Advertisement

ಹಗೆತನದಿಂದ ಶಾಂತಿ ಅಸಾಧ್ಯ : ಬುದ್ಧನ ತತ್ವ ಸಾರುತ್ತಲೇ ಚೀನಕ್ಕೆ ಮೋದಿ ಬುದ್ಧಿಮಾತು

11:58 PM Dec 21, 2020 | mahesh |

ಹೊಸದಿಲ್ಲಿ: ಹಗೆತನದಿಂದ ಎಂದಿಗೂ ಶಾಂತಿ ಸಾಧಿಸಲು ಸಾಧ್ಯವಿಲ್ಲ. ನೆರೆಹೊರೆಯವರ ಜತೆ ಸಾಮರಸ್ಯದಿಂದ ಇರುವುದನ್ನು ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಕ್ಕೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದ್ದಾರೆ. 6ನೇ ಇಂಡೋ- ಜಪಾನ್‌ ಸಂವಾದ ವೀಡಿಯೋ ಕಾನೆ#ರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನಿ, “ಸಾಮ್ರಾಜ್ಯಶಾಹಿತ್ವ ದಿಂದ ವಿಶ್ವಯುದ್ಧದವರೆಗೆ… ಶಸ್ತ್ರಾಸ್ತ್ರ ಸ್ಪರ್ಧೆಯಿಂದ ಬಾಹ್ಯಾಕಾಶದ ಓಟದವರೆಗೆ ನಾವು ಮಾತುಕತೆಗೆ ಆದ್ಯತೆ ನೀಡಿದರೆ, ಅವರು ಇತರರನ್ನು ಕೆಳಗಿಳಿಸುವ ಉದ್ದೇಶ ಹೊಂದಿದ್ದರು. ಆದರೂ, ನಾವಿಂದೂ ಅವರ ಸಮನಾಗಿ ಒಟ್ಟಿಗೆ ಮೇಲೇರುತ್ತಿದ್ದೇವೆ’ ಎಂದು ಚೀನ ಹೆಸರು ಪ್ರಸ್ತಾವಿಸದೆ ತಿಳಿಸಿದರು.

Advertisement

ಮಾನವಕೇಂದ್ರಿತ ಅಭಿವೃದ್ಧಿ: “ಜಾಗತಿಕ ಬೆಳವಣಿಗೆ ಕುರಿತ ಚರ್ಚೆಗಳು ಕೆಲವರಿಂದಷ್ಟೇ ಅಸಾಧ್ಯ. ಚರ್ಚೆಯ ಟೇಬಲ್‌ ದೊಡ್ಡದಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯಸೂಚಿಗಳೂ ವಿಸ್ತಾರಗೊಳ್ಳಬೇಕು. ಅಭಿವೃದ್ಧಿ ಮಾದರಿಗಳು ಮಾನವ ಕೇಂದ್ರಿತವಾಗಿರಬೇಕು ಎಂದು ಸಲಹೆ ನೀಡಿದರು.

“ಚರಿತ್ರೆಯಿಂದ ಪಾಠ ಕಲಿತು, ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಿ ಎಂದು ಭಗವಾನ್‌ ಬುದ್ಧ ಹೇಳಿದ್ದಾರೆ. ಅವರ ತತ್ತÌಗಳು ಶತ್ರುತ್ವದಿಂದ ಸಬಲೀಕರಣಕ್ಕೆ ನಮ್ಮನ್ನು ಪರಿವರ್ತಿಸುತ್ತವೆ. ನಮ್ಮ ಹೃದಯವನ್ನು ವಿಶಾಲಗೊಳಿಸುತ್ತವೆ’ ಎಂದು ಹೇಳಿದ್ದಾರೆ. ಭಾರತದಲ್ಲಿ ಬೌದ್ಧ ಸಾಹಿತ್ಯ, ಧರ್ಮಗ್ರಂಥಗಳನ್ನೊಳಗೊಂಡ ಬೃಹತ್‌ ಗ್ರಂಥಾಲಯ ನಿರ್ಮಿಸುವ ಕುರಿತೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next