Advertisement

ಜಲಕ್ಷಾಮಕ್ಕೆ ಪಿಡಿಒಗಳೇ ಹೊಣೆ: ನಾಡಗೌಡ

05:44 PM Mar 07, 2021 | Team Udayavani |

ಸಿಂಧನೂರು: ನೀರಾವರಿ ಇಲಾಖೆ ಅಧಿಕಾರಿಗಳು ಮೊದಲು ಕೆರೆಗಳಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು. ಆ ನಂತರದಲ್ಲಿ ಪಿಡಿಒಗಳು ಎಚ್ಚೆತ್ತುಕೊಳ್ಳಬೇಕು. ಯಾರೇ ತಪ್ಪು ಮಾಡಿದರೂ ನೀರಿನ ಅಭಾವ ತಲೆದೋರಿದರೆ, ಅವರ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಎಚ್ಚರಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ಸಂಬಂಧ ಶನಿವಾರ ಕರೆದಿದ್ದ ಗ್ರಾಪಂ ಪಿಡಿಒಗಳು ಹಾಗೂ ಗ್ರಾಪಂ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ಎಡದಂಡೆ ಕಾಲುವೆಗೆ ಮಾರ್ಚ್‌ 31ರತನಕ ಮಾತ್ರ ನೀರು ಸರಬರಾಜು ಮಾಡಲಾಗುತ್ತದೆ. ಅದಕ್ಕೂ ಮೊದಲು ಕುಡಿವ ನೀರಿನ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಕುಡಿವ ನೀರಿನ ಕೆರೆಗಳನ್ನು ಮಾರ್ಚ್‌ 20ರೊಳಗೆ ಭರ್ತಿ ಮಾಡಬೇಕು.ಎರಡ್ಮೂರು ದಿನಗಳಲ್ಲಿ ಇರುವ ನೀರನ್ನು ಖಾಲಿ ಮಾಡಿ, ಕೆರೆಗಳನ್ನು ಸ್ವತ್ಛಗೊಳಿಸಬೇಕು. ಖುದ್ದು ಅ ಧಿಕಾರಿಗಳು ಸ್ಥಳದಲ್ಲಿದ್ದು ಈ ಕೆಲಸವನ್ನು ನಿಭಾಯಿಸಬೇಕು ಎಂದರು.

ಅಧಿಕಾರಿಗಳಿಗೆ ಚಾಟಿ: ಗ್ರಾಪಂ ವಾರು ಸಮಸ್ಯೆಯ ಮೇಲೆ ಚರ್ಚಿಸುತ್ತಿದ್ದ ಶಾಸಕರು, ಪಿಡಿಒಗಳ ಹಾಜರಾತಿಯನ್ನು ತಾವೇ ಪಡೆದರು. ಈ ಹಂತದಲ್ಲಿ ಕೆಲವು ಪಿಡಿಒಗಳು ಸಭೆಯಲ್ಲಿ ಇಲ್ಲದಿರುವುದನ್ನು ಕಂಡ ಆಕ್ಷೇಪಿಸಿದರು. 32ನೇ ಉಪಕಾಲುವೆಗೆ ಸಂಬಂಧಿ ಸಿ ಕಾರಟಗಿ ಉಪವಿಭಾಗದ ಎಇಇ ಸೂಗಪ್ಪ ಅವರನ್ನು ಕರೆದಾಗ ಸಭೆಯಲ್ಲಿ ಇರಲಿಲ್ಲ. ಸಿಟ್ಟಿಗೆದ್ದ ಶಾಸಕರು ನಾನು ಬೆಂಗಳೂರಿನಲ್ಲಿ ಅ ಧಿವೇಶನ ಬಿಟ್ಟು ನೀರಿನ ಕಾರಣಕ್ಕೆ ಇಲ್ಲಿಗೆ ಬಂದಿರುವೆ. ಅ ಧಿಕಾರಿಗಳಿಗೆ ವಿಷಯ ಗೊತ್ತಾದ ಮೇಲೂ ಬಂದಿಲ್ಲವೆಂದರೆ ಹೇಗೆ? ಏನ್‌ ಹುಡುಗಾಟ  ಆಡುತ್ತಿದ್ದೀರಾ? ಎಂದು ಕಿಡಿಕಾರಿದರು. ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲವೇ ಎಂದು ಅ ಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ಪಿಕಪ್‌ ಬಂದ್‌ ಮಾಡಲ್ಲ: ಸೋಮಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವೆಂಕಟೇಶ್ವರ ಕ್ಯಾಂಪಿನ ಕುಡಿವ ನೀರಿನ ಕೆರೆ ತುಂಬಿಸಬೇಕಿದ್ದು, ಇದಕ್ಕಾಗಿ ಗೋರೆಬಾಳ ಪಿಕಪ್‌ ಬಂದ್‌ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಪಂ ಅಧ್ಯಕ್ಷ ಸೀತಾರಾಮರೆಡ್ಡಿ, ಪಿಡಿಒ ಅಮರಗುಂಡಪ್ಪ ಅವರು ಮನವಿ ಮಾಡಿದರು.

ಕನಿಷ್ಠ 5 ದಿನ ಈ ವ್ಯವಸ್ಥೆ ಮಾಡಿದರೆ, ಕೆರೆಗಳನ್ನು ತುಂಬಿಸಲು ಅನುಕೂಲವಾಗುತ್ತದೆ ಎಂದಾಗ ಶಾಸಕರು ಒಪ್ಪಲಿಲ್ಲ. ಐದು ದಿನಗಳ ಕಾಲ ಪಿಕಪ್‌ ಬಂದ್‌ ಮಾಡಿದ್ರೆ, ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸುತ್ತಾರೆ. ಒಂದು ದಿನ ಬೇಕಾದರೆ ಬಂದ್‌ ಮಾಡಿಸಿ ಕೊಡಲಾಗುವುದು ಎಂದರು.

Advertisement

ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ತಾಪಂ ಇಒ ಪವನಕುಮಾರ್‌, ಸಿಪಿಐ ಜಿ.ಚಂದ್ರಶೇಖರ ಸೇರಿದಂತೆ ಜಿಪಂ, ಗ್ರಾಮೀಣ ಕುಡಿವ ನೀರು, ಜೆಸ್ಕಾಂ ಸೇರಿದಂತೆ ಇತರೆ ಇಲಾಖೆ ಅ ಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next