Advertisement

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

12:39 PM Nov 30, 2021 | Team Udayavani |

ಬೆಂಗಳೂರು: ಕರಿಮೋಡ ಮುಸುಕಿದ ವಾತಾವರಣದ ನಡುವೆ ತಣ್ಣನೆಯ ಮೇಲ್ಮೆ„ ಸುಳಿಗಾಳಿ ಆಗಸದಲ್ಲಿ ಬಾನ ಭಾಸ್ಕರನಿಲ್ಲದ ಹಿನ್ನೆಲೆಯಲ್ಲಿ ಮನಸಿನಲ್ಲಿ ಆಹ್ವಾದಕತೆಯ ತಂಗಾಳಿ ಆಗಾಗ್ಗೆ ಜಿನಿಗುಟ್ಟಿದ ಮಳೆ ಹನಿಯ ನಡುವೆ ಬಿಸಿ ಬಿಸಿ ಹುರಿಗಡಲೆ ಸೇವಿಸುತ್ತಾ ಪರಿಷೆಯ ಸುತ್ತ ಸುತ್ತಾಡಿದ ಸಾವಿರಾರು ಜನರು ಕಾಂಕ್ರೇಟ್‌ ನಾಡಿನಲ್ಲಿ ಕಡಲೆಕಾಯಿ ಘಮಲ ಜತೆ ಹಳ್ಳಿಯ ಸೊಗಡನ್ನು ಕಣ್ತುಂಬಿ ಕೊಂಡರು.

Advertisement

ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ದೊಡ್ಡಗಣಪತಿ ದೇವಾಲಯದ ಸುತ್ತಮುತ್ತ ಗ್ರಾಮೀಣ ಸಾಂಸ್ಕೃತಿ ಮೇಳೈಸಿತ್ತು. ರಾಮಕೃಷ್ಣ ಮಠದ ಆವರಣದಿಂದ ಬುಲ್‌ ಟೆಂಪಲ್‌ ರಸ್ತೆಯವರೆಗಿನ ಆವರಣಗಳ ತುಂಬೆಲ್ಲ ಕಡಲೆಕಾಯಿ ಜಾತ್ರೆ ಹಳ್ಳಿಯ ಸೊಗಡನ್ನು ನೆನಪಿಸಿತು. ಪುಟಾಣಿ ಮಕ್ಕಳು ಪೀಪಿ ಊದಿ ಸಂಭ್ರಮಿಸಿದರೆ, ಕಾಲೇಜು ವಿದ್ಯಾರ್ಥಿಗಳು ತೊಟ್ಟಿಲು ಏರಿ ಖುಷಿ ಪಟ್ಟರು.

ಕುಟುಂಬ ಸಮೇತರಾಗಿ ಆಗಮಿಸಿದ್ದ ಮಾನಿನಿಯರು ಪರಿಷೆಯ ತುಂಬೆಲ್ಲಾ ಸುತ್ತಾಟ ನಡೆಸಿ ಬೆಂಡುಬತಾಸು ಸವಿದರು. ಜತೆಗೆ ವಿವಿಧ ಜಾತಿಯ ಕಡಲೆಕಾಯಿಗಳನ್ನು ಲೀಟರ್‌ ಮತ್ತು ಸೇರ್‌ನಲ್ಲಿ ಖರೀದಿಸಿ ಸಂಭ್ರಮಿಸಿದರು. ಕಳೆದ ಹಲವು ವರ್ಷಗಳಿಂದ ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿ ಸುತ್ತಿದ್ದೇನೆ. ಆದರೆ ಕೋವಿಡ್‌ ಹಿನ್ನೆಲೆ ಯಲ್ಲಿ ಕಳೆದ ಬಾರಿ ಕಡಲೆಕಾಯಿ ಪರಿಷೆ ನಡೆಯಲಿಲ್ಲ.

