Advertisement

ಧರ್ಮದಿಂದಲೇ ಶಾಂತಿ-ಸುಖ

10:45 AM Jul 07, 2019 | Vishnu Das |

ಪ್ರಪಂಚದಲ್ಲಿ ಎಷ್ಟೋ ಮತಗಳಿವೆ. ಅವುಗಳಲ್ಲೆಲ್ಲ ಹಿಂದೂ ಮತವೆಂದು ಪ್ರಸಿದ್ಧವಾಗಿರುವ ಸನಾತನ ಧರ್ಮವು ಶ್ರೇಷ್ಠವಾದುದು.ಸರ್ವ ಮಾನವರ ಭ್ರಾತೃತ್ವ, ಸರ್ವ ಪ್ರಾಣಿಗಳಲ್ಲೂ ದಯಾಪರತೆ ಎಂಬ ವಿಸ್ತೃ ತವಾದ ಸಿದ್ಧಾಂತದ ಮೇಲೆ ನಿಂತಿರುವ ಈ ಧರ್ಮವೊಂದೇ ಮಾನವ ಸೃಷ್ಟಿ ಇರುವವರೆಗೆ ಇರಬಲ್ಲದು.

Advertisement

ಪರಧರ್ಮದವರ ಅನೇಕ ವಿಧವಾದ ಆಕ್ರಮಣಗಳನ್ನು ಸಹಿಸಿಕೊಂಡು ನಿಂತಿರುವ ಈ ಧರ್ಮಕ್ಕೆ ಎಂದಿಗೂ ಚ್ಯುತಿ ಇಲ್ಲ ಎಂದು ಮಹಾಪುರುಷ‌ರೊಬ್ಬರು ನುಡಿದಿದ್ದಾರೆ. ಇಂದು ಅನೇಕರ ಮನಸ್ಸುಗಳನ್ನು ಸಮಸ್ಯೆಯೊಂದು ಪೀಡಿಸುತ್ತಿದೆ. ಅದೇನೆಂದರೆ,ಇಂದಿನ ಕಾಲಗತಿಯನ್ನು ನೋಡುತ್ತಿದ್ದರೆೆ, ಜನರಲ್ಲಿ ಧರ್ಮದ ವಿಚಾರದಲ್ಲಿ ವಿಮುಖತೆ ಜಾಸ್ತಿ ಯಾ ಗು ತ್ತಿದೆ. ಪರಧರ್ಮದವರ ಪ್ರಚಾರಗಳು ಹೆಚ್ಚುತ್ತಿವೆ. ಈ ಸ್ಥಿತಿಯಲ್ಲಿ ಸನಾತನ ಧರ್ಮವು ಇನ್ನೂ ಎಷ್ಟು$ದಿನಗಳು ಇರಬಲ್ಲದು?-ಈ ಪ್ರಶ್ನೆಗೆ ಆ ಮಹಾಪುರುಷನ ಮಾತುಗಳಲ್ಲೇ ಉತ್ತರವಿದೆ. “ಋಷಿಣಾಂ ಪುನರಾಧ್ಯಾನಾಂ ವಾಚ ಮಥೋìನುಧಾವತಿ’ ಎಂದು ಪ್ರಾಚೀನರು ಹೇಳಿದ್ದಾರೆ. “ಮಹಾತ್ಮರ ಮಾತು ನಿಶ್ಚಯವಾಗಿಯೂ ಫ‌ಲಿಸುತ್ತದೆ’ ಎಂದು ಅದರ ಅರ್ಥ.
ಇಹಲೋಕದಲ್ಲೂ, ಪರಲೋಕದಲ್ಲೂ ಮಾನವನನ್ನು ರಕ್ಷಿಸುವುದು ಧರ್ಮ.ಶಾಂತಿ-ಸುಖಗಳನ್ನು ಕೊಡುವುದು ಧರ್ಮದಿಂದ ಮಾತ್ರವೇ ಸಾಧ್ಯ.”ಧರ್ಮ’ ಎಂದರೇನು? “ಧರ್ಮಾಚರಣೆ’ಎಂದರೇನು? - ಎಂಬುದು ಬಹಳ ಜನರಿಗೆ ಗೊತ್ತಿಲ್ಲ.ಶಾಶ್ವತವಾಗಿ ಶಾಂತಿ- ಸುಖಗಳನ್ನು ಕೊಡುವುದೇ ಧರ್ಮ.ಆ ಧರ್ಮಕ್ಕೆ ಅನುಗುಣವಾದ ಎಲ್ಲಾ ಕಾರ್ಯಗಳೂ ಧರ್ಮವೇ. ಯಾವುದು ಧರ್ಮ? ಯಾವುದು ಧರ್ಮವಲ್ಲ?-ಎಂಬ ವಿಷಯವನ್ನು ವೇದ ನಿರ್ಣಯಿಸಿದೆ. ಧರ್ಮ ಸ್ವರೂಪವನ್ನು ನಿರ್ಣಯಿಸುವ ಪರಮ ಪ್ರಮಾಣ ವೇದ. ಸೂರ್ಯನ ಬೆಳಕು ಇದ್ದರೆ, ಯಾವ ವಸ್ತುವನ್ನಾಗಲಿ ನೋಡಲು ಅನ್ಯ ದೀಪದ ಅವಶ್ಯಕತೆ ಇರುವುದಿಲ್ಲ. ವೇದಗಳಿಗಿರುವ ಪ್ರಾಮಾಣ್ಯ ಅಂಥದ್ದು.

ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next