Advertisement

ಸೀಮೆಎಣ್ಣೆಗೆ ಹಣ ಸುಲಿಗೆ ಮಾಡಿದ ಪಿಡಿಒ

12:46 PM Apr 18, 2017 | Team Udayavani |

ಎಚ್‌.ಡಿ.ಕೋಟೆ: ನನ್ನ ಬಳಿ ಇನ್ನೂರು ರೂ ಇಲ್ಲ ಅಂದದ್ದಕ್ಕೆ ಮತ್ತೆ 3 ಕಿಮೀ ಅಂತರದಲ್ಲಿರುವ ನನ್ನ ಸ್ವಗ್ರಾಮಕ್ಕೆ ಹೋಗಿ ಹಣ ತಂದು ಪಾವತಿಸಿ ಕೊಂಡರು. ನಾನೂ ಅಷ್ಟೇ ನನ್ನ ಬಳಿ ಹಣ ಇಲ್ಲದೆ ನನ್ನ ಮೊಬೈಲ್‌ ಗಿರಿವಿ ಇಟ್ಟು 200ರೂ ಪಾವತಿಸಿದ್ದೇನೆ.

Advertisement

ಇದು ಎಚ್‌.ಡಿ. ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಜಿಯಾರ ಆಸುಪಾಸಿನ ಗ್ರಾಮಸ್ಥರ ಆರೋಪ. ಇತ್ತೀಚೆಗೆ ಸರ್ಕಾರ ಪಡಿತರ ಸೀಮೆಎಣ್ಣೆ ವಿತರಣೆ ಸ್ಥತಗಿತೊಳಿಸಿದ ಹಿನ್ನೆಲೆ ಆಹಾರ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೀಮೆಎಣ್ಣೆ ಬೇಕಾದ ಪಡಿತರದಾರರು ಆಯಾ ಗ್ರಾ ಪಂ ಗಳಲ್ಲಿ ಹೆಸರು ನೋಂದಣಿ ಮಾಡಿಸಬೇಕು ಎಂದು ತಿಳಿಸಿದೆ.

ಹೆಸರು ನೋಂದಣಿಗೆ ಯಾವುದೇ ಶುಲ್ಕ ಪಾವತಿಸು ವಂತಿಲ್ಲ. ಆದರೆ ಹಿರೇಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್‌ ಆದೇಶ ದಂತೆ ಪ್ರತಿಯೊಬ್ಬ ಸೀಮೆಎಣ್ಣೆಗೆ ಹೆಸರು ನೋಂದಣಿ ಮಾಡುವ ಮಂದಿ ತಲಾ 200 ರೂ. ಪಾವತಿ ಸಲೇ ಬೇಕೆಂದು ಪಟ್ಟು ಹಿಡಿದ ಹಿನ್ನೆಲೆ ಕೂಲಿ ಕಾರ್ಮಿಕರು 200 ರೂ ಪಾವತಿಸಿದ್ದಾರೆ.

ಹಣ ಪಡೆದುಕೊಳ್ಳಲು ಯಾವ ಮೇಲಧಿ ಕಾರಿಗಳೂ ಆದೇಶ ನೀಡದೆ ಇದ್ದರೂ ಪಿಡಿಒ ಮಾತ್ರ ಪಂಚಾಯಿತಿ ಮೊಹರೇ ಇಲ್ಲದ ಹಲವು ರಶೀದಿಗಳನ್ನು ನೀಡಿ ರಶೀದಿಯಲ್ಲಿ ಖಾತೆ ನಂಬರ್‌ ಕೂಡ ನಮೂದಿಸದೇ ಸೀಮೆಎಣ್ಣೆಗಾಗಿ ಅನ್ನುವ ಕಾರಣದಿಂದ ಕೂಲಿ ಕಾರ್ಮಿಕರಿಂದ ತಲಾ 200ರೂ ವಸೂಲಾತಿ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಘಟನೆ ಕುರಿತು ಗ್ರಾಮಸ್ಥರು ಉದಯವಾಣಿಗೆ ದೂರು ಹೇಳಿಕೊಂಡು ರಶೀದಿ ಹಾಜರುಪಡಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಬಯಸಿದ ಉದಯವಾಣಿಗೆ ಆರಂಭದಲ್ಲಿ ಪಿಡಿಒ ರಮೇಶ್‌ ಸಬೂಬು ಹೇಳಿ ಕಾನೂನು ಬದ್ಧವಾಗಿಯೇ ಮಾಡಿರುವು ದಾಗಿಯೂ ಸಾರ್ವಜನಿಕರಿಂದ ಕಂದಾಯವಾಗಿ ತಲಾ 200ರೂ ಪಡೆದುಕೊಂಡಿರುವುದಾಗಿ ಹಾರಿಕೆ ಉತ್ತರ ನೀಡಿದರು. 

