Advertisement

ಗಡಿ ರೇಖೆ ಪ್ರಾಂತ್ಯದಲ್ಲಿ ನೆಮ್ಮದಿ

01:51 AM Mar 26, 2021 | Team Udayavani |

ಹೊಸದಿಲ್ಲಿ:  ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಶಾಂತಿಯುತ ಪರಿಸ್ಥಿತಿ ಇದೆ. ಹಾಲಿ ತಿಂಗಳಲ್ಲಿ ಒಂದೇ ಒಂದು ಗುಂಡು ಹಾರಾಟ ನಡೆಸಲಾಗಿಲ್ಲ ಎಂದು ಭೂಸೇನೆ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಹೇಳಿದ್ದಾರೆ.

Advertisement

ಗುರುವಾರ ಹೊಸದಿಲ್ಲಿಯಲ್ಲಿ ನಡೆದ “ಇಂಡಿಯಾ ಇಕನಾಮಿಕ್‌ ಕಾಂಕ್ಲೇವ್‌’ ನಲ್ಲಿ ಅವರು ಮಾತನಾಡಿದರು. ಪಾಕಿಸ್ಥಾನ ನಿಯಂತ್ರಣದಲ್ಲಿರುವ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡುವ ಮೂಲಸೌಕರ್ಯಗಳಲ್ಲಿ ಬದಲಾವಣೆಯಾಗಿಲ್ಲ. ಪಾಕಿಸ್ಥಾನ ಉಗ್ರ ಗಾಮಿಗಳಿಗೆ ನೆರವು ನೀಡುವುದನ್ನು ನಿಲ್ಲಿಸದೆ ಯಥಾಸ್ಥಿತಿ ಕಾಪಾಡುವುದು ಸಾಧ್ಯವೇ ಇಲ್ಲ. ಏಕಾಏಕಿ ಕದನ ವಿರಾಮಕ್ಕೆ ಪಾಕ್‌ ಒಪ್ಪಿಕೊ ಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆಯ ದೇಶದ ‌ ಒತ್ತಡಗಳಿಂದ ಈ ನಿರ್ಧಾರಕ್ಕೆ ಬಂದಿರ ಬಹುದು ಎಂದರು.

ಚೀನ ವಶವಿಲ್ಲ: ದೇಶದ ಒಂದೇ ಒಂದು ಅಂಗುಲ ನೆಲವೂ ಈಗ ಚೀನದ ವಶದಲ್ಲಿಲ್ಲ. ಗಾಲ್ವನ್‌ ಕಣಿವೆಯಿಂದ ಯೋಧರನ್ನು ವಾಪಸ್‌ ಕರೆಯಿಸಿಕೊಳ್ಳುತ್ತಿರುವ ಕಾರ್ಯ ಪ್ರಗತಿಯಲ್ಲಿದೆ ಎಂದರು ಭೂಸೇನಾ ಮುಖ್ಯಸ್ಥ. ಎಲ್‌ಎಸಿ ಬಗ್ಗೆ ಸದ್ಯ ಇರುವ ಒಪ್ಪಂದಗಳನ್ನು ಚೀನ ಪಾಲಿಸುವ ವಿಶ್ವಾಸವಿದೆ ಎಂದಿದ್ದಾರೆ.

ಕೇಂದ್ರದ ಜತೆಗೆ ಚರ್ಚೆ:  ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ­ಗೊಳಿಸುವ ಬಗ್ಗೆ ಕೇಂದ್ರದ ಜತೆಗೆ ಚರ್ಚಿಸ ಲಾಗುತ್ತದೆ. ಕೊರೊನಾದಿಂದಾಗಿ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುವತ್ತ ಸಾಗಿದೆ. ದೇಶ ದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಕಳವಳಕಾರಿ. ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುವ ಲಕ್ಷಣಗಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next