Advertisement

ಅಭಿವೃದ್ಧಿಗೆ ಪಿಡಿಒಗಳು ಶ್ರಮಿಸಲಿ

03:53 PM Jun 29, 2018 | |

ಚನ್ನಗಿರಿ: ಗ್ರಾಪಂ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಪಿಡಿಒಗಳಿಗೆ ಸೂಚನೆ ನೀಡಿದರು.

Advertisement

ತಾಪಂ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಗ್ರಾಮ ಪಂಚಾಯತ್‌ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ವಾಸವಾಗಿರಬೇಕೆಂದು ಸರ್ಕಾರದ ಆದೇಶ ಇದ್ದರೂ ತಾಲೂಕಿನ ಯಾವುದೇ ಪಿಡಿಒ
ಕೇಂದ್ರಸ್ಥಾನದಲ್ಲಿ ವಾಸ ಆಗಿಲ್ಲ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಗಂಭೀರ ಆರೋಪ ಮಾಡಿದರು.

ಅಧಿಕಾರ ವಿಕೇಂದ್ರೀಕರಣದಿಂದಾಗಿ ಗ್ರಾಪಂ ಕಾರ್ಯ ಅತಿ ಮಹತ್ವ ಪಡೆದಿದೆ. ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳೇ ಸುಪ್ರೀಮ್‌ ಪವರ್‌ ಇದ್ದಂತೆ. ಆದರೆ ಯಾವೊಬ್ಬ ಪಿಡಿಒ ಕೂಡ ಇರುವ ಅಧಿಕಾರ ಸಮರ್ಪಕವಾಗಿ ಬಳಸಿಕೊಳ್ಳತ್ತಿಲ್ಲ. ಬದಲು ಕಚೇರಿಗೆ ಬಾರದೇ ಬೇಕಾಬಿಟ್ಟಿ ತಿರುಗಾಡುತ್ತಾರೆ ಎಂಬ ದೂರು ಇದೆ. ಜನಸ್ನೇಹಿಗಳಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿದ್ಯುತ್‌, ಸ್ಪತ್ಛತೆ ಬಗ್ಗೆ ಸಾಕಷ್ಟು ದೂರುಗಳಿದ್ದು, ಮೊದಲು ಅವುಗಳಿಗೆ ಆದ್ಯತೆ ಕೊಡಬೇಕಿದೆ. ಒಂದು ಹಳ್ಳಿ ಸೇರಿದಂತೆ ಒಂದು ಗ್ರಾಪಂ ಅಭಿವೃದ್ಧಿ ಕಾಣಬೇಕಾದರೆ ಪಿಡಿಒ ಪಾತ್ರ ಮುಖ್ಯ. ಸರ್ಕಾರ ನಿಮ್ಮನ್ನು ನಂಬಿದ ಹಾಗೆಯೇ ಜನಪ್ರತಿನಿಧಿಗಳು ನಿಮ್ಮನ್ನು ನಂಬಿರುತ್ತಾರೆ. ಅವರ ವಿಶ್ವಾಸಕ್ಕೆ ದ್ರೊಹ ಬಗೆಯದೆ ಕಾರ್ಯ ನಿರ್ವಹಿಸಿ ಎಂದರು.

ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಅಧಿ ಕಾರಿಗಳ ಬೇಜವಾಬ್ದಾರಿತನದಿಂದ ನಿರಂತರ ಜ್ಯೋತಿಯ 400 ಕೋಟಿ ಹಣ ಮಣ್ಣುಪಾಲಾಯಿತು. ಈಗ ದೀನದಯಾಳ್‌ ಉಪಾಧ್ಯೆ ಯೋಜನೆಯಡಿ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲು ತಾಲೂಕಿಗೆ 150 ಕೋಟಿ ಅನುದಾನ ಬಂದಿದೆ. ಅರ್ಹ ಫಲಾನುಭವಿಗೆ ಯೋಜನೆ ತಲುಪಬೇಕು. 

Advertisement

ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಧೈರ್ಯವಾಗಿ ಬಿಟ್ಟು ಹೋಗಿ. ಬೇಸಿಗೆ ಬರುವುದರೊಳಗೆ ಎಲ್ಲರೂ ಸಕ್ರಿಯರಾಗಿ ಎಂದು ಎಚ್ಚರಿಕೆ ನೀಡಿದರು. ಈ.ಓ. ಪ್ರಕಾಶ್‌, ತಾಪಂ ಉಪಾಧ್ಯಕ್ಷ ಕುಮಾರನಾಯ್ಕ, ಎಇಇ ಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next