Advertisement

ಅಷ್ಟೇ ಅಲ್ಲದೇ ಕೇವಲ ಒಬ್ಬರ ರಶೀದಿ ಯಲ್ಲಿ ಗ್ರಾಪಂ ಮೊಹರು ನಮೂದಿಸಿಲ್ಲ ಉಳಿದ ಎಲ್ಲಾ ರಶೀದಿಗಳಿಗೂ ನಮೂದಿಸಿದೆ ಅನ್ನುವ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಗ್ರಾಮಸ್ಥರು ತಮ್ಮಲ್ಲಿದ್ದ ನೂರಾರು ಮೊಹರು ರಹಿತ ರಶೀದಿ ತೋರಿಸುತ್ತಿದ್ದಂತೆಯೇ ತಪ್ಪಾಗಿದೆ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ. ಅಲ್ಲದೆ ಈಗ ಪಾವತಿಸಿರುವ 200 ರೂಪಾಯಿಗಳನ್ನು ಕಂದಾಯಕ್ಕೆ ಜಮಾ ಗೊಳಿಸಿಕೊಳ್ಳುವುದಾಗಿ ಪ್ರತಿಕ್ರಿಯೆ ನೀಡಿದರು.

ಒಟ್ಟಾರೆ ಯಾವುದೇ ಸರ್ಕಾರಿ ಅದೇಶ ಇಲ್ಲದೆ ಯಾವ ಹಿರಿಯ ಅಧಿಕಾರಿಗಳ ಆದೇಶ ಇಲ್ಲದೆ ಉಚಿತವಾಗಿ ಹೆಸರು ನಮೂದಿÓ ‌ಬೇಕಾದ ಸೀಮೆಎಣ್ಣೆಗೆ  ಕೂಲಿ ಕಾರ್ಮಿಕರಿಂದ ತಲಾ 200ರೂ ಪಡೆದು ಕೊಂಡಿರುವ ಪಿಡಿಒ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಯಾರ ಹಾಗೂ ಆಸುಪಾಸಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಪ್ಪಿದರೆ ಮುಂದಿನ ದಿನಗಳಲ್ಲಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಪಂಚಾಯ್ತಿಗೆ ಮುತ್ತಿಗೆ: ಪಂಚಾಯಿತಿ ಯವರು ಹಣ ಪಡೆದುಕೊಂಡು ನೀಡಿದ್ದ 200ರೂ ರಶೀದಿ ಸಮೇತ ಗ್ರಾಪಂಗೆ ಮುತ್ತಿಗೆ ಹಾಕಿದ ಜಿಯಾರ ಗ್ರಾಮಸ್ಥರು ಪಿಡಿಒ ರಮೇಶ ವಿರುದ್ಧ ಮಾತಿನ ವಾಗ್ಧಾಳಿ ನಡೆಸಿದರು. ಬಡಜನರಿಂದ ಹಣ ಪಡೆದುಕೊಂಡಿರುವ ಕ್ರಮವನ್ನು ವಿರೋಧಿಸಿದರು.  ಕೂಡಲೆ ಪಡೆದುಕೊಂಡಿರುವ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರು.

ಅಷ್ಟೇ ಅಲ್ಲದೆ ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಜಮೀನು ಇಲ್ಲದ ಮಹಿಳೆ ಯರಿಂದಲೂ ಸೀಮೆಎಣ್ಣೆಗಾಗಿ 200 ರೂ ಪಡೆದುಕೊಂಡಿರುವುದಕ್ಕೆ ವಿರೋಧ ವ್ಯಕ್ಯಪಡಿಸಿದರು. ಹಣ ಇಲ್ಲ ಅಂದರೂ ಬಲವಂತದಿಂದ ಹಣ ವಸೂಲಿ ಮಾಡಿ ನಕಲಿ ಬಿಲ್‌ ನೀಡಿರುವ ಪಿಡಿಒ ವಿರುದ್ಧ ಗ್ರಾಮಸ್ಥರು ತೀವ್ರವಾಗಿ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next