Advertisement
ಜಿಲ್ಲೆಯಾದ್ಯಂತ ನೀರಾವರಿ ಕ್ಷೇತ್ರದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶ, ಖುಷ್ಕಿ ಕ್ಷೇತ್ರದಲ್ಲಿ 37 ಸಾವಿರ ಸೇರಿದಂತೆ ಒಟ್ಟು 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ ನೀರಾವರಿ ಕ್ಷೇತ್ರದಲ್ಲಿ 45,415 ಹೆಕ್ಟೇರ್ ಪ್ರದೇಶ, ಖುಷ್ಕಿ ಕ್ಷೇತ್ರದಲ್ಲಿ 15,939 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 61,354 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ.
ಈ ವರ್ಷ ಶೇಂಗಾ ಬೆಲೆ ಗರಿಷ್ಠ 4,422 ರೂ. ಮಾದರಿ ಧಾರಣಿ 4,019 ರೂ. ಕನಿಷ್ಠ ಬೆಲೆ 3,609 ರೂ. ಇದೆ. ಆದರೆ ಈ ವರ್ಷ ಮಾತ್ರ ಶೇಂಗಾ ಬೆಲೆ ಸಾವಿರ ರೂ. ವರೆಗೆ ಕುಸಿತಗೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.
Related Articles
ಆವರಣದಲ್ಲಿ ಜನದಟ್ಟಣೆ ಅಧಿಕವಾಗಿದ್ದು, ಶೇಂಗಾಗೆ ಸೂಕ್ತ ಬೆಲೆ ಇಲ್ಲದ ಪರಿಣಾಮ ಬಿತ್ತನೆಗೆ ಖರ್ಚು ಮಾಡಿದ ಹಣವೂ ಬರುತ್ತದೆಯೇ ಇಲ್ಲವೋ ಅನುಮಾನ ರೈತರಲ್ಲಿ ಮೂಡಿದೆ.
Advertisement
ಕಳೆದ ವರ್ಷ ಶೇಂಗಾ ಬೆಲೆ ಹೆಚ್ಚಳದಿಂದ ರೈತರು ಸಂತಸಗೊಂಡು ಈ ವರ್ಷವೂ ಸಹ ಶೇಂಗಾ ಬೆಳೆದಿದ್ದಾರೆ. ಆದರೆ ಶೇಂಗಾ ಬೆಲೆ ಕುಸಿತದಿಂದ ಕೈಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈಗಾಗಲೇ ಚಿತ್ರದುರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕೆಓಎಫ್‌ನವರು 4,250 ಬೆಂಬಲ ಬೆಲೆಯೊಂದಿಗೆ ಕೇಂದ್ರ ಸರಕಾರದ ಸಹಾಯ ಧನ 200 ರೂ. ಸೇರಿದಂತೆ ಒಟ್ಟು 4,450 ರೂ.ಗೆ ಶೇಂಗಾವನ್ನು ಖರೀದಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಗುಣಮಟ್ಟದ ಶೇಂಗಾವಿಲ್ಲದ ಕಾರಣ ಕೆಓಎಫ್ ನವರು ಖರೀದಿಗೆ ಮುಂದಾಗಿಲ್ಲ. ಕಾರಣ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೇ ಎಂದು ಕಾಯ್ದು ನೋಡಬೇಕಿದೆ.
ಗುಣಮಟ್ಟದ ಕೊರ ಎಪಿಎಂಸಿಗೆ ಶೇಂಗಾ ಹೆಚ್ಚಾಗಿ ಬಂದಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷವೂ ಶೇಂಗಾ ಬೆಲೆಯಲ್ಲಿ ಕುಸಿತ ಕಂಡಿದೆ. ಗುಣಮಟ್ಟದ ಶೇಂಗಾವಿಲ್ಲದ ಕಾರಣ ಕೆಓಎಫ್‌ನವರು ಸಹ ಶೇಂಗಾ ಖರೀದಿಗೆ ಮುಂದಾಗಿಲ್ಲ. ಪ್ರಕಾಶ ಅಯ್ನಾಳಕರ್, ಸಹಾಯಕ ನಿರ್ದೇಶಕ ಎಪಿಎಂಸಿ ಯಾದಗಿರಿ ಬಿತ್ತನೆಗೆ ಹಾಕಿದ ಹಣ ಕೂಡ ಸಿಗುತ್ತಿಲ್ಲ ಸರ್, ಕಳೆದ ವರ್ಷಕ್ಕಿಂತ ಈ ವರ್ಷ ಶೇಂಗಾ ಬೆಲೆಯಲ್ಲಿ ಕ್ವಿಂಟಾಲ್‌ಗೆ ಒಂದು ಸಾವಿರ ರೂ. ಕಡಿಮೆಯಾಗಿದೆ. ಹೀಗಾದರೆ ಬಿತ್ತನೆಗೆ ಮಾಡಿದ ಹಣವೂ ವಾಪಸ್ ಬರುವುದುಗ್ಯಾರಂಟಿ ಇಲ್ಲದಂತಾಗಿದೆ. ಏನು ಮಾಡಬೇಕೆಂಬುದು ತೋಚುತ್ತಿಲ್ಲ. ವಿನೋದ ಕೆಂಭಾವಿ, ರೈತ ರಾಜೇಶ ಪಾಟೀಲ್ ಯಡ್ಡಳ್ಳಿ