ಇದನ್ನೂ ಓದಿ;- ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

ಈ ಬಾರಿ ಪರಿಷೆ ನಡೆಯುತ್ತಿದ್ದು ಹಳ್ಳಿ ಸೊಗಡಿನ ಪರಿಸರ ಖುಷಿ ನೀಡುತ್ತಿದೆ ಎಂದು ಹೊಸಕೆರೆ ಹಳ್ಳಿಯ ನಿವಾಸಿ ಅನುಸೂಯಮ್ಮ ಹೇಳಿದರು. ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ಪ್ರತಿ ದಿನ ಕುಟುಂಬದವರ ಜತೆ ಬಂದು ಪರಿಷೆಯ ಸಗಡರವನ್ನು ಸವಿಯುವುದಾಗಿ ತಿಳಿಸಿದರು. ನಗರೀಕರಣ ಜೀವನದಿಂದಾಗಿ ನಾವು ಹಳ್ಳಿಯ ಶ್ರೀಮಂತ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ನೆಲದ ಸಂಸ್ಕೃತಿಯನ್ನು ನೆನಪಿಸುವ ಈ ಜಾತ್ರೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತಸ ಪಡುವ ಸಂಗತಿಯಾಗಿದೆ ಎಂದು ಸಾಫ್ಟ್ವೇರ್‌ ಉದ್ಯೋಗಿ ರಂಜಿತ್‌ ಹೇಳುತ್ತಾರೆ.

Advertisement

ಕಾಲೇಜು ವಿದ್ಯಾರ್ಥಿಗಳದ್ದೇ ದರ್ಬಾರ್‌: ಕಡ್ಲೆಕಾಯಿ ಪರಿಷೆಯಲ್ಲಿ ಕಾಲೇಜು ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಸುತ್ತಾತ ನಡೆಸಿದ್ದು ಕಂಡು ಬಂತು. ಸ್ನೇಹಿತರ ಒಡಗೂಡಿ ರಸ್ತೆಯ ಮಧ್ಯೆ ಪೀಪಿ ಊದುತ್ತಾ ಸಂಭ್ರಮಿಸುತ್ತಿದ್ದದ್ದು ಕಂಡು ಬಂತು. ಕೆಲವು ವಿದ್ಯಾರ್ಥಿಗಳು ಪರಿಷೆಯ ಹಿನ್ನೆಲೆಯಲ್ಲಿ ಕಾಲೇಜಿಗೆ ಬಂಕ್‌ ಹಾಕಿ ಬಂದಿರುವುದಾಗಿ ಹೇಳಿದರು. ಬಿಎಂಎಸ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿ ರೋಹಿಣಿ ಮಾತನಾಡಿ, ಪರಿಷೆ ಅಂದ್ರೆ ನನಗೆ ತುಂಬಾ ಇಷ್ಟ. ಪರಿಷೆ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳನ್ನು ನೆನಪಿಸುತ್ತೆ. ಜನಜಂಗುಳಿ ನಡುವೆ ಪರಿಷೆಯಲ್ಲಿ ಸುತ್ತಾಟ ನಡೆಸುವುದೇ ಒಂದು ಸಂಭ್ರಮ ಎಂದರು.

