಮಗೇನು ಕೋಟ್ಯಂತರ ಡಾಲರ್ ನೆರವು ಕೊಟ್ಟಿಲ್ಲ, ಬರೇ ಕಡಲೆಬೀಜದಷ್ಟು ಮಾತ್ರ ಎಂದು ನಿಸಾರ್ ತಿರುಗೇಟು ನೀಡಿರುವುದಾಗಿ ಡಾನ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next