Advertisement
ರಾಜ್ಯದ 5,950 ಗ್ರಾ.ಪಂ.ಗಳ ಪೈಕಿ ಮಂಜೂರಾದ 5,954 ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಳಲ್ಲಿ 866 ಹುದ್ದೆಗಳು ಖಾಲಿ ಇವೆ. ಗ್ರಾ.ಪಂ. ಕಾರ್ಯದರ್ಶಿ (ಗ್ರೇಡ್ 1) 2,127 ಹುದ್ದೆಗಳ ಪೈಕಿ 491 ಹಾಗೂ ಗ್ರಾ.ಪಂ. ಕಾರ್ಯದರ್ಶಿ (ಗ್ರೇಡ್ 2) 3,827 ಹುದ್ದೆಗಳ ಪೈಕಿ 641 ಹುದ್ದೆ ಖಾಲಿ ಇವೆ.ದಕ್ಷಿಣ ಕನ್ನಡದಲ್ಲಿ ಮಂಜೂರಾಗಿರುವ 223 ಪಿಡಿಒ ಹುದ್ದೆಗಳ ಪೈಕಿ 57 ಪಿಡಿಒ ಹುದ್ದೆಗಳು ಖಾಲಿ ಇದ್ದು, ರಾಜ್ಯ ಮಟ್ಟದಲ್ಲಿ ಅತ್ಯಧಿಕ ಹುದ್ದೆಗಳು ಖಾಲಿ ಇರುವ ಟಾಪ್ ಐದು ಜಿಲ್ಲೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಜೂರಾಗಿರುವ 61 ಪಂಚಾಯತ್ ಕಾರ್ಯದರ್ಶಿ ಗ್ರೇಡ್ 1 ಹುದ್ದೆಗಳಲ್ಲಿ 16 ಹುದ್ದೆಗಳು ಖಾಲಿ ಇವೆ. ಹಾಗೆಯೇ 161 ಪಂಚಾಯತ್ ಕಾರ್ಯದರ್ಶಿ ಗ್ರೇಡ್ 2 ಹುದ್ದೆಗಳಲ್ಲಿ 36 ಖಾಲಿ ಇದ್ದು, ಹೆಚ್ಚು ಖಾಲಿ ಇರುವ 5 ಜಿಲ್ಲೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಖಾಲಿ ಇರುವ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸಮೀಪದಲ್ಲಿರುವ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ/ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್ 1 ವೃಂದದ ನೌಕರರಿಗೆ ಪ್ರಭಾರ ವಹಿಸಲಾಗಿದೆ. ಗ್ರಾ.ಪಂ. ಕಾರ್ಯನಿರ್ವಹಣೆಗೆ “ಕೈಪಿಡಿ’ ರೆಡಿ!
ಗ್ರಾ.ಪಂ.ಗಳಲ್ಲಿ ಕಚೇರಿ ನಿರ್ವಹಣೆ ಹೇಗೆ ನಡೆಸಬೇಕು ಎಂಬ ಬಗ್ಗೆ ಅಧಿಕೃತ ಸೂಚನೆಗಳು ಇರಲಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆಯ ಪ್ರಕಾರ ಹಾಗೂ ನಡೆದು ಬಂದ ಕ್ರಮದಂತೆ ಕಚೇರಿ ನಿರ್ವಹಣೆ ಆಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ಟಿಪ್ಪಣಿ ಬರೆಯುವುದು ಯಾರು, ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಕೆಲವರನ್ನು ಕಾಡುತ್ತಿದ್ದವು. ಇದನ್ನು ಮನಗಂಡ ಪಂಚಾಯತ್ರಾಜ್ ಇಲಾಖೆಯು ಹೊಸದಾಗಿ “ಗ್ರಾಮ ಪಂಚಾಯತ್ ಕಚೇರಿ ಕಾರ್ಯವಿಧಾನ ಕೈಪಿಡಿ’ ಸಿದ್ಧಪಡಿಸಿದೆ. ಇದರಲ್ಲಿ ಪಂಚಾಯತ್ನ ವಿವಿಧ ಸ್ತರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪಾತ್ರದ ಬಗ್ಗೆ ವಿವರವಾದ ಉಲ್ಲೇಖವಿದೆ. ಸದ್ಯ ಕೈಪಿಡಿಯ ಕರಡು ಅಧಿಸೂಚನೆ ಆಗಿದ್ದು, ಆಕ್ಷೇಪಗಳನ್ನು ಆಲಿಸಿ ಹೊಸ ಅಧಿಸೂಚನೆ ಬರಲಿದೆ.
Related Articles
Advertisement
ಮೂಲ ಸೌಕರ್ಯಗಳಾದ ನೀರು, ಬೀದಿದೀಪ, ಚರಂಡಿ ಸ್ವತ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ಪರವಾನಿಗೆ, ಮನೆ ನಂಬರ್, 9/11, ನರೇಗಾ ಯೋಜನೆಯಡಿ ಉದ್ಯೋಗ ಇತ್ಯಾದಿ ಸೌಲಭ್ಯ ನೀಡುವುದರೊಂದಿಗೆ, ಗ್ರಾಮ ಮತ್ತು ಪಂಚಾಯತ್ ಮಟ್ಟದ ಶಿಕ್ಷಣ ಪಡೆ, ಆರೋಗ್ಯ ನೈರ್ಮಲ್ಯ ಸಮಿತಿ ಸಹಿತ ವಿವಿಧ ಕಾರ್ಯಗಳನ್ನು ಪಂಚಾಯತ್ನ ಅಧಿಕಾರಿಗಳು ನಡೆಸಬೇಕಿದೆ. ಆದರೆ ಹಲವು ಪಂಚಾಯತ್ನಲ್ಲಿ ಮುಖ್ಯ ಸ್ತರದ ಅಧಿಕಾರಿಗಳೇ ಇಲ್ಲದೆ ಈ ಸೌಲಭ್ಯ ವ್ಯತ್ಯಯವಾಗುತ್ತಿದೆ. ಕೆಲವು ಪಂಚಾಯತ್ಗಳಲ್ಲಿ ಪ್ರಭಾರ ನಿಯೋಜನೆ ಇದ್ದರೂ ಕೆಲಸದ ಒತ್ತಡದಿಂದ ಜನಸಾಮಾನ್ಯರ ಕೆಲಸಕ್ಕೆ ಅಲ್ಲಿಯೂ ತೊಡಕು ತಪ್ಪಿಲ್ಲ!
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕಕ್ಕೆ ಸಂಬಂಧಿಸಿ ಬಹು ಸಮಯದ ಬಳಿಕ ಇದೇ ಮೊದಲ ಬಾರಿಗೆ ಲೋಕಸೇವಾ ಅಯೋಗದಿಂದ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಇದು ಅಂತಿಮವಾಗಿ ನೇಮಕಾತಿ ನಡೆಯಲಿದೆ. ಉಳಿದ ಹುದ್ದೆಗಳ ನೇಮಕವನ್ನು ನಿಯಮಗಳ ಅನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸರಕಾರದಿಂದ ನಿರ್ದೇಶನ ಇದೆ.ಡಾ| ಆನಂದ್ ಕೆ.,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ದಿನೇಶ್ ಇರಾ