Advertisement

ಕಾಳುಮೆಣಸು ಧಾರಣೆ- ಆತಂಕ ಬೇಡ: ಕೊಂಕೋಡಿ ಪದ್ಮನಾಭ

10:32 AM Jan 15, 2018 | Team Udayavani |

ಮಂಗಳೂರು: ಕಾಳುಮೆಣಸಿನ ಆಮದು ಮೇಲೆ ಕೆ.ಜಿ.ಗೆ 500 ರೂ. ಕನಿಷ್ಠ ಆಮದು ಸುಂಕ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳ ದಾರಿಯನ್ನು ಕಂಡುಹಿಡಿದಿದ್ದಾರೆ. ವಿಯೆಟ್ನಾಂ ದೇಶದ ಕಳಪೆ ಕಾಳುಮೆಣಸನ್ನು ಕೆ.ಜಿ.ಗೆ 130 ರೂ. ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದು, ಅಲ್ಲಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂ.ಗಳ ತೆರಿಗೆ ವಂಚನೆ ಮಾಡುತ್ತಾ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವುದು ಭಾರತದಲ್ಲಿ ಕಾಳುಮೆಣಸಿನ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂದು ಕಾಳುಮೆಣಸು ಸಮನ್ವಯ ಸಮಿತಿಯ ಸಂಚಾಲಕ-ಅಡಿಕೆ ಮಾರಾಟ ಫೆಡರೇಶನ್‌ನ ಅಧ್ಯಕ್ಷ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.

Advertisement

ಈ ಬಗ್ಗೆ ದಿಲ್ಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರನ್ನು ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿಯ ನಿಯೋಗ ಇತ್ತೀಚೆಗೆ ಭೇಟಿ ಮಾಡಿ ಚರ್ಚೆ ನಡೆಸಿದೆ. ನಿಯೋಗದಲ್ಲಿ ಕೊಂಕೋಡಿ ಪದ್ಮನಾಭ, ಮಂಜುನಾಥ, ಪ್ರದೀಪ್‌ ಪೂವಯ್ಯ, ಜಯರಾಂ, ಎಡಗೆರೆ ಸುಬ್ರಹ್ಮಣ್ಯ, ದಯಾನಂದ ಹೆಗ್ಡೆ, ಪ್ರಮೋದ, ಜಿ.ಎಂ. ಹೆಗಡೆ, ಎಂ.ಆರ್‌. ಹೆಗಡೆ ಇದ್ದರು.

ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ, ವಿಯೆಟ್ನಾನಿಂದ ಶ್ರೀಲಂಕಾ ಮೂಲಕ ಆಮದಾಗುವ ಕಾಳುಮೆಣಸಿನಲ್ಲಿ ವಿಷಕಾರಕ ಅಂಶಗಳಿರುವುದರಿಂದ ಅದನ್ನು ಕಡ್ಡಾಯವಾಗಿ ರಾಸಾಯನಿಕ ಪರೀಕ್ಷೆಗೊಳಪಡಿಸಬೇಕು. ಶ್ರೀಲಂಕಾ ದಿಂದ ಅಮದಾಗುವ ಕಾಳುಮೆಣಸು ವಾಸ್ತವವಾಗಿ ವಿಯೆಟ್ನಾಂ ಕಾಳುಮೆಣಸು ಆಗಿದ್ದು, ಅದರ ಮೂಲವನ್ನು ಪರಿಶೋಧಿಸಬೇಕು ಎಂದು ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next