Advertisement

ಬಸವ ಸಂದೇಶದಿಂದ ವಿಶ್ವದಲ್ಲಿ ಶಾಂತಿ

06:42 AM Feb 18, 2019 | Team Udayavani |

ಬೀದರ: ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾದರೆ ಬಸವಣ್ಣನವರ ಸಂದೇಶ ವಿಶ್ವದ ಎಲ್ಲಾ ಕಡೆಗಳಲ್ಲಿ ಸಾರಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು. ಬಸವಗಿರಿಯಲ್ಲಿ ರವಿವಾರ 16ನೇ ವಚನ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶೋಷಿತರನ್ನು ಸಂಘಟಿಸಿ, ಜಾತಿ-ಲಿಂಗ ಭೇದ ಧಿಕ್ಕರಿಸಿ, ಜಾತ್ಯತೀತ ತತ್ವದಲ್ಲಿ ಅನುಭವ ಮಂಟಪ ಕಟ್ಟಿ ವಚನಗಳ ಮೂಲಕ ಅರಿವು ಬಿತ್ತಿದ ಕ್ರಾಂತಿಕಾರಿ ಬಸವಣ್ಣನ ತತ್ವಗಳು, ವಚನಗಳನ್ನು ವಿಶ್ವಕ್ಕೆ ಮುಟ್ಟಿಸುವ ಕಾರ್ಯ ಆಗಬೇಕಾಗಿದೆ ಎಂದರು. 

Advertisement

ಬಸವಣ್ಣನ ಮಾನವೀಯ ಮೌಲ್ಯ, ಶೋಷಣೆ ವಿರುದ್ಧ ಹೋರಾಟ, ಮಾನವ ಜನಾಂಗಕ್ಕೆ ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವ ಬರಬೇಕಾದರೆ ಬಸವಣ್ಣನ ವಚನ ಅರಿತು, ಅಳಡಿವಸಿಕೊಳ್ಳಬೇಕು ಎಂದು ಹೇಳಿದರು.

ಕೇಂದ್ರ ರಕ್ಷಣಾ ಸಚಿವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪಡೆಯಬೇಕಿತ್ತು. ಆದರೆ, ದೇಶದಲ್ಲಿ ಘಟಿಸಿದ ಅವಘಡದಿಂದ ಸಚಿವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.  ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಮಾತನಾಡಿ, ಜೀವನದಲ್ಲಿ ನಡೆ-ನುಡಿ ಒಂದಾಗಿರಬೇಕು. ನುಡಿದಂತೆ ಮಾತು ಮತ್ತು ಕೃತಿ ಒಂದಾದಾಗ ಬದುಕು ಸುಂದರವಾಗುತ್ತದೆ. ಬಸವಾದಿ ಶರಣರು ಗಂಡು-ಹೆಣ್ಣಿನಲ್ಲಿ ಭೇದ ಭಾವ ಮಾಡದೆ ಸ್ತ್ರೀಯರಿಗೆ ಸಮಾನತೆ ಸ್ವಾತಂತ್ರ ನೀಡಿದರು. ಹೆಣ್ಣು-ಗಂಡು ಸಮಾನರು, ಗಂಡು ಜನಿಸಿದಾಗ ಪಡುವ ಸಂತೋಷವನ್ನು ಹೆಣ್ಣು ಹುಟ್ಟಿದಾಗಲೂ ಪಡಬೇಕು. ಶರಣರು ಹೆಣ್ಣಿಗೆ ನೀಡಿದ ಸಮಾನತೆ ಸ್ವಾತಂತ್ರ್ಯಾವನ್ನು ಪ್ರಪಂಚದಲ್ಲಿ ಬೇರೆ ಯಾರೂ ನೀಡಿಲ್ಲ. ಶರಣರು ನಿಖರವಾಗಿ ವಚನ ಸಾಹಿತ್ಯದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ನುಡಿದರು.

ತತ್ವಗಳು ಅದ್ಭುತವಾಗಿದ್ದು, ಜೀವನ ಯಾವ ರೀತಿ ಜೀವಿಸಬೇಕೆನ್ನುವ ದಾರಿ ತೋರಿಸುತ್ತವೆ. ಪ್ರಪಂಚದಲ್ಲಿ ಹಣವು ಹೆಚ್ಚಾದಾಗ ದರೋಡೆ, ಅತ್ಯಾಚಾರ, ಅನಾಚಾರ, ವ್ಯಭಿಚಾರ ಹೆಚ್ಚಾಗುತ್ತವೆ. ಜೀವನ ನಡೆಸಲು ಎಷ್ಟು ಹಣ ಬೇಕೋ ಅಷ್ಟಿದ್ದರೆ ಸಾಕು. ಹೆಚ್ಚಿನ ಹಣ ದುರಾಚಾರಕ್ಕೆ ಕಾರಣವಾಗುತ್ತದೆ. ವಚನ ಸಾಹಿತ್ಯದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ಇಂದಿನ ಮಕ್ಕಳು ಕೇವಲ ಟಿವಿ, ಮೊಬೈಲ್‌ಗ‌ಳಿಗೆ ಮಾರುಹೋಗಿ ತಮ್ಮ ಶಕ್ತಿ ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದರು.

ಡಾ| ಗಂಗಾಂಬಿಕೆ, ಡಾ| ಸಿ.ಎನ್‌ ಮಂಜುನಾಥ, ರಘುನಾಥ ಮಲ್ಕಾಪುರೆ, ಡಾ| ಬಾಬುರಾವ್‌ ಹುಡಗಿಕರ್‌, ಗುರುನಾಥ ಕೊಳ್ಳೂರ, ಶರಣು ಪಪ್ಪು, ಡಾ| ಶರಣಬಸಪ್ಪ ಹಲಸೆ, ಬಿ.ಜಿ. ಗೋವಿಂದಪ್ಪ , ಡಾ| ಶಿವಾನಂದ ಗೋರನಾಳೆ, ಬಾಬು ವಾಲಿ, ಚಂದ್ರಶೇಖರ ಹೆಬ್ಟಾಳೆ, ಕಲ್ಲಯ್ಯ ಸ್ವಾಮಿ, ಶರಣ ನಾಗರಾಜ ಸೊರಳ್ಳಿ, ಶಿವಶಂಕರ ಕಾಮಶೆಟ್ಟಿ, ಶರಣೆ ಡಾ| ವಿಜಯಶ್ರೀ, ಡಾ| ಸುಭಾಷ ಬಶೆಟ್ಟಿ ಹಾಗೂ ಮತ್ತಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next