ವಿಶ್ವಸಂಸ್ಥೆ: ವಿಶ್ವ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಅಸುನೀಗಿದ ಶಾಂತಿಪಾಲನಾ ಸಿಬ್ಬಂದಿಯ ಸ್ಮರಣಾರ್ಥ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ಮಾರಕ ಗೋಡೆಯೊಂದನ್ನು ನಿರ್ಮಿಸುವ ಕುರಿತು ಭಾರತ ಮಾಡಿದ್ದ ಪ್ರಸ್ತಾಪಕ್ಕೆ ಒಮ್ಮತದ ಅಂಗೀಕಾರ ದೊರೆತಿದೆ. ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಸಲಹೆಗೆ ಒಪ್ಪಿಗೆ ನೀಡಿ ನಿರ್ಣಯ ಅಂಗೀಕರಿಸಲಾಗಿದೆ.
ಅಮೆರಿಕ ಪ್ರವಾಸ ಮತ್ತು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿರುವಂತೆಯೇ ಈ ಬೆಳವಣಿಗೆ ನಡೆದಿರುವುದು ವಿಶೇಷ.
ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ರಾಯಭಾರಿ ರುಚಿರಾ ಕಂಬೋಜ್ ಅವರು “ವಿಶ್ವಸಂಸ್ಥೆಯ ಹುತಾತ್ಮ ಶಾಂತಿಪಾಲನಾ ಸಿಬ್ಬಂದಿ ಸ್ಮರಣಾರ್ಥ ಸ್ಮಾರಕ’ ಎಂಬ ಹೆಸರಿನ ಕರಡು ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದ ಬಳಿಕ ನಿರ್ಣಯ ಅಂಗೀಕಾರಗೊಂಡಿತು.
ಬೆಂಬಲಕ್ಕೆ ಧನ್ಯವಾದಗಳು: ಪ್ರಧಾನಿ ಮೋದಿ
ಭಾರತದ ಮಂಡಿಸಿದ ನಿರ್ಣಯ ಅಂಗೀಕಾರಗೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಈ ಪ್ರಸ್ತಾಪಕ್ಕೆ ಬೆಂಬಲ ನೀಡಿದ ಎಲ್ಲ ದೇಶಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. “ಭಾರತದ ಒತ್ತಾಸೆಗೆ ಪೂರಕವಾಗಿ ಶಾಂತಿಪಾಲನಾ ಸಿಬ್ಬಂದಿಯ ನೆನಪಿನಲ್ಲಿ ಸ್ಮಾರಕ ರಚಿಸುವ ನಿರ್ಧಾರಕ್ಕೆ ಅಂಗೀಕಾರ ದೊರೆತಿರುವುದು ಸಂತೋಷದ ಸಂಗತಿ. ಈ ನಿರ್ಣಯಕ್ಕೆ ದಾಖಲೆಯ 190 ಸದಸ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿದೆ. ಎಲ್ಲರಿಗೂ ಹೃತೂ³ರ್ವಕ ಧನ್ಯವಾದಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.