ಶಾಸಕರಿಂದ ಪರಿಷೆಗೆ ಚಾಲನೆ  ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ರವಿಸುಬ್ರಹ್ಮಣ್ಯ ಮತ್ತು ಉದಯ್‌ ಗರುಡಾಚಾರ್‌ ಅವರು ಪಾಲಿಕೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರ ರವಿಸುಬ್ರಹ್ಮಣ್ಯ, ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಬಾರಿ ಕಡಲೆಕಾಯಿ ಪರಿಷೆ ನಡೆಸಲು ಆಗಲಿಲ್ಲ. ಮಾಗಡಿ ಕೆಂಪೇಗೌಡರ ಕಾಲದಿಂದಲೂ ಕೂಡ ಕಡ್ಲೆಕಾಯಿ ಪರಿಷೆ ಬೆಳೆಗಾರರ ಉತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಸಲ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುತ್ತಿರುವುದು ಸಂತಸವಾಗುತ್ತಿದೆ ಎಂದರು. 2 ಸಾವಿರಕ್ಕಿಂತ ಹೆಚ್ಚಿನ ಮಳಿಗೆಗಳನ್ನು ಪರಿಷೆಯಲ್ಲಿ ತೆರೆಯಲಾಗಿದೆ. ಸುರಕ್ಷತೆಗೂ ಪೊಲೀಸ್‌ ಇಲಾಖೆ ಆದ್ಯತೆ ನೀಡಿದೆ. ಜತೆಗೆ 30ಕ್ಕೂ ಅಧಿಕ ಕ್ಲೂಜ್‌ ಸೆರ್ಕ್ನೂಟ್‌ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. 12 ವಾಚ್‌ ಟವರ್‌ ಕೂಡ ಇದೆ. ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ವೇಳೆ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವ್ಯಾಪಾರಿಗಳಿಗೆ ಮಳೆಯದ್ದೇ ಆತಂಕ

ಭಾನುವಾರ ರಾಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಪರಿಷೆಗೆ ನೆ‌ರೆದಿದ್ದರು. ಸೋಮವಾರ ಕೂಡ ಜನರು ಪರಿಷೆಗೆ ಬಂದಿದ್ದಾರೆ. ಹೀಗಾಗಿ ಒಂದಿಷ್ಟು ವ್ಯಾಪಾರ ಆಗಿದೆ ಎಂದು ಕಡೆಲೆಕಾಯಿ ವ್ಯಾಪಾರಿ ಕೆ.ಆರ್‌. ಮಾರುಕಟ್ಟೆ ನಿವಾಸಿ ಗೌರಮ್ಮ ಹೇಳುತ್ತಾರೆ. ಇನ್ನೂ ಕೆಲವು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವ್ಯಾಪಾರ ನಿರೀಕ್ಷೆ ಮಾಡಲಾಗಿದೆ. ಮಳೆ ಮೋಡ ವಾತಾವರಣವಿದ್ದು ಮಳೆ ಆಗದೆ ಇದ್ದರೆ ಉತ್ತಮ ವ್ಯಾಪಾರ ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಕಾಗದ ಹಾಳೆಗೆ ಹೆಚ್ಚಿನ ಆದ್ಯತೆ

ಕಡ್ಲೆ ಪರಿಷೆಯಲ್ಲಿ ಪಾಲಿಕೆ ಅಧಿಕಾರಿಗಳು ತಳ್ಳನೆಯ ಪ್ಲಾಸ್ಟಿಕ್‌ ಕೈ ಚೀಲಗಳನ್ನು ಬಳಕೆ ಮಾಡದಂತೆ ವ್ಯಾಪಾರಿ ಗಳಿಗೆ ತಾಕೀತು ಮಾಡಿದೆ. ಅಲ್ಲದೆ ಪರಿಷೆ ನಡೆಯುತ್ತಿರುವ ಪ್ರದೇಶದ ಅಲ್ಲಲ್ಲಿ ಬಿಬಿಎಂಪಿ ಸಿಬ್ಬಂದಿ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕಡ್ಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಯ ಆಗಿತ್ತು. ಗ್ರಾಹಕರಿಗೆ ಕಡ್ಲೆಕಾಯಿಗಳನ್ನು ಪ್ಲಾಸ್ಟಿಕ್‌ ಕೈ ಚೀಲದಲ್ಲಿ ಹಾಕಿ ಕೊಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಗದ ಚೀಲಗಳನ್ನು ಬಳಕೆ ಮಾಡುತ್ತಿರುವುದಾಗಿ ಕಡ್ಲೆ ವ್ಯಾಪಾರಿ ಮಣಿಕಂಠನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next