Advertisement

ಕಾನೂನು ಅರಿವಿನಿಂದ ಸಮಾಜದಲ್ಲಿ ಶಾಂತಿ: ಹಳ್ಳೂರ್‌

11:17 AM Feb 10, 2022 | Team Udayavani |

ಶಹಾಬಾದ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ನಗರ ಪೊಲೀಸ್‌ ಠಾಣೆ ಪಿಐ ಸಂತೋಷ ಡಿ.ಹಳ್ಳೂರ್‌ ಹೇಳಿದರು.

Advertisement

ಹೊನಗುಂಟಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಸರಿಯಾದ ಕಾನೂನಿನ ಮಾಹಿತಿ ನೀಡಿದರೇ ದೊಡ್ಡವರಾಗಿ ಕಾನೂನಿನ ಪಾಲನೆ ಮಾಡುತ್ತಾರೆ ಎಂದರು.

ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಜವಾಬ್ದಾರಿ, ಕಾನೂನಿನ ಅರಿವು ಹೊಂದಬೇಕು. ಎಲ್ಲರಿಗೂ ಕಾನೂನುಗಳ ಅರಿವು ಅಗತ್ಯವಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಕಾನೂನು ಅರಿವು ಹೊಂದಿದ್ದಲ್ಲಿ ಕಾನೂನಾತ್ಮಕವಾಗಿ ಉಂಟಾಗುವ ಅನೇಕ ಸಮಸ್ಯೆಗಳು, ತೊಡಕುಗಳು ಇಲ್ಲವಾಗುತ್ತವೆ. ಕಾನೂನಿನ ತಿಳಿವಳಿಕೆ ಜಾಗೃತಗೊಳಿಸಿ ಅಪರಾಧ ಮಾಡದಂತೆ ಎಚ್ಚರಿಸುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳು ಮಾತ್ರವಲ್ಲ. ನಗರ ಪ್ರದೇಶಗಳಲ್ಲಿಯೂ ಕಾನೂನು ತಿಳಿವಳಿಕೆ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಜನರು, ಅದರಲ್ಲೂ ಮಹಿಳೆಯರು, ವೃದ್ಧರು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅವಕಾಶಗಳಿಂದ ವಂಚಿತರಾಗಿ ಕಟ್ಟಕಡೆ ಯಲ್ಲಿ ಬದುಕುತ್ತಿರುವ ಜನರನ್ನು ಮೇಲೆತ್ತಲು ಕಾನೂನು ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ದತ್ತಾತ್ರೇಯ ಕುಲಕರ್ಣಿ ಮಾತನಾಡಿ, ಎಲ್ಲರೂ ಆತ್ಮಗೌರವದಿಂದ ಬದುಕು ನಡೆಸಲು ಸಂವಿಧಾನ ಅವಕಾಶ ನೀಡಿದೆ. ಸಮಾಜದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕಾನೂನಿನ ಅರಿವಿರಬೇಕೆಂಬ ಮಹತ್ವದ ಆಶಯ ಹೊಂದಿ ಕಾನೂನು ಅರಿವು ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸಲಾಗುತ್ತಿದೆ ಎಂದರು.

Advertisement

ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಕೋಲೆ, ವೆಂಕಟೇಶ ಚಿನ್ನೂರ್‌, ಪೂಜಪ್ಪ ಮೇತ್ರೆ, ಶಿವಲೀಲಾ ಸುಣಗಾರ, ಅರುಣ ಸುಲದವರಮ್‌ ಎಂ. ಅನಿತಾ, ಮಂಗಲಾ, ಸಾಯಬಣ್ಣ, ಪೊಲೀಸ್‌ ಸಿಬ್ಬಂದಿ ಹುಸೇನ್‌ ಪಾಷಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next